This is the title of the web page
This is the title of the web page

Please assign a menu to the primary menu location under menu

Local News

ನೀತಿ ಶಿಕ್ಷಣ ನೀಡಿದಾಗ ವಿದ್ಯಾರ್ಥಿಗಳ ಬಾಳಿಗೆ ಶ್ರೀ ರಕ್ಷೆಯಾಗುತ್ತವೆ-ಡಾ.ನರಗುಂದ


ಮೂಡಲಗಿ: “ ಶಿಕ್ಷಣವು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಪ್ರಮುಖ ಪಾತ್ರವಹಿಸಿದ್ದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಬುದ್ಧಿವಂತರಾಗುತ್ತಿದ್ದು ಆದರೆ ಸಾಮಾಜಿಕ ಬದುಕಿನಲ್ಲಿ ಮಾನವೀಯ ಸಂಬಂಧಗಳ ಕುಸಿತ ಕಾಣುತ್ತಿದೆ ಅವುಗಳ ಕಡೆ ಉಪನ್ಯಾಸಕರು ಗಮನಹರಿಸಿ ನೀತಿ ಶಿಕ್ಷಣ ನೀಡಿದಾಗ ಮಾನವೀಯ ಮೌಲ್ಯಗಳು ವಿದ್ಯಾರ್ಥಿಗಳ ಬಾಳಿಗೆ ಶ್ರೀ ರಕ್ಷೆಯಾಗುತ್ತವೆ” ಎಂದು ಹಾರೂಗೇರಿಯ ಎಸ್.ವಿ.ಇ.ಎಸ್‌ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಂದು ಡಾ. ಪಿ.ಬಿ.ನರಗುಂದ ಕರೆ ನೀಡಿದರು.
ಅವರು ಪಟ್ಟಣ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪದವಿ ಕಾಲೇಜಿನಲ್ಲಿ ೨೦೨೨-೨೩ ನೇ ಸಾಲಿನ ಕಾಲೇಜಿನ ವಿವಿಧ ಘಟಕಗಳ ಸಮಾರೋಪ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ, ವಿದ್ಯಾರ್ಥಿಗಳು ಇಂದು ತಮ್ಮ ಜೀವನದ ಒಂದು ಘಟ್ಟ ಮುಗಿಸಿ ಮುಂದಿನ ಬದುಕಿಗೆ ಹೆಜ್ಜೆ ಇಡುತ್ತಿರುವ ಸಂದರ್ಭದಲ್ಲಿ ದೇಶ ಕಟ್ಟುವ ಸಮರ್ಥ ನಾಯಕರಾಗಬೇಕು. ಸಾಧನೆ ಮಾಡಿದ ಸಾಧಕರ ಬದುಕನ್ನು ಅವಲೋಕನ ಮಾಡಬೇಕು. ಇಸ್ರೋದ ಸಾಧನೆ , ನೀರಜ್ ಚೋಪ್ರಾ ಅವರ ಚಿನ್ನದ ಪದಕದ ಸಾಧನೆ ನಿಮಗೆಲ್ಲಾ ಸ್ಪೂರ್ತಿಯಾಗ ಬೇಕು. ಹೊ ಹೊಸ ಸವಾಲುಗಳನ್ನು ಎದುರಿಸಲು ಸಿಧ್ಧರಾಗಬೇಕು. ನಿಮ್ಮ ಮುಂದಿನ ಬದುಕು ಸುಮಧುರವಾಗಿರಲಿ ”ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ನೂತನ ಪ್ರಾಂಶುಪಾಲ ಮಹೇಶ ವಾಯ್ ಕಂಬಾರ ಮಾತನಾಡಿ, ಮಹಾವಿದ್ಯಾಲಯವು ಇಂದು ನಿಮ್ಮೆಲ್ಲರ ಸಹಕಾರದಿಂದ ಸಾಕಷ್ಟು ಬೆಳೆದಿದೆ, ಮುಂದೆಯೂ ಬೆಳೆಯುತ್ತದೆ. ನೀವು ಪಡೆದುಕೊಂಡ ಶಿಕ್ಷಣ ಮಾನವೀಯ ಮೌಲ್ಯಗಳ ಬೆಳವಣಿಗೆಗೆ ರಹದಾರಿಯಾಗಲಿ. ಕೇವಲ ಹತ್ತು ವಿದ್ಯಾರ್ಥಿಗಳಿಂದ ಪ್ರಾರಂಭವಾದ ನಮ್ಮ ಕಾಲೇಜು ಇಂದು ೧೫೩೭ ವಿದ್ಯಾರ್ಥಿಗಳ ಸಂಖ್ಯೆಯನ್ನೂ ಮೀರಿ ನಿಂತಿದೆಯೆಂದರೆ ಅದು ಇಲ್ಲಿರುವ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ನಿಮ್ಮ ಮುಂದಿನ ಬದುಕು ಸುಂದರವಾಗಿರಲಿನಮ್ಮ ಮಹಾವಿದ್ಯಾಲಯದ ಕೀರ್ತಿ ನಿಮ್ಮಿಂದ ಎಲ್ಲೆಡೆ ಹರಡಲಿ’ಎಂದರು.
ಕಾರ್ಯಕ್ರಮದಲ್ಲಿ ೨೦೨೧-೨೨ ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಕೋರ್ಸ್ನ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಸತ್ಕರಿಸಲಾಯಿತು. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಹಾಗೂ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಿ ವಿವಿಧ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಶಾನೂರಕುಮಾರ ಗಾಣಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಕಾಲೇಜಿನ ಸಲಹಾ ಸಮಿತಿ ಸದಸ್ಯರಾದ ಸಂಜೀವ ಮೊಕಾಶಿ, ಚಂದ್ರು ಗಾಣಿಗ, ವಿದ್ಯಾರ್ಥಿ ಪ್ರತಿನಿಧಿಗಳು ಮತ್ತಿತತರು ಇದ್ದರು ರುದ್ರವ್ವ ಬೆಳಗಲಿ ಹಾಗೂ ಸೌಮ್ಯ ಮುಕ್ಕುಂದ ಸ್ವಾಗತಿಸಿದರು.. ಅರ್ಪಿತಾ ಮಳವಾಡ ಹಾಗೂ ಸುನೀಲ್‌ಡೋಣಿ ನಿರೂಪಿಸಿದರು. ಶೃತಿ ಬಾಗೋಜಿ ವಂದಿಸಿದರು


Leave a Reply