ಗಂಗಾವತಿ:- ಉಪ ವಿಭಾಗ ಆಸ್ಪತ್ರೆಯಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ ಸದಸ್ಯರು ಹಾಗೂ ಅಧ್ಯಕ್ಷರು ಕಾರ್ಯದರ್ಶಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟದಲ್ಲಿ ವಿಶ್ಚಾಸ್ ಮತ್ತು ವಿ.ಹೆಚ್..ಎನ್
ಸಿ.ತರಬೇತಿ ಕಾರ್ಯಕ್ರಮದ ಉದ್ಘಾಟಿಸಲಾಯಿತು
ನಂತರ ಮಾತನಾಡಿದ ಸರ್ಕಾರಿ ಆಸ್ಪತ್ರೆ ಉಪವಿಭಾಗ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಈಶ್ವರ ಎಸ್.ಸವಡಿ ಅವರು ಪ್ರತಿಯೊಂದು ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿಯ ಆದಾಯ ಮತ್ತು ವೆಚ್ಚವನ್ನು ದಾಖಲಿಸುವುದಕ್ಕಾಗಿ ಮತ್ತು ಪ್ರತಿಯೊಂದು ಗ್ರಾಮದಲ್ಲಿ ಈ ನಗದು ಪುಸ್ತಕಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಎ.ಎನ್.ಎಂ.ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿಯ ಸದಸ್ಯರು ಕಾರ್ಯದರ್ಶಿ ಮತ್ತು ಆಶಾ ಕಾರ್ಯಕರ್ತರು ಈ ಕೆಲಸವನ್ನು ಮಾಡುತ್ತಾರೆ ಇವರಿಗೆ ಪ್ರತಿಯೊಂದು ಪಂಚಾಯತಿ ವತಿಯಿಂದ ಗೌರವ ಧನವನ್ನು ನೀಡುತ್ತಾರೆ
ಈ ಸಂದರ್ಭದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಆಶಾಬೇಗಂ.ಆರೋಗ್ಯ ಸಿಬ್ಬಂದಿಗಳಾದ ಗುರು.ಅಕ್ಬರ್. ಹಮೀನಸಾಬ.ಪಂಪನಗೌಡ.ಪದ್ಮಮ್ಮ ಹೊಸಹಳ್ಳಿ. ಗ್ರಾ.ಪಂ.ಸದಸ್ಯರಾದ ಧನಜೇನಪ್ಪ ರಂಗಾಪೂರು ದೇಶಕ್ಯಾಂಪ್ ಗ್ರಾ.ಪಂ.ಉಪಾಧ್ಯಕ್ಷರಾದ ರೆಡ್ಡಿವೀರಾರಾಜ. ಹಾಗೂ ಆಶಾ ಕಾರ್ಯಕರ್ತರು ಇದ್ದರು
ವರದಿ
(ಹನುಮೇಶ ಬಟಾರಿ ಗಂಗಾವತಿ)