This is the title of the web page
This is the title of the web page

Please assign a menu to the primary menu location under menu

State

ಗ್ರಾಮೀಣ ಭಾಗದಲ್ಲಿ ಮಹಿಳಾ ಸುರಕ್ಷಾಧಿಕಾರಿಗಳ ಕಾರ್ಯ ಶ್ಲಾಘನೀಯ-ಡಾ. ಪುಷ್ಪಾ ದೊಡಮನಿ


ಬೆಳಗಾವಿ: ಹಳ್ಳಿಗಳಲ್ಲಿ ಮಹಿಳಾ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಮನೆ ಮನೆಗೆ ಭೇಟಿ ಕೊಟ್ಟು ಸೇವೆ ಸಲ್ಲಿಸುವುದು ಶ್ಲಾಘನೀಯ ಕಾರ್ಯ ಎಂದು ಆರೋಗ್ಯ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕಿ ಡಾ. ಪುಷ್ಪಾ ದೊಡ್ಡಮನಿ ಹೇಳಿದರು.
ಅವರು ಬೆಳಗಾವಿಯಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದವರು ಹಮ್ಮಿಕೊಂಡಿದ್ದ ಶ್ರೀಮತಿ ಸಾವಿತ್ರಿ ಬಾಬುರಾವ್ ಶಿವಪೂಜಿ ಶ್ರೀಮತಿ ವತ್ಸಲ ಕಡಬಡಿ ಶ್ರೀಮತಿ ಗಂಗಾ ಕಂಬಾರ್ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ದತ್ತಿ ಕಾರ್ಯಕ್ರಮದಲ್ಲಿ ಹಿರಿಯ ಮಹಿಳಾ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ಶ್ರೀಮತಿ ಸಾವಿತ್ರಿ ಅಲಸಿಗಿ (ಅಂಬಡಗಟ್ಟಿ) , ಶ್ರೀಮತಿ ಸುಶೀಲಾ ಅಮಾತಿ (ಹಿರೇಬಾಗೇವಾಡಿ), ಶ್ರೀಮತಿ ಜಯಶ್ರೀ ಜಕನಿ (ಪಾರಿಷ್ವಾಡ್) , ಶ್ರೀಮತಿ ಜೈ ಜೈಬುನ ಮುಲ್ತಾನಿ (ಅರ್ಜುನವಾಡ ), ಶ್ರೀಮತಿ ಶಶಿಕಲಾ ಬಡಿಗೇರ್ (ನೇಗಿನಹಾಳ), ಜಯಾ ಕೇಮಜಿ (ಬೆಳಗುಂದಿ) ಇವರುಗಳನ್ನು ಸತ್ಕರಿಸಿ ಮಾತನಾಡುತ್ತಿದ್ದರು.
ಹೆಣ್ಣು ಮಕ್ಕಳು ಒಂಟಿಯಾಗಿ ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ, ಕಾಲುನಡಿಗೆಯಲ್ಲಿ ಸಂಚರಿಸಿ ಸೇವೆ ಸಲ್ಲಿಸಿದ್ದಾರೆ ಅವರೆಲ್ಲ ಅತ್ಯಂತ ಧೈರ್ಯವಂತರು ಅವರ ಸೇವೆ ಅವಿಸ್ಮರಣೆಯ ಮುಂದೆಯೂ ಇವರು ಈ ಕಾರ್ಯವನ್ನು ಮಾಡಿಯೇ ಮಾಡುತ್ತಾರೆ ಹಿಂದೆಲ್ಲ 25000 ಜನಸಂಖ್ಯೆಗೆ ಒಬ್ಬ ಆರೋಗ್ಯ ಸಹಾಯಕಿ ಇರುತ್ತಿದ್ದರು. ಈಗ ಆ ಸಂಖ್ಯೆಯನ್ನು ಕಡಿಮೆಗೊಳಿಸಲಾಗಿದೆ ಅದನ್ನು ಈಗ 3000 ಜನಸಂಖ್ಯೆಗೆ ಒಬ್ಬರಂತೆ ಇಳಿಸಲಾಗಿದೆ , ಅವರ ಹುದ್ದೆಯನ್ನು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಎಂದು ಬದಲಾಯಿಸಿ ಅವರಿಗೆ ಆಶಾ ಕಾರ್ಯಕರ್ತೆಯರ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಹಾಯವನ್ನು ನೀಡಲಾಗಿದೆ ಹಿಂದಿಗಿಂತ ಅವರ ಕಾರ್ಯ ಈಗ ಸರಳವಾಗಿದೆ ಎಂದು ಅವರು ಹೇಳಿದರಲ್ಲದೆ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಅಧಿಕಾರಿಗಳನ್ನು ಗುರುತಿಸಿ ಗೌರವಿಸುವ ಲೇಖಕಿಯರ ಸಂಘದ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ತಮ್ಮ ಸೇವಾವಧಿಯ 32 ವರ್ಷಗಳಲ್ಲಿ 22 ವರ್ಷಗಳನ್ನು ಬೈಲಹೊಂಗಲದಲ್ಲಿಯೇ ಇನ್ನುಳಿದ 10 ವರ್ಷಗಳನ್ನು ಧಾರವಾಡದಲ್ಲಿ ಸೇವೆ ಸಲ್ಲಿಸಿದ ತಮಗೆ ಸಾಹಿತ್ಯದಲ್ಲಿ ಇರುವ ಆಸಕ್ತಿಯನ್ನು ಅವರು ನೆನಪಿಸಿಕೊಂಡರು ಎಡಬಿಡದೆ ಚಟುವಟಿಕೆಗಳಲ್ಲಿ ಇಂದಿಗೂ ಪುಸ್ತಕ ಓದುವ ನಿರಂತರವಾಗಿ ದಿನಪತ್ರಿಕೆಗಳನ್ನು ಓದುವ ಹವ್ಯಾಸ ನೆನಪಿಸಿಕೊಂಡರು ಮಾತೃ ಭಾಷೆಯಲ್ಲಿಯೇ ಅತ್ಯುತ್ತಮ ಶಿಕ್ಷಣ ಪಡೆಯುವುದು ಸಾಧ್ಯ ಎಂದ ಅವರು ಮಹಿಳಾ ಸಾಹಿತ್ಯ ಸಾಧಕಿಯರು ಮತ್ತು ಲೇಖಕಿಯರನ್ನು ಅವರು ಈ ಸಂದರ್ಭದಲ್ಲಿ ಅಭಿನಂದಿಸಿದರು, ತಮ್ಮ ಸೇವಾ ಅವಧಿಯಲ್ಲಿ ಮಹಿಳಾ ಆರೋಗ್ಯ ಸುರಕ್ಷಾಧಿಕಾರಿಗಳ ಏನೇ ಸಮಸ್ಯೆ ಇದ್ದರೂ ತ್ವರಿತವಾಗಿ ಪರಿಹರಿಸುವ ವಾಗ್ದಾನವನ್ನು ಅವರು ಈ ಸಂದರ್ಭದಲ್ಲಿ ಮಾಡಿದರಲ್ಲದೆ ಸತ್ಕಾರ ಮೂರ್ತಿಗಳನ್ನು ಅವರು ಅಭಿನಂದಿಸಿದರು.
ಸಮಾರಂಭದ ಮತ್ತೊಬ್ಬ ಮುಖ್ಯ ಅತಿಥಿ ಖಾನಾಪುರ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ. ಎ.ಕೆ.ಇಟಗಿ ಅವರು ರಾಷ್ಟ್ರೀಯತೆ ಕುರಿತು ಮಾತನಾಡಿ ನಮ್ಮ ಮಕ್ಕಳಲ್ಲಿ ರಾಷ್ಟ್ರವಾದದ ಕಲ್ಪನೆ, ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ ತುಂಬುವ ಕಾರ್ಯವನ್ನು ಮಾಡಬೇಕಿದೆ, ರಾಷ್ಟ್ರಗೀತೆ ರಾಷ್ಟ್ರಭಕ್ತಿ ಗೀತೆಗಳು ಅಪರಿಮಿತವಾದ ಶಕ್ತಿ ಇದೆ, ಒಕ್ಕಟ್ಟು ಇದೆ , ಬಲ ಇದೆ, ರಾಷ್ಟ್ರಗೀತೆ ಮತ್ತು ರಾಷ್ಟ್ರಭಕ್ತಿ ಗೀತೆಗಳ ಕುರಿತು ಪ್ರತಿಯೊಬ್ಬರಲ್ಲಿ ಪ್ರೀತಿಯನ್ನು ಬೆಳೆಸುವ ಕಾರ್ಯವಾಗಬೇಕು ಜಾತಿ ವರ್ಗ ಭೇದ ಭಾವಗಳ ತಾಂಡವ ನಿಲ್ಲಬೇಕು ದೇಶಾಭಿಮಾನದ ಸಂಕೇತಗಳು ಮೂಡಬೇಕು ರಾಷ್ಟ್ರೀಯತೆ ಕಟ್ಟಬೇಕು ರಾಷ್ಟ್ರವಾದ ಕಟ್ಟುವ ಜವಾಬ್ದಾರಿ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದು ಹೇಳಿದರು.
ದತ್ತಿದಾನಿಗಳಾದ ಮುರುಗೇಶ್ ಶಿವಪೂಜಿ ಮಾತನಾಡಿ ಕಾರ್ಯಕ್ರಮದ ಔಚಿತ್ಯವನ್ನು ವಿವರಿಸಿದರು. ಲೇಖಕಿಯರ ಸಂಘದ ಅಧ್ಯಕ್ಷೆ ಶ್ರೀಮತಿ ಜಯಶೀಲಾ ಬ್ಯಾಕೋಡ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶ್ರೀಮತಿ ಸಂಗೀತಾ ಶಿವಪೂಜಿ, ಶ್ರೀಮತಿ ಜಯಶ್ರೀ ನಿರಾಕಾರಿ, ಶ್ರೀಮತಿ ಯಮುನಾ ಕಂಬಾರ್, ಲೇಖಕಿಯರ ಸಂಘದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಪುಟ್ಟಿ ಉಪಸ್ಥಿತರಿದ್ದರು. ಲೇಖಕಿಯರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಭಾರತಿ ಮಠದ ಸ್ವಾಗತಿಸಿದರು, ಡಾ ಅನ್ನಪೂರ್ಣ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ಅನಿತಾ ಮಾಲಗತ್ತಿ ವಂದಿಸಿದರು, ಶ್ರೀಮತಿ ಪ್ರತಿಭಾ ಕಳ್ಳಿಮಠ ಸೇರಿದಂತೆ ಹಲವರು ರಾಷ್ಟ್ರಭಕ್ತಿ ಗೀತೆಗಳನ್ನು ಹಾಡಿದರು, ಶ್ರೀಮತಿ ಹೇಮಾವತಿ ಸೋನೊಳಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶ್ರೀಮತಿ ಸರ್ವಮಂಗಳ ಅರಳಿಮಟ್ಟಿ ಮತ್ತು ಸುಮಾ ಬೇವಿನಕೊಪ್ಪ ಮಠ ಅವರುಗಳು ಅತಿಥಿಗಳ ಪರಿಚಯ ಮಾಡಿದರು,
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಶ್ರೀಮತಿ ನೀಲಗಂಗಾ ಚಿರಂತಿಮಠ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಕೇಡರ ಸಂಘದ ಜಿಲ್ಲಾಧ್ಯಕ್ಷೆ ಶ್ರೀಮತಿ, ಮಂಜುಳಾ ಸ್ವಾಮಿ, ಶೈಲಜಾ ಭಿಂಗೆ ಮುಂತಾದವರು ಉಪಸ್ಥಿತರಿದ್ದರು.


Gadi Kannadiga

Leave a Reply