ಬೆಳಗಾವಿ: ನಗರದ kle ಸಂಸ್ಥೆಯ ಜಿರಗೆ ಹಾಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, kle ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ kle ಹೈಯರ್ ಎಜುಕೇಷನ್ ಕುಲಾಧಿಪತಿಗಳಾದ ಡಾ ಪ್ರಭಾಕರ ಕೊರೆಯವರ ಶಿಕ್ಷಣ, ಆರೋಗ್ಯ, ಸೇವೆ, ವೈದ್ಯಕೀಯ ಸಂಶೋಧನೆಗಳ ಸಾಧನೆಗಾಗಿ, ಅಮೇರಿಕಾದ ಪಿಲಾಡೆಲ್ಪಿ ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಲು ನಿರ್ಧರಿಸಿದೆ..
ಅಮೆರಿಕಾದ ಈ ವಿಶ್ವವಿದ್ಯಾಲಯದಲ್ಲಿ 25/05/2022 ರಂದು ಜರುಗಲೀರುವ ಘಟಿಕೋತ್ಸವದಲ್ಲಿ ಈ ಗೌರವ ಸಮರ್ಪಣೆ ಆಗುವುದೆಂದು ಸುದ್ದಿಗೋಷ್ಟಿಯಲ್ಲಿ ವಿಶ್ವವಿದ್ಯಾಲಯದ ಪ್ರತಿನಿಧಿ, ಹಾಗೂ kle ಸಂಸ್ಥೆಯ ಮುಖ್ಯಸ್ಥರು ಸ್ಪಷ್ಟಪಡಿಸಿದರು..
ಈ ಮೂಲಕ ಕೋರೆಯವರಿಗೆ ಸಿಗುವ ನಾಲ್ಕನೇ ಡಾಕ್ಟರೇಟ್ ಇದಾಗಿದೆ ಎಂದರು.