This is the title of the web page
This is the title of the web page

Please assign a menu to the primary menu location under menu

Local News

ಡಾ. ಜಿನದತ್ತ ದೇಸಾಯಿ ‘ಸಹಸ್ರಚಂದ್ರ’ ಕೃತಿಯ ಚಿಂತನ ಕಾರ್ಯಕ್ರಮ


ಬೆಳಗಾವಿ ೧೬- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯದವರು ಇದೇ ದಿ. ೧೮ ಶನಿವಾರದಂದು ಮುಂಜಾನೆ ೧೦-೩೦ ಗಂಟೆಗೆ ಮಹಾವಿದ್ಯಾಲಯದ ಶ್ರೀ ಗವಿಸಿದ್ದಪ್ಪ ಬೆಳವಡಿ ಸಭಂಗಣದಲ್ಲಿ ಹಿರಿಯ ಕವಿ ಡಾ. ಜಿನದತ್ತ ದೇಸಾಯಿಯವರ ‘ಸಹಸ್ರಚಂದ್ರ’ ಕೃತಿಯ ಕುರಿತು ಚಿಂತನ ಕರ‍್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿಗಳಾದ ಶ್ರೀಮತಿ ಎ. ಎಂ. ಜಯಶ್ರೀ ಅವರು ‘‘ಸಹಸ್ರಚಂದ್ರ’ ಕೃತಿ ಕುರಿತಂತೆ ಮಾತನಾಡಲಿದ್ದಾರೆ. ಪ್ರಾಚಾರ್ಯರಾದ ಡಾ. ಬಸವರಾಜ ಜಿ. ಧಾರವಾಡ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಡಾ. ಗುರುದೇವಿ ಹುಲೆಪ್ಪನವರಮಠ ಆಗಮಿಸಲಿದ್ದು ಹಿರಿಯ ಪತ್ರಕರ್ತ ಎಲ್. ಎಸ್ .ಶಾಸ್ತ್ರಿಯವರು ಆಶೆಯ ಭಾಷಣ ಮಾಡಲಿದ್ದಾರೆ. ಕವಿ ಡಾ. ಜಿನದತ್ತ ದೇಸಾಯಿ, ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಡಾ. ಎ. ಎಲ್. ಪಾಟೀಲ ಉಪಸ್ಥಿತರಿರುತ್ತಾರೆ.


Gadi Kannadiga

Leave a Reply