This is the title of the web page
This is the title of the web page

Please assign a menu to the primary menu location under menu

Local News

ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಾಧನೆಗೈದ ಲಿಂಗರಾಜ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಡಾ.ಪ್ರಭಾಕರ ಕೋರೆಯವರಿಂದ ಸತ್ಕಾರ


ಬೆಳಗಾವಿ ೧೬ : ಇತ್ತೀಚಿಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಾಧನೆಗೈದ ಲಿಂಗರಾಜ ಪದವಿ ಮಹಾವಿದ್ಯಾಲಯದ ಬಿ.ಎ. ಎರಡನೇ ಸಮಿಸ್ಟರ್ ವಿದ್ಯಾರ್ಥಿ ಸುಹಾಸ ಸಾವಟಕರ್ ನೇಪಾಳದಲ್ಲಿ ಜರುಗಿದ ಏಶಿಯನ್ ಕ್ರಾಸ್ ಕಂಟ್ರಿ ಚಾಂಪಿಯನ್‌ದಲ್ಲಿ ಭಾರತದಿಂದ ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅಂತೆಯೆ ಬಿ.ಎ. ೨ನೇ ಸೆಮಿಸ್ಟರ್ ಇನ್ನೋರ್ವ ವಿದ್ಯಾರ್ಥಿ ಕಿರಣ ವಿ.ಬಿ. ಮಂಗಳೂರಿನಲ್ಲಿ ಜರುಗಿದ ಆಲ್ ಇಂಡಿಯಾ ಬಾಡಿ ಬಿಲ್ಡಿಂಗ್ ಚಾಂಪಿಯನ್ ಸಿಫ್‌ದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.
ಈ ಇಬ್ಬರೂ ವಿದ್ಯಾರ್ಥಿಗಳ ಸಾಧನೆಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಹರ್ಷ ವ್ಯಕ್ತಪಡಿಸಿ ಕೆಎಲ್‌ಇ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಸತ್ಕರಿಸಿ ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಲಿಂಗರಾಜ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ದೈಹಿಕ ನಿರ್ದೇಶಕರಾದ ಡಾ.ಸಿ.ರಾಮರಾವ್, ಮಾಜಿ ಶಾಸಕರಾದ ಮಹಾದೇವಪ್ಪಣ್ಣಾ ಯಾದವಾಡ, ಕ್ಯಾಫ್ಟನ್ ಡಾ.ಮಹೇಶ ಗುರನಗೌಡರ ಉಪಸ್ಥಿತರಿದ್ದರು.


Leave a Reply