ಬಳ್ಳಾರಿಯ ಪ್ರತಿಷ್ಠಿತ ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಬಿ.ಇ. ಪ್ರಥಮ ವರ್ಷದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಬಿಐಟಿಎಂ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಪ್ರಗತಿಗೆ ತನ್ನದೆಯಾದ ವಿಶಿಷ್ಠ ಕೊಡುಗೆ ನೀಡುತ್ತಿರುವುದು ಸಂತಸ ತಂದಿದೆ. ನಮ್ಮ ಟ್ರಸ್ಟ್ ನಡೆಸುವ ವಿದ್ಯಾ ಸಂಸ್ಥೆಗಳಲ್ಲಿ ಭರವಸೆಯಿಟ್ಟು ಇಂದು ಸಾವಿರಾರು ಮಕ್ಕಳು ವಿದ್ಯೆ ಪಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕಾಲೇಜಿನ ಅಧ್ಯಕ್ಷರಾದ ಡಾ.ಯಶವಂತ್ ಭೂಪಾಲ್, ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿಕೆಯಲ್ಲಿ ನಾಲ್ಕು ವರ್ಷ ತೊಡಗಿಕೊಂಡರೆ, ಮುಂದಿನ ತಮ್ಮ 40 ವರ್ಷಗಳ ಜೀವನ ಉಜ್ವಲವಾಗಿರುತ್ತೆ ಎಂದರು. ಬಿಐಟಿಎಂ ಸಂಸ್ಥೆಯಲ್ಲಿ ಪರಿಣಾಮಕಾರಿ ಕಲಿಕೆಗೆ ಒತ್ತು ಕೊಟ್ಟು, ಹಲವು ಬಗೆಯ ವೃತ್ತಿಪರ ಕೌಶಲ್ಯಗಳನ್ನು ಉತ್ತೇಜಿಸಿ ತರಬೇತಿ ನೀಡಲಾಗುವುದು. ವಿದ್ಯಾರ್ಥಿಗಳು ಶ್ರದ್ಧೆಯಿಂದ ನಿತ್ಯವೂ ಅಭ್ಯಾಸ ಮಾಡಿ ಸಂಸ್ಥೆಯ ವಿವಿಧ ಸೌಲಭ್ಯಗಳನ್ನು ಸುದುಪಯೋಗಮಾಡಿಕೊಳ್ಳಿ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
“ವಿದ್ಯಾರ್ಥಿಗಳು ಉತ್ತಮವಾದ ಮಾನವೀಯ ಮತ್ತು ಕೌಟಿಂಬಿಕ ಮೌಲ್ಯಗಳನ್ನು ರೂಡಿಸಿಕೊಳ್ಳಬೇಕು. ಪಾಲಕರಿಗೆ ಯಾವತ್ತಿಗೂ ಸಹಕಾರ ನೀಡಿ ಅವರಿಗೆ ಬೆನ್ನೆಲುಬಾಗಿ ನಿಲ್ಲಿ. ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಕಡೆಯಿಂದ ವಿದ್ಯಾರ್ಥಿ ಸ್ಕಾಲರ್‌ಷಿಪ್ ನೀಡಲಾಗುವುದು. ನಿಮ್ಮ ತಂದೆ-ತಾಯಿಗಳ ಕನಸನ್ನು ಸಾಕಾರಗೊಳಿಸಿ. ಭಾರತದ ಸಂವಿಧಾನಕ್ಕೆ ಬದ್ಧವಾಗಿ ಶಾಂತಿ ಮತ್ತು ಸಹಬಾಳ್ವೆಯ ಜೀವನ ನಡೆಸಬೇಕು. ಈ ಮೂಲಕ ದೇಶದ ಉತ್ತಮ ಪ್ರಜೆಗಳಾಗಿ ಮತ್ತು ತಮ್ಮ ಪಾಲಕರಿಗೆ ಆಸರೆಯಾಗಿ ಜೀವನದ್ದ್ದಕ್ಕೂ ನಿಲ್ಲಬೇಕು” ಎಂದು ವಿದ್ಯಾರ್ಥಿಗಳಿಗೆ ಕಾಲೇಜಿನ ನಿರ್ದೇಶಕ ವೈ.ಜೆ. ಪೃಥ್ವಿರಾಜ್ ಭೂಪಾಲ್ ಕರೆ ನೀಡಿದರು.
ಟ್ರಸ್ಟಿ ಅಶೋಕ್ ಭೂಪಾಲ್ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಪ್ರಾಚಾರ್ಯರಾದ ಡಾ. ಯಡವಳ್ಳಿ ಬಸವರಾಜ್ ಕಾಲೇಜಿನ ಕುರಿತು ಸಮಗ್ರ ಮಾಹಿತಿ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.
ಟ್ರಸ್ಟಿಗಳಾದ ಅಮರ್ ರಾಜ್ ಭೂಪಾಲ್, ವಿ.ಜೆ.ಭರತ್, ಉಪಪ್ರಾಚಾರ್ಯರು ಡಾ. ಬಿ.ಎಸ್, ಖೇಣೇದ್, ಪರೀಕ್ಷಾ ವಿಭಾಗದ ಮುಖ್ಯಸ್ಥರಾದ ಡಾ.ರಾಘವೇಂದ್ರ ಜೋಷಿ, ಡೀನ್ (ಆರ್&ಡಿ) ಡಾ.ವಿ.ಸಿ.ಪಾಟೀಲ್ ಮತ್ತು ಎಲ್ಲಾ ವಿಭಾಗಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹೊಸ ವಿದ್ಯಾರ್ಥಿಗಳು ಮತ್ತು ಪಾಲಕ ಪೋಷಕರು ಹಾಜರಿದ್ದರು.
ಭೌತವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಟಿ. ಮಾಚಪ್ಪ, ರಸಾಯನ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಸುರೇಶ್ ಮತ್ತು ಡಾ. ಎಸ್.ಮಂಜುನಾಥ ಕಾರ್ಯಕ್ರಮ ನಿರ್ವಹಿಸಿದರು.