This is the title of the web page
This is the title of the web page

Please assign a menu to the primary menu location under menu

Local News

ಕಾದಂಬರಿಕಾರ ಪುರಾಣಿಕರು ಮಾನವೀಯತೆ ಮೆರೆದವರು: ಡಾ. ನಾವಲಗಿ


ಬೆಳಗಾವಿ ೧೩- ವಾಚನಾಭಿರುಚಿಯನ್ನು ಹೆಚ್ಚಿಸಿ ಹೊ ಸ ಓದುಗರನ್ನು ಸೃಷ್ಟಿಸಿದ ಶ್ರೇಯಸ್ಸು ಖ್ಯಾತ ಕಾದಂಬರಿಕಾರ ದಿ. ಕೃಷ್ಣಮೂರ್ತಿ ಪುರಾಣಿಕರಿಗೆ ಸಲ್ಲುತ್ತದೆ. ಅಂದಿನ ಕಾಲದಲ್ಲಿ ಓದುಗರ ಸಂಖ್ಯೆಯೇ ಇರಲಿಲ್ಲ. ಹೆಚ್ಚಾಗಿ ಕೌಟುಂಬಿಕ ಕಾದಂಬರಿಗಳನ್ನು ಬರೆಯುತ್ತಿದ್ದ ಪುರಾಣಿಕರು. ಬಹುದೊಡ್ಡ ಓದುಗ ಬಳಗವನ್ನೇ £ರ್ಮಾಣ ಮಾಡಿದರು. ಇವರು ಬರೆದ ಕಾದಂಬರಿಗಳು ಹೆಚ್ಚಾಗಿ ಹೆಣ್ಣುಮಕ್ಕಳ ಮನಸ್ಸನ್ನು ಗೆದ್ದಿದ್ದವು. ಪುರಾಣಿಕರು ಜಾತಿ, ಮತ, ಪಂಥಗಳನ್ನೇಣಿಸದೇ ಕೇವಲ ಮಾನವೀಯತೆ ಮೆರೆದವರು ಎಂದು ಹಿರಿಯ ಲೇಖಕ, £ವೃತ್ತ ಪ್ರಾಚಾರ್ಯ ಡಾ. ಸಿ.ಕೆ. ನಾವಲಗಿ ಇಂದಿಲ್ಲಿ ಹೇಳಿದರು.
ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ, ಕೃಷ್ಣಮೂರ್ತಿ ಪುರಾಣಿಕ ಪ್ರತಿಷ್ಠಾನ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತ ಆಶ್ರಯದಲ್ಲಿ ಇದೇ ದಿ. ೧೨ ಮಂಗಳವಾರದಂದು ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಖ್ಯಾತ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರ ೧೧೨ ನೇ ಜನ್ಮದಿನದ ಸಂಸ್ಮರಣೆ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಡಾ. ನಾವಲಗಿಯವರು ಮೇಲಿನಂತೆ ಅಭಿಪ್ರಾಯಪಟ್ಟರು.
ಪುರಾಣಿಕರ ಸರಳ ರಗಳೆಗಳು ಕುರಿತು ಮಾತನಾಡಿದ ಹಿರಿಯ ಸಾಹಿತಿ, ಪತ್ರಕರ್ತ ಎಲ್. ಎಸ್. ಶಾಸ್ತಿö್ರಯವರು ಮಾತನಾಡಿ ಸರಳ ರಗಳೆಯ ಕೃತಿ ರಚನೆಗೆ ಕುವೆಂಪುರವರೇ ಆದರ್ಶ. ಕುವೆಂಪುರವರ ಕೆಲ ಕೃತಿಗಳನ್ನು ಸಾರ್ವಜ£ಕವಾಗಿ ವಾಚನ ಮಾಡತೊಡಗಿದ ನಂತರ, ಇದರಿಂದ ಸ್ಫೂರ್ತಿಗೊಂಡ ಪುರಾಣಿಕರು ರಚಿಸಿದ್ದು ‘ಮಗನ ಗೆಲುವು’, ‘ಸೈರಂಧ್ರಿ’, ‘ರಾಧೇಯ’, ‘ರತಿವಿಲಾಸ’, ‘ಜಯಭೇರಿ’, ‘ವಾಸವದತ್ತ’ ಮೊದಲಾದ ಕೃತಿಗಳು. ಸೈರಂಧ್ರಿಯ ಎಪ್ಪತ್ತು ಸಾವಿರ ಪ್ರತಿಗಳು ಮಾರಾಟವಾಗಿ ದಾಖಲೆಯನ್ನೇ £ರ್ಮಿಸಿತು ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ £ವೃತ್ತ ಪ್ರಾಚಾರ್ಯ ಪ್ರೊ. ವಿ. ಎನ್ ಜೋಶಿಯವರು ಮಾತನಾಡಿ ಅಂದು ನಮಗೆ ಆಟವಾಡಿ ಬೇಸತ್ತಾಗ ಮನರಂಜನೆಗೆಂದು ಬೇರೆ ಆಯ್ಕೆಯಂದರೆ ಓದುವುದು ಮಾತ್ರ. ಆಗ ನಾನು ಓದುತ್ತಿದ್ದುದು ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿಗಳನ್ನು. ನಾನು ಪಾಲಕರ ಕಣ್ಣ ತಪ್ಪಿಸಿ ಇವರ ಕಾದಂಬರಿಗಳನ್ನು ಓದುತ್ತಿದ್ದೆ ಅಷ್ಟೊಂದು ಪುರಾಣಿಕರ ಸಾಹಿತ್ಯದಿಂದ ನಾನು ಪ್ರಭಾವಿತಗೊಂಡಿದ್ದೆ ಎಂದು ಹೇಳಿದರು.
ಬಾಬು ನಾಯಕರು ಪ್ರಾರ್ಥಿಸಿದರು. ಬಸವರಾಜ ಗಾರ್ಗಿ £ರೂಪಿಸಿದರು. ಡಾ. ಅನ್ನಪೂರ್ಣಾ ಹಿರೇಮಠ ಪರಿಚಯಿಸಿದರು ಆನಂದ ಪುರಾಣಿಕ ವಂದಿಸಿದರು.


Leave a Reply