This is the title of the web page
This is the title of the web page

Please assign a menu to the primary menu location under menu

State

ಬಿರು ಬೇಸಿಗೆಗೆ ತಂಪು ಪಾನೀಯಗಳಿಗೆ ಮರುಳಾಗದಿರಿ: ಡಾ. ಸೌರಭ ಹಿರೇಮಠ


ಬೆಳಗಾವಿ: ಬೇಸಿಗೆ ಕಾಲದಲ್ಲಿ ವಿದೇಶಿ ತಂಪು ಪಾನೀಯಗಳಿಗೆ ಮರುಳಾಗದೆ ದೇಶೀಯ ಪಾನೀಯಗಳಾದ ಎಳನೀರು ನಿಂಬು ಶರಬತ್ ಮಜ್ಜಿಗೆ ದೇಹಕ್ಕೆ ತಂಪು ನೀಡುವ ಪಾನೀಯಗಳನ್ನು ಸೇವಿಸಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಹೆಸರಾಂತ ವೈದ್ಯರಾದ ಡಾ.ಸೌರಬ ಹಿರೇಮಠ ಅವರು ಕೆ.ಎಲ್.ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ಬೆಳಗಾವಿ ಖಾನಾಪುರ ಹೆದ್ದಾರಿಯಲ್ಲಿರುವ ಲೋಕಮಾನ್ಯ ಮಲ್ಟಿಪರ್ಪಸ ಕೊ-ಆಪರೇಟಿವ್ ಸೊಸೈಟಿಯ ಖಾನಾಪುರ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು, ಅದರ ಉದ್ಘಾಟನಾ ಅಂಗವಾಗಿ ಮಾತನಾಡುತ್ತಿದ್ದರು. ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವದು ಹಾಗೂ ಗಟಾರಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಇದರಿಂದ ಡೆಂಗ್ಯು ಮಲೇರಿಯಾದಂತಹ ಮಾರಕ ರೋಗಗಳು ಬಾರದಂತೆ ತಡೆಹಿಡಿಯಬಹುದು ಎಂದು ತಿಳುವಳಿಕೆ ನೀಡಿದರು
ಶಿಬಿರದಲ್ಲಿ ೨೫೦ ಕ್ಕೂ ಅಧಿಕ ನಾಗರಿಕರನ್ನು ತಪಾಶಿಸಲಾಯಿತು. ಅದರಲ್ಲಿ ೮೦ ಜನರಿಗೆ ಮೆಡಿಸಿನ ವಿಭಾಗದ ವೈದ್ಯರು ತಪಾಸಣೆ ಮಾಡಿ ೧೫ ಜನರಿಗೆ ಅತಿರಕ್ತದೊತ್ತಡ, ೮ ಜನರಿಗೆ ಮಧುಮೇಹದ ಸಮಸ್ಯೆ, ೩೭ ಜನರಿಗೆ ಎಲುಬು ಕೀಲು ವೈದ್ಯರಿಂದ ತಪಾಸಣೆ ಮಾಡಲಾಗಿ ಅದರಲ್ಲಿ ೧೮ ಜನರಿಗೆ ಸಂಧಿವಾತ ಮತ್ತಿತರೆ ಸಮಸ್ಯೆಗಳಿರುವದು ತಿಳಿದುಬಂದಿತು, ೪೨ ಜನರಿಗೆ ಕಣ್ಣಿನ ವೈದ್ಯರು ತಪಾಸಣೆ ಮಾಡಲಾಗಿ ಅದರಲ್ಲಿ ೧೩ ಜನರಿಗೆ ಮೋತಿಬಿಂದು ಮತ್ತಿತರೆ ಸಮಸ್ಯೆಗಳಿರುವದು ತಿಳಿದುಬಂದಿತು, ೧೮ ಜನ ಗರ್ಭಿಣಿಯರು ಮತ್ತು ಮಹಿಳೆಯರು ತಪಾಸಣೆಗೊಳಪಟ್ಟರು, ಶಸ್ತ್ರಚಿಕಿತ್ಸೆಯ ವಿಭಾಗÀದಲ್ಲಿ ಸುಮಾರು ೨೦ ಜನರು ತಪಸಣೆಮಾಡಿಸಿಕೊಂಡರು, ಚಿಕ್ಕಮಕ್ಕಳ ವೈದ್ಯರು ೩೫ ಮಕ್ಕಳನ್ನು ತಪಾಸಣೆ ಮಾಡಿದರು. ಅದರಲ್ಲಿ ೪ ಮಕ್ಕಳಿಗೆ ಅಪೌಷ್ಟಿಕತೆ ಮತ್ತಿತರೆ ಸಮಸ್ಯೆಗಳಿರುವದು ತಿಳಿದುಬಂದಿತು. ಈ ಎಲ್ಲ ನಾಗರಿಕರಿಗೆ ಆಸ್ಪತ್ರೆಯ ಅತ್ಯಲ್ಪ ದರದ ಸೇವೆಗಳನ್ನು ಉಪಯೋಗಿಸಿಕೊಳ್ಳಲು ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು ಸೂಚಿಸಿದ್ದಾರೆ.
ಶಿಬಿರದಲ್ಲಿ ವೈದ್ಯರುಗಳಾದ ಮೆಡಿಸಿನ್ ವಿಭಾಗದ ಹೆಸರಾಂತ ವೈದ್ಯರಾದ ಡಾ.ಸೌರಬ ಹಿರೇಮಠ, ಚಿಕ್ಕಮಕ್ಕಳ ವೈದ್ಯರಾದ, ಡಾ. ಬಸವರಾಜ ಕುಡಸೋಮಣ್ಣವರ, ಹಿರಿಯ ಶಸ್ತ್ರಚಿಕಿತ್ಸಕರಾದ ಡಾ. ಶಶಿ ಉಪ್ಪಿನ, ಹೆಸರಾಂತ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆ ಡಾ. ಅಮ್ರತಾ ಸಾಲ್ಕರ ಹಾಗೂ ಎಲುಬು ಕೀಲು ವೈದ್ಯರಾದ ಡಾ. ಆನಂದ ಖಟವಿ ಮತ್ತು ಹೆಸರಾಂತ ಕಣ್ಣಿನ ತಜ್ಞರಾದ ಡಾ. ವಿಶಾಲ ಖಾಕಂಡಕಿ ಅವರು ಭಾಗವಹಿಸಿ ನಾಗರಿಕರನ್ನು ತಪಾಶಿಸಿ ಉಚಿತವಾಗಿ ಔಷಧಿಗಳನ್ನು ವಿತರಿಸಿದರು. ಲೋಕಮಾನ್ಯ ಮಲ್ಟಿಪರ್ಪಸ ಕೊ-ಆಪರೆಟಿವ್ ಸೊಸೈಟಿಯ ಖಾನಾಪುರ ಶಾಖೆಯ ಮ್ಯಾನೇಜರ ಶ್ರೀ ಸಂಜಯ ಪಾಖರೆ ಹಾಗೂ ಅವರು ಸಿಬ್ಬಂದಿ ಮತ್ತು ಖಾನಾಪುರ ಪಟ್ಟಣದ ನಾಗರಿಕರು ಭಾಗವಹಿಸಿದ್ದರು.


Leave a Reply