This is the title of the web page
This is the title of the web page

Please assign a menu to the primary menu location under menu

State

ಗಂಗಾವತಿ ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಡಾ. ಸಲಾಹುದ್ದೀನ್ ಹಾಗೂ ಗ್ರೂಪ್ ಡಿ. ನೌಕರ ವೀರೇಶ್ ಎಸಿಬಿ ಬಲೆಗೆ


ಗಂಗಾವತಿ ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ
ಡಾ. ಸಲಾಹುದ್ದೀನ್ ಹಾಗೂ ಗ್ರೂಪ್ ಡಿ. ನೌಕರ ವೀರೇಶ್ ಎಸಿಬಿ ಬಲೆಗೆ

ಗಂಗಾವತಿ:-ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಸರಕಾರಿ ಉಪವಿಭಾಗ ಆಸ್ಪತ್ರೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲುಬು ಮತ್ತು ಕೀಲು ತಜ್ಞರಾದ ಡಾ: ಸಲಾವುದ್ದಿನ್ ಹಾಗೂ ಗ್ರೂಪ್ ಡಿ ನೌಕರ ವೀರೇಶ್ ರವರು ಆಸ್ಪತ್ರೆಗೆ ದಾಖಲಾದ ರೋಗಿಯನ್ನು ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲು 6000=00 ರೂ ಲಂಚದ ಹಣ ಸ್ವೀಕರಿಸುವಾಗ ಕೊಪ್ಪಳ ಎಸಿಬಿ ಬಲೆಗೆ ಬಿದ್ದಿರುತ್ತಾರೆ.

ಗಂಗಾವತಿ ತಾಲೂಕಿನ ವಡ್ಡರಹಟ್ಟಿ ನಿವಾಸಿ ಶ್ರೀ ಕೃಷ್ಣಕಿಶೋರ ಇವರು ವಡ್ಡರಹಟ್ಟಿ ಗ್ರಾಮದ ನಾಗಪ್ಪ ಎಂಬುವರನ್ನು ಚಿಕಿತ್ಸೆ ಕುರಿತು ಸರಕಾರಿ ಉಪವಿಭಾಗ ಆಸ್ಪತ್ರೆ ಗಂಗಾವತಿ ಇಲ್ಲಿ ದಾಖಲಿಸಿದ್ದು ಚಿಕಿತ್ಸೆಗಾಗಿ 12000/- ರೂಪಾಯಿ ಲಂಚಕ್ಕೆ ಒತ್ತಾಯಿಸಿ, ಮುಂಗಡವಾಗಿ 6000/- ರೂಪಾಯಿ ಹಣವನ್ನು ವೀರೇಶ್ ಇವರ ಮೂಲಕ ಪಡೆದುಕೊಂಡಿರುತ್ತಾರೆ.ನಿನ್ನೆ ದಿನಾಂಕ 21-01- 2022 ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗಪ್ಪ ಇವರನ್ನು ಡಿಸ್ಚಾರ್ಜ್ ಮಾಡಲು ಕೇಳಿಕೊಂಡಾಗ ಬಾಕಿ ಉಳಿದ 6000/- ರೂಪಾಯಿ ಹಣ ಕೊಡು ಎಂದು ವೈದ್ಯರಾದ ಡಾ: ಸಲಾವುದ್ದಿನ್ ಇವರು ಒತ್ತಾಯಿಸಿರುತ್ತಾರೆ. ಇಂದು ದಿ: 22-01-2022 ರಂದು ಬಾಕಿ ಉಳಿದ 6000/- ಲಂಚದ ಹಣವನ್ನು ಡಾ: ಸಲಾವುದ್ದಿನ್ ಇವರ ಸೂಚನೆಯಂತೆ ಗ್ರೂಪ್ ಡಿ ನೌಕರರಾದ ವೀರೇಶ್ ಬಾರಕೇರ ಇವರು ಪಡೆದುಕೊಂಡು ಕೊಪ್ಪಳ ACB ಬಲೆಗೆ ಬಿದ್ದಿರುತ್ತಾರೆ.

ಈ ಬಗ್ಗೆ ಕೊಪ್ಪಳದ ಎಸಿಬಿ ಠಾಣೆಯಲ್ಲಿ ದೂರು ನೀಡಿದ್ದು, ಎಸಿಬಿ ಡಿಎಸ್ ಪಿ ಶ್ರೀ ಶಿವಕುಮಾರ್ ಎಮ್ ಸಿ ರವರು ಪ್ರಕರಣ ದಾಖಲಿಸಿ ಬಲೆ ಬೀಸಿದ್ದರು.

ಇಬ್ಬರನ್ನು ಎಸಿಬಿ ತಂಡವು ವಶಕ್ಕೆ ಪಡೆದಿದ್ದು ನ್ಯಾಯಾಂಗ ಬಂಧನಕ್ಕೆ ಕಳಿಸಲಾಗುವುದು  ಎಂದು

ಬಳ್ಳಾರಿ ವಲಯದ ಎಸಿಬಿ SP ಶ್ರೀ ಹರಿಬಾಬು ರವರ ಮಾರ್ಗದರ್ಶನದಲ್ಲಿ, ಕೊಪ್ಪಳದ ಎಸಿಬಿ ಡಿಎಸ್ ಪಿ ಶ್ರೀ ಶಿವಕುಮಾರ್ ರವರ ನೇತೃತ್ವದಲ್ಲಿ ದಾಳಿ ನಡೆದಿರುತ್ತದೆ. ಎಸಿಬಿ ಇನ್ಸ್ ಪೆಕ್ಟರ್ ರವರಾದ ಶ್ರೀ ಆಂಜನೇಯ ಡಿಎಸ್. ,ಶ್ರೀ ಶಿವರಾಜ್ ಇಂಗಳೆ, ಸಿಬ್ಬಂದಿಗಳಾದ ಶ್ರೀ ಸಿದ್ದಯ್ಯ, ರಂಗನಾಥ, ಜಗದೀಶ್, ಗಣೇಶ್ ಗೌಡ, ಸವಿತಾ ಸಜ್ಜನ್, ಆನಂದ ಬಸ್ತಿ, ಯಮುನಾನಾಯ್ಕ ದಾಳಿಯಲ್ಲಿ ಭಾಗವಹಿಸಿದ್ದರು

ವರದಿ
(ಹನುಮೇಶ ಬಟಾರಿ ಗಂಗಾವತಿ)


Gadi Kannadiga

Leave a Reply