ಯಮಕನಮರಡಿ: ರೈತ ಉತ್ಪಾದಕರ ಸಂಸ್ಥೆಗಳ ಮೂಲಕ ರೈತರಿಗೆ ಕುರಿಗಾರರಿಗೆ ಅರಿವು ಮೂಡಿಸಿ ತಾಂತ್ರಿಕ ಸಲಹೆಗಳನ್ನು ನೀಡಿ ಹೆಚ್ಚು ಸಬಲರನ್ನಾಗಿ ಮಾಡಿ ಆರ್ಥಿಕ ಮಟ್ಟವನ್ನು ಸುಧಾರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಬೆಳಗಾವಿ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಉಪನಿರ್ದೇಶಕ ಡಾ. ಸುಧಾ ದೇವರೆಡ್ಡಿ ಹೇಳಿದರು.
ಅವರು ಮಂಗಳವಾರ ದಿ. ೧೮ ರಂದು ಹಿಡಕಲ್ ಡ್ಯಾಮ-ಶಿಂದಿಹಟ್ಟಿಯಲ್ಲಿ ಪಶುಪಾಲನೆ ಮತ್ತು ವೈದ್ಯಕೀಯ ಸೇವಾ ಇಲಾಖೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ ಬೆಳಗಾವಿ ಹಾಗೂ ಶಿಂದಿಹಟ್ಟಿಯ ಬಿರೇಶ್ವರ ಕುರಿ ಮತ್ತು ಉಣ್ಣೆ ರೈತ ಉತ್ಪಾದಕರ ಕಂಪನಿ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಎರಡು ದಿನಗಳ ಕಾಲ ನಡೆದ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಸಮಾರೋಪದಲ್ಲಿ ಮಾತನಾಡಿದರು.
ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಲು ಕುರಿಗಾರರು ತಮ್ಮ ಕುರಿಗಳನ್ನು ಮೊಬೈಲ ಆಪ್ ಮೂಲಕ ಮಾರಾಟ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಶಿಂದಿಹಟ್ಟಿಯ ಬಿರೇಶ್ವರ ಕುರಿ ಮತ್ತು ಉಣ್ಣೆ ರೈತ ಉತ್ಪಾದಕರ ಕಂಪನಿಯು ಈ ಭಾಗದ ಕುರಿಗಾರರಿಗೆ ಕುರಿ ಮೇಕೆ ಸಾಕಾಣಿಕೆಯ ವೈಜ್ಞಾನಿಕ ಮಾಹಿತಿ ನೀಡುತ್ತಿರುವುದು ಶ್ಲಾಘನೀಯವಾದದು. ಕುರಿಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಬೆಳಗಾವಿಯ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಅಶೋಕ ಡಿ. ದುರಗನ್ನವರ ತರಬೇತಿ ನೀಡಿ ಪ್ರತಿಯೊಂದು ಪ್ರಾಣಿಗಳಲ್ಲಿ ವಿಶೇಷ ಗುಣಗಳಿವೆ ಪ್ರಾಣಿಗಳಲ್ಲಿ ಇರುವ ನಿಸ್ವಾರ್ಥ ಸೇವೆಯು ಮನುಷ್ಯರಲ್ಲಿ ಕೊಡ ಬರಬೇಕು. ಮಾನಸಿಕವಾಗಿ ದೈಹಿಕವಾಗಿ ಸಾಮಾಜಿಕವಾಗಿ ಸದೃಡರಾಗುವದೆ ಆರೋಗ್ಯ. ಸ್ವಲ್ಪ ಏರುಪೇರುಯಾದರೆ ಅನಾರೋಗ್ಯ ಎಂದು ಹೇಳಿ ಕುರಿಗಳಿಗೆ ಬರುವ ರೋಗ ಲಕ್ಷಣಗಳು ಮುಂಜಾಗ್ರತೆ ಮತ್ತು ಔಷದಿಗಳ ಬಳಕೆ ಮಾಡುವ ಕುರಿತು ಹೇಳಿದರು. ಪ್ರಗತಿಪರ ರೈತರಾದ ವ್ಹಿ.ಕೆ.ಹುದ್ದಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಹುಕ್ಕೇರಿ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ರಮೇಶ ಕದಮ ಪಶುವೈದ್ಯಾಧಿಕಾರಿ ಡಾ. ಬಸವರಾಜ ಹುಕ್ಕೇರಿ, ನಿಂಗಪ್ಪ ವಿಠ್ಠಲ ಗೌಡನ್ನವರ, ಬಿರೇಶ್ವರ ಕುರಿ ಮತ್ತು ಉಣ್ಣೆ ಉತ್ಪಾದಕರ ಕಂಪನಿ ಲಿ. ಶಿಂಧಿಹಟ್ಟಿ ಇದರ ಅಧ್ಯಕ್ಷ ನಿಂಗಪ್ಪ ಸಿದ್ದಗುಂಡ ಪೂಜೇರಿ, ಉಪಾಧ್ಯಕ್ಷ ವಿಠ್ಠಲ ದುಂಡಪ್ಪ ಪೂಜೇರಿ, ನಿರ್ದೇಶಕರಾದ ವಾಶಪ್ಪ ಕುರಬರ, ಮಾರುತಿ ದಡ್ಡಿ, ಸಿದ್ದಪ್ಪಾ ಪೂಜೇರಿ, ಮಾರುತಿ ಪೂಜೇರಿ, ಪುಂಡಲೀಕ ಕಮತಿ, ಬೀರಪ್ಪ ಹಾಲಟ್ಟಿ, ಕಾಮಗೌಡ ಚಂದರಗಿ, ಬಸಗೌಡ ಪಾಟೀಲ, ಹಾಗೂ ಸಿಬ್ಬಂದಿ ವರ್ಗದವರು ಹೊಸಪೇಟ ಗ್ರಾ.ಪಂ. ಮಾಜಿ ಅಧ್ಯಕ್ಷ ಬಸವರಾಜ ಚಿಕ್ಕೋಡಿ ಉಪಸ್ಥಿತರಿದ್ದರು. ಡಾ. ಎಸ್.ಎಮ್.ನಾಯಿಕ ಸ್ವಾಗತಿ ಕಾರ್ಯಕ್ರಮ ನಿರೂಪಿಸಿದರು.
ಈ ಎರಡು ದಿನಗಳ ಕಾಲ ನಡೆದ ತರಬೇತಿ ಶಿಬಿರದಲ್ಲಿ ಹುಕ್ಕೇರಿ ಹೋಬಳಿ ಮಟ್ಟದ ಎಲ್ಲ ಕುರಿಗಾರರು ಪಾಲ್ಗೊಂಡಿದ್ದರು.
Gadi Kannadiga > Local News > ಕುರಿಗಾರರು ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬೇಕು : ಡಾ. ಸುಧಾ ದೇವರೆಡ್ಡಿ
More important news
ವ್ಯಕ್ತಿ ನಾಪತ್ತೆ
30/01/2023
ನೇಕಾರರಿಗೆ ವಿಶೇಷ ಪ್ಯಾಕೇಜ್
30/01/2023
ಫ.೧ ರಂದು ಮಡಿವಾಳ ಮಾಚಿದೇವ ಜಯಂತಿ ಉತ್ಸವ
27/01/2023
ಜ.೨೮ ರಂದು ಸವಿತಾ ಮಹರ್ಷಿ ಜಯಂತಿ ಉತ್ಸವ
27/01/2023