This is the title of the web page
This is the title of the web page

Please assign a menu to the primary menu location under menu

Local News

ಕೋಪ ನಿಯಂತ್ರಣಕ್ಕೆ ಖೈದಿಗಳು ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು: ಡಾ. ಸುಧಾರೆಡ್ಡಿ


ಬೆಳಗಾವಿ,ಜೂನ್೩೦: ಖೈದಿಗಳಿಗೆ ಕೋಪ ನಿರ್ವಹಣೆ ಮಹತ್ವ ಹಾಗೂ ಜೀವನದಲ್ಲಿ ಉತ್ತಮ ಹವ್ಯಾಸವನ್ನು ರೂಡಿಸಿಕೊಳ್ಳುವಂತೆ ಮನಃಪರಿವರ್ತನೆಯ ಅಗತ್ಯವಿದೆ ಎಂದು ಕೆಎಲ್‌ಇ ಶುಶ್ರೂಶಾ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಸುಧಾರೆಡ್ಡಿ ಅವರು ಹೇಳಿದರು.
ಕೆಎಲ್‌ಇ ವಿಶ್ವವಿದ್ಯಾಲಯದ ಬೆಳಗಾವಿ ಕೆಎಲ್‌ಇ ಶುಶ್ರೂಶಾ ವಿಜ್ಞಾನ ಮಹಾವಿದ್ಯಾಲಯದ ಮಾನಸಿಕ ಆರೋಗ್ಯ ಶುಶ್ರೂಶಾ ವಿಭಾಗವು ಬುಧವಾರ( ಜೂನ್೨೯) ನಗರದ ಹಿಂಡಲಗಾ ಕೇಂದ್ರ ಕಾರಾಗೃಹದ ಕೈದಿಗಳಿಗೆ ಆಯೋಜಿಸಿದ್ದ ಕೋಪ ನಿರ್ವಹಣೆ ಮತ್ತು ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಅವರು ಉಪನ್ಯಾಸ ನೀಡಿದರು.
ಕೇಂದ್ರ ಕಾರಾಗೃಹದ ಮುಖ್ಯ ಅಧಿಕ್ಷಕ ಕೃಷ್ಣಕುಮಾರ ಅಧ್ಯಕ್ಷತೆ ವಹಿಸಿ ಕೈದಿಗಳಿಗೆ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಧ್ಯಾನ ಮತ್ತು ಆಧ್ಯಾತ್ಮಿಕತೆ ಅನಿವಾರ್ಯವಾಗಿದೆ ಎಂದು ಹೇಳಿದರು. ಗೌತಮ ಬುದ್ದ, ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಜಗದ್ಗುರು ಬಸವಣ್ಣನವರ ತತ್ವಗಳನ್ನು ಅನುಸರಿಸಬೇಕಿದೆ ಎಂದು ಅವರು ಕಿವಿಮಾತಿಟ್ಟರು.
ಸಲಹೆ ನೀಡಿದರು. ಮಾನಸಿಕ ಆರೋಗ್ಯ ಶುಶ್ರೂಶಾ ವಿಭಾಗದ ಮುಖ್ಯಸ್ಥ ಶ್ರೀ ವೀರೇಶಕುಮಾರ ಎಸ್. ಎನ್. ಅವರು ಕೇಂದ್ರ ಕಾರಾಗೃಹದ ಸಿಬ್ಭಂದಿಗೆ ಸಸಿಗಳನ್ನು ನೀಡಿ ಸ್ವಾಗತಿಸಿದರು.
ಕೇಂದ್ರ ಕಾರಾಗೃಹದ ಮುಖ್ಯ ಅಧಿಕ್ಷಕ ಕೃಷ್ಣಕುಮಾರ ಅಧ್ಯಕ್ಷತೆ ವಹಿಸಿ ಕೈದಿಗಳಿಗೆ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಧ್ಯಾನ ಮತ್ತು ಆಧ್ಯಾತ್ಮಿಕತೆ ಅನಿವಾರ್ಯವಾಗಿದೆ ಎಂದು ಹೇಳಿದರು. ಗೌತಮ ಬುದ್ದ, ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಜಗದ್ಗುರು ಬಸವಣ್ಣನವರ ತತ್ವಗಳನ್ನು ಅನುಸರಿಸಬೇಕಿದೆ ಎಂದು ಅವರು ಕಿವಿಮಾತಿಟ್ಟರು.
ಸಹಾಯಕ ಪ್ರಾದ್ಯಾಪಕರಾದ ಸಂಗನಗೌಡ ಎಸ್, ಸ್ನಾತಕೋತ್ತರ ವಿದ್ಯಾರ್ಥಿನಿಯರಾದ ಸುಂದರು, ಶೀತಲ್ ಎಸ್. ಅವರು ಕೋಪ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು.
ಕೆಎಲ್‌ಇ ಶುಶ್ರೂಶಾ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಕೀರುನಾಟಕದ ಜಾಗೃತಿ ಮೂಡಿಸಿದರು. ಜಾಗೃತಿ ಕಾರ್ಯಕ್ರಮಕ್ಕೆ ಕೈದಿಗಳು ಮತ್ತು ಕೇಂದ್ರ ಕಾರಾಗೃಹದ ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಕೇಂದ್ರ ಕಾರಾಗೃಹದ ಸಂಯೋಜಕರಾದ ಶಶಿಕಾಂತ ಯಾದಗುಡೆ ಅವರು ಸಂಯೋಜಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಅಧಿಕ್ಷಕರಾದ ಶಹಬುದ್ದೀನ್ ಕೆ, ಅರುಣ ಪಿಎಸ್‌ಐ ಕೆಎಸ್‌ಐಎಸ್‌ಎಫ್, ಯಲ್ಲಪ್ಪ ನಾಯ್ಕ್ ಜೈಲರ್, ಸಹ ಪ್ರಾದ್ಯಾಪಕರಾದ ಗುರುರಾಜ ಉಡಪಿ, ಸಹಾಯಕ ಪ್ರಾದ್ಯಾಪಕರಾದ ಅಮಯ ಖಂಡೆ, ಸುಷ್ಮಾ ಪಾಟೀಲ್ ಉಪಸ್ಥಿತರಿದ್ದರು.
ಸಹಾಯಕ ಪ್ರಾದ್ಯಾಪಕರಾದ ಡಾ. ಮಂಜುನಾಥ ಸೊಗಲದ್ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


Gadi Kannadiga

Leave a Reply