This is the title of the web page
This is the title of the web page

Please assign a menu to the primary menu location under menu

State

ಕ್ಷಯರೋಗ ಮುಕ್ತ ರಾಷ್ಟ್ರ ರೂಪಿಸಲು ಸರ್ವರೂ ಕೈಜೋಡಿಸಿ; ಡಾ.ಸಾದಿಯಾ


ಸಂಡೂರು: ಜು:17: ಕ್ಷಯರೋಗ ಮುಕ್ತ ರಾಷ್ಟ್ರ ರೂಪಿಸಲು ಸರ್ವರೂ ಕೈಜೊಡಿಸಿ; ಆಡಳಿತವೈದ್ಯಾಧಿಕಾರಿ ಡಾ.ಸಾದಿಯಾ ಹೇಳಿದರು. ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಆಯೋಜಿಸಲಾದ “ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ” ಸಮೀಕ್ಷೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಡಾ.ಸಾದಿಯಾ ಅವರು,ಎರಡು ವಾರಕ್ಕಿಂತ ಹೆಚ್ಚು ಕಫ ಸಹಿತ ಕೆಮ್ಮು,ಕಫದಲ್ಲಿ ರಕ್ತದ ಕಣಗಳು,
ಸಂಜೆ ಜ್ವರ ಬರುವುದು,
ದೇಹದ ತೂಕ ಕಡಿಮೆಯಾಗುವುದು,ಹಸಿವು ಇಲ್ಲದಿರುವುದು ಇಂತಹ ಲಕ್ಷಣಗಳು ಇರುವವರನ್ನು ಕಫ ಪರೀಕ್ಷೆ ಮಾಡಲು ಕಳಿಸಿ ಕೊಡಿ, ರೊಗವನ್ನು ಬೇಗ ಪತ್ತೆ ಹಚ್ಚಿ ಇತರರಿಗೂ ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿ ಪೂರ್ಣ ಚಿಕಿತ್ಸೆ ನೀಡಲಾಗುತ್ತದೆ, ನಿಕ್ಷಯ್ ಯೊಜನೆಯಲ್ಲಿ 500/- ರೂ ಗಳ ಧನ ಸಹಾಯ ನೀಡಲಾಗುವುದು, ಇಲಾಖೆಯೊಂದಿಗೆ ಸರ್ವರೂ ಕೈ ಜೋಡಿಸಲು ಮನವಿ ಮಾಡಿದರು,
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ದಿನಾಂಕ 17.07.2023 ರಿಂದ 02.08.2023 ರವರೆಗೆ ಸಮೀಕ್ಷೆ ಹಮ್ಮಿಕೊಳ್ಳಲಾಗಿದೆ, ಸ್ಲಮ್, ಕಾರ್ಖಾನೆ ಕೆಲಸಕ್ಕೆ ಹೊಗುವವರು,ಬೀಡಿ ಕಟ್ಟುವವರು,ಸಕ್ಕರೆ ಕಾಯಿಲೆ ಮದ್ಯಪಾನಿಗಳು,ಅಪೌಷ್ಟಿಕತೆ ಹೊಂದಿದವರಲ್ಲಿ  ಮತ್ತು ಮಾದಕ ವ್ಯಸನಿಗಳಲ್ಲಿ ಕ್ಷಯರೋಗ ಲಕ್ಷಣಗಳು ಹೆಚ್ಚಾಗಿ ಕಂಡುಬರುವುದರಿಂದ ಅಂತಹ ಸ್ಥಳಗಳನ್ನು ಗುರುತಿಸಿ ಸಮೀಕ್ಷೆ ಮಾಡಲಾಗುವುದು, 2025 ಕ್ಕೆ ಪ್ರಧಾನಿಯವರ ಆಶಯದಂತೆ ಕ್ಷಯರೋಗ ಮುಕ್ತ ರಾಷ್ಟ್ರ ರೂಪಿಸಲು ಈ ಸಮೀಕ್ಷೆ ಸಹಕಾರಿಯಾಗಿದೆ ಎಲ್ಲರೂ ಕೈಜೋಡಿಸೋಣ ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್, ಡಾ.ಅನುಷಾ, ಸಿಬ್ಬಂದಿ ಲಕ್ಷ್ಮಿ,ಗೀತಾ, ರೇಷ್ಮಾ,ಮಾಲಾ, ಹರ್ಷ, ವೆಂಕಟೇಶ್, ಶಶಿಧರ,ಮಂಜುನಾಥ, ಇಮ್ರಾನ್,ಸಂಗೀತಾ, ಶ್ರೀರಾಮುಲು,ಮಾರೇಶ,ಅನ್ಸಾರಿ,ರೋಜಾ,ರತ್ನಮ್ಮ, ಫಣಿರಾಜ್,ಮೌನೇಶ ಇತರರು ಉಪಸ್ಥಿತರಿದ್ದರು

Leave a Reply