This is the title of the web page
This is the title of the web page

Please assign a menu to the primary menu location under menu

State

ಬಾಯಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ;ದಂತ ವೈದ್ಯೆ ಡಾ.ಸಾದಿಯಾ


ಸಂಡೂರು: ಮಾ: 20: ಬಾಯಿ ಅರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ ; ದಂತ ವೈದ್ಯೆ ಡಾ.ಸಾದಿಯಾ ಹೇಳಿದರು
ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ವಿಶ್ವ ಬಾಯಿ ಅರೋಗ್ಯ ದಿನಾಚರಣೆಯ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು, ಮಾನವನ ದೇಹದಲ್ಲಿ ಬಾಯಿ ಪ್ರಮುಖ ಅಂಗ, ಬಾಯಿ ಆರೋಗ್ಯ ಎಂದರೆ ಕೇವಲ ಹಲ್ಲುಗಳ ರಕ್ಷಣೆ ಮಾತ್ರವಲ್ಲ, ವಸಡು, ಬಾಯಿಯ ಚರ್ಮ,ನಾಲಿಗೆ, ಎಂಜಲು ಗ್ರಂಥಿಗಳ ರಕ್ಷಣೆಯೂ ಸೇರಿದೆ,ಬಾಯಿ ವಾಸನೆ ಬರದಹಾಗೆ ಬಾಯಿಯನ್ನು ನೀರಿನಿಂದ ಸ್ವಚ್ಚವಾಗಿ ತೊಳೆಯಬೇಕು, ಹಲ್ಲುಜ್ಜುವ ಮಂಚೆ ಏನನ್ನು ಸೇವಿಸಬಾರದು,  ಮಕ್ಕಳಿಗೆ ಆರು ತಿಂಗಳಿನಿಂದ  ಹಾಲುಹಲ್ಲು ಬರಲು ಪ್ರಾರಂಭವಾಗಿ ಆರು  ವರ್ಷದ ನಂತರ ಉದುರಿ ಪರ್ಮನೆಂಟ್ ಹಲ್ಲುಗಳ ಬರುತ್ತವೆ, ಮಕ್ಕಳಿದ್ದಾಗಲೇ ಹಲ್ಲಗಳ ಬಗ್ಗೆ ರಕ್ಷಣೆ ಬಗ್ಗೆ ಪೋಷಕರು ತಿಳಿಸಿಕೊಡಬೇಕು, ಪ್ರತಿ ಆರು ತಿಂಗಳಿಗೊಮ್ಮೆ ದಂತ ತಪಾಸಣೆ ಮಾಡಿಸಬೇಕು ಎಂದು ತಿಳಿಸಿದರು,
ತಾಲೂಕು ಅರೋಗ್ಯಾಧಿಕಾರಿ ಕುಶಾಲ್ ರಾಜ್ ಅವರು ಮಾತನಾಡಿ ಹುಳುಕು ಹಲ್ಲುಗಳ ರಕ್ಷಣೆ ಮಾಡಲು ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರಗಳು ಇವೆ,  ಹುಳುಕು ಬಿಳುವ ಮುನ್ನ ಎಚ್ಚರಿಕೆ ವಹಿಸ ಬೇಕು ಎಲ್ಲಾ  ಸೌಲಭ್ಯಗಳನ್ನು ಪಡೆದು ಕೊಂಡು ಹಲ್ಲುಗಳ ರಕ್ಷಣೆ ಮಾಡಿಕೊಳ್ಳ ಬೇಕು ಎಂದು ತಿಳಿಸಿದರು,
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಮಾತನಾಡಿ ಬಾಯಿ  ರೋಗಗಳ ಹೆಬ್ಬಾಗಿಲು, ಬಾಯಿಯ ಆರೋಗ್ಯ ರಕ್ಷಣೆ ಬಗ್ಗೆ ಪ್ರತಿಯೊಬ್ಬರೂ ಜಾಗೃತೆ ವಹಿಸ ಬೇಕು, ದಿನಕ್ಕೆರಡು ಬಾರಿ ಬ್ರಷ್ ಮಾಡಬೇಕು,ಮೂರು ತಿಂಗಳಿಗೊಮ್ಮೆ ಬ್ರಷ್ ಬದಲಾಯಿಸ ಬೇಕು,ಚಾಕ್ ಲೇಟ್ ತಿನ್ನುವ ಮಕ್ಕಳಿಗೆ ಚೆನ್ನಾಗಿ ನೀರು ಪುಕ್ಕಳಿಸುವಂತೆ ಸಲಹೆ ನೀಡಬೇಕು, ಹಲ್ಲುಗಳಲ್ಲಿ ಕಡ್ಡಿ ಹಾಕಬಾರದು,     ವಿಷೇಶವಾಗಿ ಶಾಲಾ ಮಕ್ಕಳಿಗೆ ದಂತ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಹೆಚ್.ಹನುಮಂತ, ಗ್ರಾಮದ ಮುಖಂಡರಾದ ಕಟ್ಟೆಪ್ಪ, ಮಂಜುನಾಥ್, ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್, ಸ್ತ್ರೀರೋಗ ತಜ್ಞೆ  ಡಾ.ರಜಿಯಾಬೇಗಂ,ಡಾ.ಪ್ರಿಯಾಂಕಾ,ಹರ್ಷ,ಪ್ರಶಾಂತ್,ಮಂಜುನಾಥ್,ಮಾರೇಶ್,ರೂಪಾ, ಶ್ರೀದೇವಿ,ಶಶಿಧರ್, ನಿಜಾಮುದ್ದೀನ್, ಯಂಕಪ್ಪ,ರೋಜಾ,ಸಿದ್ದೇಶ್,ತಿಪ್ಪೇಸ್ವಾಮಿ,ಭಾಸ್ಕರ್,ಮಾಬುಸಾಬ್ ಇತರರು ಉಪಸ್ಥಿತರಿದ್ದರು

Leave a Reply