This is the title of the web page
This is the title of the web page

Please assign a menu to the primary menu location under menu

Local News

ನಾಟಕೋತ್ಸವ ಮತ್ತು ರಂಗಸಖ ಪ್ರಶಸ್ತಿ ಪ್ರದಾನ ಸಮಾರಂಭ


ಬೆಳಗಾವಿ ೨೧- ಬೆಳಗಾವಿ ರಂಗಸಂಪದದವರು ಇಂದು ದಿ.೨೧ ಮಂಗಳವಾರದಂದು ಬೆಳಿಗ್ಗೆ ೧೦ ಗಂಟೆಗೆ ಚೆನ್ನಮ್ಮ ವೃತ್ತದ ಬಳಿಯಿರುವ ಸಾಹಿತ್ಯ ಭವನ ಸಭಾಭವನದಲ್ಲಿ ಪತ್ರಿಕಾ ಗೋಷ್ಠಿಯನ್ನು ಕರೆದಿದ್ದರು.
ಈ ಪತ್ರಿಕಾಗೋಷ್ಠಿಯಲ್ಲಿ ರಂಗಸಂಪದದ ಅಧ್ಯಕ್ಷರಾದ ಡಾ. ಅರವಿಂದ ಕುಲಕರ್ಣಿಯವರು ಇದೇ ದಿ. ೨೫, ೨೬ ಹಾಗೂ ೨೭ ರಂದು ಪ್ರತಿದಿನ ಸಾಯಂಕಾಲ ೬-೩೦ ಕ್ಕೆ ತಿಲಕಚೌಕ ಹತ್ತಿರವಿರುವ ಲೋಕಮಾನ್ಯ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ನಾಟಕೋತ್ಸವ ಮತ್ತು ರಂಗಸಖ ಪ್ರಶಸ್ತಿ ಪ್ರದಾನ ಸಮಾರಂಭ ಕುರಿತಂತೆ ವಿವರಿಸಿದರು.
ದಿ. ೨೫ ರಂದು ಧಾರವಾಡದ ಲೇಖಕಿ ವಿನುತಾ ಹಂಚಿನಮನಿಯವರು ರಚಿಸಿರುವ ಡಾ. ಅರವಿಂದ ಕುಲಕರ್ಣಿಯವರ ನಿರ್ದೇಶನದ ‘ಪಂಚಕನ್ಯಾ ಸ್ಮರೇ ನಿತ್ಯಂ’ ನಾಟಕ. ದಿ. ೨೬ ರಂದು ರಾಜೇಂದ್ರ ಕಾರಂತ ರಚನೆಯ ಡಾ. ಅರವಿಂದ ಕುಲಕರ್ಣಿ ನಿರ್ದೇಶನದ ಮುದ್ದಣ್ಣನ ಪ್ರಮೋಷನ್ ಪ್ರಸಂಗ ಎಂಬ ಹಾಸ್ಯನಾಟಕ, ದಿ. ೨೭ ರಂದು ರಾಜಗುರು ಹೊಸಕೋಟೆ ನಿರ್ದೇಶನದ ಪೂಲನದೇವಿ ಜೀವನ ಆಧಾರಿತ ನಾಟಕ ‘ಪೂಲನ್ ದೇವಿ’ ನಾಟಕ ಹೀಗೆ ಮೂರು ನಾಟಕಗಳು ಪದರ್ಶನಗೊಳ್ಳಲಿವೆ.
೨೦೨೩ ನೇ ಸಾಲಿನ ರಂಗಸಂಪದ ನೀಡುವ ‘ರಂಗಸಖ’ ಪ್ರಶಸ್ತಿಯು ರಂಗಕರ್ಮಿ ಧಾರವಾಡದ ಅಭಿನಯ ಭಾರತಿಯ ಅಧ್ಯಕ್ಷರಾದ ಅರವಿಂದ ಕುಲಕರ್ಣಿ ಅವರಿಗೆ ಹಾಗೂ ಹಿರಿಯ ಕಲಾವಿದರಾದ ರಮೇಶ ಅನಿಗಳ, ಗಂಗಾಧರ ಬೆನ್ನೂರ ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಡಾ. ಕುಲಕರ್ಣಿ ಹೇಳಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತೀಯ ಜೀವ ನಿಗಮದ ಬೆಳಗಾವಿ ಹಿರಿಯ ವಿಭಾಗಾಧಿಕಾರಿಗಳಾದ ಅಜೀತ ವಾರಕರಿ ಆಗಮಿಸಲಿದ್ದು ಹಿರಿಯ ನ್ಯಾಯವಾದಿಗಳು ಮತ್ತು ರಂಗಸಂಪದದ ಪೂಷಕರಾದ ಎಸ್. ಎಂ. ಕುಲಕರ್ಣಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ರಂಗಸಂಪದದ ಗೌರವಾಧ್ಯಕ್ಷರಾದ ರಂಗಕರ್ಮಿ ಶ್ರೀಪತಿ ಮಂಜನಬೈಲು ಉಪಸ್ಥಿತರಿರುವರೆಂದು ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಅಶೋಕ ಕುಲಕರ್ಣಿ, ದಿಲೀಪ ಮಳಗಿ, ಡಾ. ಅರವಿಂದ ಕುಲಕರ್ಣಿ, ಗುರುನಾಥ ಕುಲಕರ್ಣಿ, ಬಸವರಾಜ ಹುಣಚಿಕಟ್ಟಿ ಚಿದಾನಂದ ವಾಳ್ಕೆ, ವೇದಿಕೆ ಮೇಲೆ ಉಪಸ್ಥಿತರಿದ್ದರು.


Leave a Reply