This is the title of the web page
This is the title of the web page

Please assign a menu to the primary menu location under menu

State

ಡಾ ಫ.ಗು.ಹಳಕಟ್ಟಿ ಜಯಂತಿ: ಪುಷ್ಪನಮನ ಸಲ್ಲಿಕೆ


ಕೊಪ್ಪಳ ಜುಲೈ 02 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜುಲೈ 02ರಂದು ಜಿಲ್ಲಾ ಮಟ್ಟದ ಡಾ ಫ.ಗು.ಹಳಕಟ್ಟಿ ಜಯಂತಿ ಆಚರಿಸಲಾಯಿತು.

ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಡಾ ಫ.ಗು.ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಸಮಾಜದಲ್ಲಿರುವ ಎಲ್ಲ ಸಮಸ್ಯೆಗಳಿಗೆ ವಚನಗಳಲ್ಲಿ ಪರಿಹಾರವಿದೆ. ಅಂತಹ ವಚನಗಳನ್ನು ಮಕ್ಕಳಿಗೆ ಹೇಳಿಕೊಡಬೇಕು.
ಕಾನೂನಿನಿಂದ ಒಬ್ಬ ವ್ಯಕ್ತಿಗೆ ಶಿಕ್ಷೆ ಕೊಡಬಹುದು. ಆದರೆ ಮನಸ್ಸನ್ನು ಪರಿವರ್ತನೆ ಮಾಡಲು ಸಾಧ್ಯವಿಲ್ಲ. ಅದು ವಚನಗಳಿಂದ ಮಾತ್ರ ಸಾಧ್ಯ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ವಚನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರಡಿ ನಮಗೆ ಸಿ.ಆರ್.ಪಿ.ಸಿ., ಸಿಪಿಸಿ, ಐಪಿಸಿ ಹೀಗೆ ಹಲವಾರು ಕಾಯ್ದೆ, ಸೆಕ್ಷನಗಳು ಸಿಗುತ್ತವೆ. ವಚನಗಳ ಮೂಲಕ ಒಂದು ಸುಂದರವಾದ ಸಮಾಜ ನಿರ್ಮಾಣ ಸಾಧ್ಯವಾಗಿದ್ದು, ಇಂತಹ ವಚನಗಳ ರಕ್ಷಣೆಗೆ ಶ್ರಮಿಸಿದವರು ಡಾ ಫ.ಗು.ಹಳಕಟ್ಟಿಯವರು. ವೃತ್ತಿಯಿಂದ ವಕೀಲರಾಗಿ, ಸಾಹಿತಿ, ಸಹಕಾರಿಗಳಾಗಿ, ಸಂಘಸಂಸ್ಥೆಗಳ ಕಟ್ಟಿ ಬೆಳೆಸಿದ ಫ.ಗು.ಹಳಕಟ್ಟಿಯವರು ಸಮಾಜಕ್ಕಾಗಿ ತಮ್ಮ ತನು ಮನ ಧನವನ್ನು ನೀಡಿ ವಚನ ಸಾಹಿತ್ಯ ಉಳಿಸಿದ್ದಾರೆ. ಅದು ಮುಂದಿನ ನಮ್ಮ ಸಂಸ್ಕೃತಿಗೆ ಬಹುದೊಡ್ಡ ಕೊಡುಗೆಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೊಟ್ರೇಶ್ ಮರಬನಳ್ಳಿ, ಗಣ್ಯರಾದ ಗುಡದಪ್ಪ ಹಡಪದ, ಡಾ.ಸಂಗಮೇಶ ಕಲ್ಲಹಾಳ, ಹನ್ಮೇಶ ಕಲಮಂಗಿ, ಎಸ್.ಇಂಗಳದಾಳ, ಶೇಖರಗೌಡ ಪೊ.ಪಾಟೀಲ್, ಶಶಿಧರ ಗಾಣಿಗಾ, ಅರ್ಚನಾ ಸಸಿಮಠ, ಶರಣಮ್ಮ ಕಲಮಂಗಿ, ನೀಲಮ್ಮ ಪೊ.ಪಾಟೀಲ್, ಶ್ರೀದೇವಿ ಇಂಗಳದಾಳ, ವಿಶಾಲಕ್ಷಿ ಸಸಿಮಠ, ವಿಜಯಲಕ್ಷ್ಮೀ ಸೇರಿದಂತೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಮತ್ತಿತರರು ಇದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply