ಬೆಳಗಾವಿ: ವಿದ್ಯಾರ್ಥಿಗಳು ತಮ್ಮ ಪ್ರಥಮ ಆಯ್ಕೆಯ ಮೂಲಕ ಉದ್ಯೋಗವನ್ನು ಗಳಿಸಿಕೊಳ್ಳುವುದು ಬಹಳ ಮಹತ್ವದ್ದು ಹಾಗೂ ಉದ್ಯೋಗ ಸ್ಥಳದಲ್ಲಿ ತಮ್ಮ ಕೌಶಲ್ಯಕಲೆಗಳನ್ನು ಬಳಸಿಕೊಂಡು ಪ್ರಗತಿ ಹೊಂದುವತ್ತ ವಿಚಾರಿಸಬೇಕು. ಕೆಲಸಕಾರ್ಯಗಳಲ್ಲಿ ಹಾಗೂ ತಮ್ಮ ವೈಯಕ್ತಿಕ ಜೀವನದಲ್ಲಿ ಸಮತೋಲನ ಹೊಂದಬೇಕೆಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು ಸಿಪಿಸಿ) ಪ್ಲೇಸ್‌ಮೆಂಟ ನಿರ್ದೇಶಕರಾದ ಡಾ. ಶ್ರೀಕಾಂತ ಅಂಬೇಕರ ಕರೆ ನೀಡಿದರು.
ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಶುಕ್ರವಾರ, ದಿನಾಂಕ ೧೯.೦೫.೨೦೨೩ ರಂದು ಉದ್ಯೋಗ ನಿಯೋಜನೆ-೨೦೨೩ (ಪ್ಲೇಸ್‌ಮೆಂಟ ಡೇ – ೨೦೨೩) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗೌರವಾನ್ವಿತ ಅತಿಥಿ, ಅಕ್ಯಾಡೆಮಿಕ್ ಅಡ್ವೆöÊಜರ್ ಡಾ. ಡಿ.ಎಚ್.ರಾವ್ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಶಕ್ತಿ ಹಾಗೂ ಗಮನಗಳಿಂದ ತಮ್ಮ ಇಷ್ಟವಾದ ಉದ್ಯೋಗಗಳನ್ನು ಆರಿಸಿಕೊಂಡು ನಿಧಾನ ಮತ್ತು ಸ್ಥಿರವಾದ ಕೆಲಸಗಳಲ್ಲಿ ಆಸಕ್ತಿಯನ್ನು ಹೊಂದಿ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಆನಂದ ದೇಶಪಾಂಡೆ ಮಾತನಾಡಿ, ವಿದ್ಯಾರ್ಥಿಗಳು ತಾವು ಗಳಿಸುವ ಆದಾಯದಲ್ಲಿ ಶೇ.೩೦ ರಿಂದ ಶೇ.೪೦ ರಷ್ಟು ಹಣವನ್ನು ತಂದೆ-ತಾಯಿಗಳಿಗೆ ಕೊಡುವುದು ಹಾಗೂ ಅವರನ್ನು ವೃದ್ಧಾಶ್ರಮಕ್ಕೆ ಬಿಡದೆ ತಮ್ಮಲ್ಲಿಯೇ ಇಟ್ಟುಕೊಂಡು ಜೀವನ ನಡೆಸಲು ಕರೆ ನೀಡಿದರು.
ಪ್ರೊ. ಮಂಜುಶ್ರಿ ಹಾವಣ್ಣವರ, ಸಂಯೋಜನಾಧಿಕಾರಿ ಪ್ಲೇಸ್‌ಮೆಂಟ ರಿಪೊರ್ಟ ಓದಿ ಹೇಳುತ್ತಾ, ಉದ್ಯೋಗ ನಿಯೋಜನೆಯಿಂದ ಎಲ್ಲ ವಿದ್ಯಾರ್ಥಿಗಳಿಗೆ ತರಬೇತುಗೊಳಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ೧೨೦ ಕ್ಕೂ ಅಧಿಕ ಸರಕು ಹಾಗೂ ಉತ್ಪನ್ನ ಕಂಪನಿಗಳು ಭಾಗವಹಿಸಿದ್ದು, ಇದರಲ್ಲಿ ಕಾಲೇಜಿನ ಶೇ.೭೦ ರಿಂದ ಶೇ.೮೦ ರಷ್ಟು ವಿದ್ಯಾರ್ಥಿಗಳು ಉದ್ಯೋಗಗಳನ್ನು ದೊರಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ವರ್ಷಕ್ಕೆ ೬ ರಿಂದ ೧೦ ಲಕ್ಷಗಳ ವೇತನ ದೊರಕಿಸಿಕೊಂಡಿದ್ದಾರೆ ಎಂದು ತಿಳಿಸಿದರು.ಕಾಲೇಜಿನ ಪ್ಲೇಸಮೆಂಟ ಅಧಿಕಾರಿ ಪ್ರೊ. ವಿಶಾಲಕೀರ್ತಿ ಪಾಟೀಲ ಉದ್ಯೋಗ ನಿಯೋಜನೆಯ ವರದಿಯ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ವಿಭಾಗಗಳ ಮುಖ್ಯಸ್ಥರು, ಶಿಕ್ಷಕ-ಶಿಕ್ಷಕೇತರ ವೃಂದ, ಸಿಬ್ಬಂದಿಗಳು ಸೇರಿದಂತೆ ಉದ್ಯೋಗ ಗಳಿಸಿಕೊಂಡ ವಿದ್ಯಾರ್ಥಿಗಳು ಹಾಗೂ ಅವರುಗಳ ಪಾಲಕರು ಉಪಸ್ಥಿತರಿದ್ದರು.
ಪ್ರೊ. ವಿಶಾಲಕೀರ್ತಿ ಪಾಟೀಲ ಸ್ವಾಗತಿಸಿದರು. ಪ್ರೊ. ಕಿರಣ ಇಟಗಿ ಹಾಗೂ ಪ್ರೊ. ಶ್ರೀರಾಮ ಕೆ.ವಿ. ಪರಿಚಯಿಸಿದರು. ಪ್ರೊ. ಪ್ರಿಯಾಂಕಾ ಪೂಜಾರಿ ನಿರೂಪಿಸಿದರು. ಪ್ರೊ. ಪವನ ಕೋರ್ಲಹಳ್ಳಿ ವಂದಿಸಿದರು.
Gadi Kannadiga > Local News > ಆಯ್ಕೆ ಕೆಲಸದಿಂದ ಪ್ರಗತಿ ಹೊಂದಲು ಕರೆ : ಡಾ. ಶ್ರೀಕಾಂತ ಅಂಬೇಕರ
ಆಯ್ಕೆ ಕೆಲಸದಿಂದ ಪ್ರಗತಿ ಹೊಂದಲು ಕರೆ : ಡಾ. ಶ್ರೀಕಾಂತ ಅಂಬೇಕರ
Suresh23/05/2023
posted on
