ಬೆಳಗಾವಿ : ಲಿಂಗಾಯಿತ ಮಹಿಳಾ ಸಮಾಜವು ನೂತನವಾಗಿ ಪದಗ್ರಹಣಗೊಂಡವರಿಗಾಗಿ ಶಿವಬಸವ ನಗರದ ಲಿಂಗಾಯಿತ ಭವನದಲ್ಲಿ ಅಧಿಕ- ಅಧ್ಯಾತ್ಮ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಶೇಗುಣಸಿ ವಿರಕ್ತ ಮಠದ ಡಾ. ಮಹಾಂತಪ್ರಭು ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಆಧ್ಯಾತ್ಮಿಕ ಪ್ರವಚನವನ್ನು ನೀಡಿದರು . ಧರ್ಮದ ಕುರಿತು ಮಾತನಾಡುತ್ತಾ, ನಿಜವಾದ ಧರ್ಮವೆಂದರೆ ಪರರ ಕಷ್ಟಗಳಿಗೆ ನೆರವಾಗುವುದು, ಕಷ್ಟದಲ್ಲಿರುವವನ ಕಣ್ಣೀರು ಒರೆಸುವುದೇ ನಿಜವಾದ ಧರ್ಮ. ಸಕಲ ಪ್ರಾಣಿಗಳಲ್ಲಿ ಪ್ರೀತಿ ಅಂತ ಕರಣ ತೋರಿಸುವುದರ ಮೂಲಕ ಮನುಷ್ಯ ತನ್ನ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಮನುಷ್ಯ ಜೀವನದ ಉನ್ನತಿಗೆ ಶರಣ ಸಾಹಿತ್ಯವು ಮಾರ್ಗವನ್ನು ತೋರಿಸುತ್ತದೆ. ಶರಣರ ನುಡಿಗಳು ನಮ್ಮೆಲ್ಲರನ್ನು ಸನ್ಮಾರ್ಗದಲ್ಲಿ ಸಾಗಿಸುತ್ತದೆ. ಶರಣ ಸಾಹಿತ್ಯವನ್ನು ಸಮೀಕರಿಸಿಕೊಂಡು ಇವತ್ತು ನಾವೆಲ್ಲರೂ ಬದುಕಬೇಕಾಗಿದೆ. ಇಂದು ನಾವು ಚಿಕ್ಕ ಮಕ್ಕಳಿಗೆ, ಯುವ ಜನತೆಗೆ ಧರ್ಮದ ತಿರುಳನ್ನು ತಿಳಿಸಬೇಕಾಗಿದೆ. ಅವರಲ್ಲಿ ನಮ್ಮ ಸಂಸ್ಕೃತಿಯ ಬೇರುಗಳು ಆಳವಾಗಿ ನೆಲೆವೂರುವಂತೆ ಮಾಡಬೇಕು. ಹಾಗಾಗಿ ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಜರುಗಬೇಕು ಎಂದರು. ಇಂತಹ ವಿಶೇಷ ಕಾರ್ಯಕ್ರಮಗಳನ್ನು ಲಿಂಗಾಯಿತ ಮಹಿಳಾ ಸಮಾಜದ ಮೂಲಕ ಮಾಡುತ್ತ, ಸಮಾಜಮುಖಿಯಾಗಿ ಸಂಸ್ಥೆಯನ್ನು ನಡೆಸುತ್ತಿರುವ ಸಂಸ್ಥಾಪಕಿ ಶೈಲಜಾ ಬಿಂಗೆಯವರನ್ನು ಅಭಿನಂದಿಸಿದರು.
ಹಾವೇರಿ ವಿಶ್ವವಿದ್ಯಾಲಯದಲ್ಲಿ ಮೌಲ್ಯಮಾಪನ ಕುಲ ಸಚಿವೆಯಾಗಿ ನಿಯೋಜನೆಗೊಂಡ ಡಾ. ವಿಜಯಲಕ್ಷ್ಮಿ, ತಿರ್ಲಾಪುರ್ ಪುಟ್ಟಿ ಹಾಗೂ ಆಲ್ ಇಂಡಿಯಾ ಲೆವೆಲ್ ನಲ್ಲಿ ಸಾಧನೆಗೈದ ಕುಮಾರಿ ಪ್ರೀತಿ ಅವರನ್ನು ಸತ್ಕರಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ವಿಜಯಲಕ್ಷ್ಮಿ, ತಿರ್ಲಾಪುರ್ ಪುಟ್ಟಿ ಅವರು ಪುರುಷ ಪ್ರಧಾನವಾದ ಕುಟುಂಬದಲ್ಲಿ ಪ್ರತಿಯೊಬ್ಬ ಪುರುಷನು ಮಹಿಳೆಯರ ಉನ್ನತಿಗೆ ಸಹಕರಿಸಬೇಕು. ತಂದೆ, ಅಣ್ಣ, ತಮ್ಮ, ಗಂಡ, ಮಾವ,.. ಎಲ್ಲರಾದಿಯಾಗಿ ಮಹಿಳೆಯ ವಿದ್ಯಾಭ್ಯಾಸಕ್ಕೆ ಪೂರಕವಾದಂತ ವಾತಾವರಣವನ್ನು ಸೃಷ್ಟಿ ಮಾಡಬೇಕು, ಅಂದಾಗ ಮಾತ್ರ ಮಹಿಳೆಯರು ಉನ್ನತವಾದ ಸ್ಥಾನಗಳನ್ನು ಅಲಂಕರಿಸಲು ಸಾಧ್ಯ ಎಂದರು.
ನಾಗನೂರು ಮಠದ ಡಾ ಅಲ್ಲಮಪ್ರಭು ಮಹಾ ಸ್ವಾಮೀಜಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, ಈ ಮಹಿಳಾ ಸಮಾಜದಲ್ಲಿ ಐದು ನೂರಕ್ಕೂ ಹೆಚ್ಚು ಮಹಿಳಾ ಸದಸ್ಯರು ಇದ್ದು, ಪ್ರತಿಯೊಬ್ಬ ಸದಸ್ಯೆಯು ಒಂದೊಂದು ಸಂಸ್ಥೆ ಇದ್ದ ಹಾಗೆ. ಹಾಗಾಗಿ ಒಟ್ಟು ೫೦೦ ಸಂಸ್ಥೆಗಳು ಇಲ್ಲಿ ಸಮಾಜಮುಖಿಯಾಗಿ ಕೆಲಸವನ್ನು ನಿರ್ವಹಿಸುತ್ತಿವೆ. ಅಂತೆಯೇ ಸಮಾಜದ ಪ್ರಗತಿ, ಕುಟುಂಬದ ಉದ್ಧಾರ ಮಹಿಳೆಯಿಂದಲೇ ಸಾಧ್ಯ ಎಂದು ಆಶೀರ್ವಚನ ನೀಡಿದರು.
ಲಿಂಗಾಯಿತ ಮಹಿಳಾ ಸಮಾಜ ಅಧ್ಯಕ್ಷೆಯಾದ ನೈನಾ ಗಿರಿಗೌಡರ್ ಸ್ವಾಗತಿಸಿದರು, ಸಂಸ್ಥಾಪಕಿ ಶೈಲಜಾ ಬಿಂಗೆ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಸಂಘದ ಕಾರ್ಯದರ್ಶಿ ಕಾವೇರಿ ಕಿಲಾರಿ ನಿರೂಪಿಸಿದರು. ಲಿಂಗಾಯಿತ ಸಮಾಜದ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು.
ಸಹಕಾರ್ಯದರ್ಶಿ ಸುಖೇಶಿನಿ ಪಾಟೀಲ್ ಶರಣು ಸಮರ್ಪಣೆಯನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.
Gadi Kannadiga > Local News > ಕಷ್ಟದಲ್ಲಿರುವವನ ಕಣ್ಣೀರು ಒರೆಸುವುದೇ ನಿಜವಾದ ಧರ್ಮ :ಡಾ. ಮಹಾಂತಪ್ರಭು ಮಹಾಸ್ವಾಮಿಗಳು
ಕಷ್ಟದಲ್ಲಿರುವವನ ಕಣ್ಣೀರು ಒರೆಸುವುದೇ ನಿಜವಾದ ಧರ್ಮ :ಡಾ. ಮಹಾಂತಪ್ರಭು ಮಹಾಸ್ವಾಮಿಗಳು
Suresh27/07/2023
posted on

More important news
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡ ಭೇಟಿ
25/09/2023
ಪೌರ ಕಾರ್ಮಿಕರ ದಿನಾಚರಣೆ
23/09/2023
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡದ ಭೇಟಿ
22/09/2023