ಸವದತ್ತಿ: ಇಲ್ಲಿನ ಕೆಎಲಇ ಸಂಸ್ಥೆಯ ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದ ಆವರಣದಲ್ಲಿ ಡಾ. ಪ್ರಭಾಕರ ಕೋರೆ ಅವರ 76ನೇ ಹುಟ್ಟು ಹಬ್ಬವನ್ನು ಸಸಿ ನೆಡುವ ಮೂಲಕ ಆಚರಿಸಲಾಯಿತು.
ನಂತರ ಪ್ರಾಚಾರ್ಯ ಮಾರುತಿ ದೊಂಬರ ಮಾತನಾಡಿ, ಸಪ್ತರ್ಷಿಗಳಿಂದ ಆರಂಭವಾದ ಕೆ.ಎಲ್.ಇ.ಸಂಸ್ಥೆಯು,ಇಂದು ಪ್ರಪಂಚದಾದ್ಯಂತ ಅನೇಕ ಶಾಖೆಗಳನ್ನು ಹೊಂದುವದರ ಮೂಲಕ ಪ್ರಗತಿಯನ್ನು ಸಾಧಿಸುತ್ತ ಮುನ್ನಡೆದಿದೆ. ಡಾ.ಪ್ರಭಾಕರ ಕೋರೆ ಅವರು ಕೆಎಲಇ ಸಂಸ್ಥೆಯ ಕಾರ್ಯಧ್ಯಕ್ಷರಾದ ನಂತರ ಅವರ ದೂರದೃಷ್ಟಿಯ ವಿಚಾರಧಾರೆಗಳು ಸಂಸ್ಥೆ ಅತಿ ಎತ್ತರಕ್ಕೆ ಬೆಳೆಯುವಂತೆ ಮಾಡಿದವು.
ಕೆ.ಎಲ್.ಇ.ಸಂಸ್ಥೆಅಡಿಯಲ್ಲಿ ಕಲೆ, ವಿಜ್ಞಾನ, ವಾಣಿಜ್ಯ, ಕೃಷಿ ತೋಟಗಾರಿಕೆ, ತಾಂತ್ರಿಕ, ವೈದ್ಯಕೀಯ, ಆಯುರ್ವೇದ, ಆಡಳಿತ, ಕಂಪ್ಯೂಟರ್ ಶಿಕ್ಷಣ ಮುಂತಾದ ವಿಷಯಗಳ ಅನೇಕ ಕೋರ್ಸುಗಳಲ್ಲಿ ಮಕ್ಕಳಿಗೆ ಶಿಕ್ಷಣ ದೊರೆಯುತ್ತಿದೆ. ಕರ್ನಾಟಕವಷ್ಟೇ ಅಲ್ಲದೆ ದೇಶ-ವಿದೇಶದಲ್ಲೂ ಕೆ.ಎಲ್.ಇ.ಸಂಸ್ಥೆಯ ಶಾಖೆಗಳು ಗುಣಮಟ್ಟದ ಶಿಕ್ಷಣವನ್ನು ನೀಡುತ್ತ ಸಾಗಿವೆ. ಪ್ರಸ್ತುತ ಕೆ.ಎಲ್.ಇ. ಸಂಸ್ಥೆಯಡಿಯಲ್ಲಿ ಮುನ್ನೂರಕ್ಕಿಂತಲೂ ಹೆಚ್ಚು ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.
ಈ ಸಂದರ್ಭದಲ್ಲಿ ಡಾ. ಮಹಾಂತೇಶ ಎನ್. ಬೆಂಡಿಗೇರಿ ಅವರು 62 ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಿದರು.
ಈ ವೆಳೆ ಪ್ರೊ.ರಾಮರೆಡ್ಡಿ,ಡಾ.ಎನ್.ಆರ್.ಸೌತಿ ಕರ, ಪ್ರೊ. ಆಪ್ರಿನ ಹಳ್ಳೂರ,ಡಾ.ಎ.ಎಫ್. ಬದಾಮಿ, ಪ್ರೊ.ಶಿವಾನಂದ ಹೋಳಿ,ಪ್ರೊ.ಮೋಹನ.ಬಿ ಹಾಗೂ ಶಿಕ್ಷಕರು,ವಿದ್ಯಾರ್ಥಿಗಳು,ಸಿಬ್ಬಂ ದಿಗಳು ಇದ್ದರು.