ಬೆಳಗಾವಿ; ಬೆಳಗಾವಿಯಲ್ಲಿ ಇದೇ ತಿಂಗಳ 26ರಿಂದ 28ರ ವರೆಗೆ ದಿವಂಗತ ಏಣಗಿ ಬಾಳಪ್ಪನವರ ಸ್ಮರಣೋತ್ಸವ ನಿಮಿತ್ತ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ ಎಂದು ರಂಗ ಆರಾಧನಾ ಸಂಸ್ಕೃತಿಕ ಸಂಘಟನೆ ಸವದತ್ತಿಯ ಜಾಕೀರ್ ನದಾಫ್ ಹೇಳಿದರು.
ಪತ್ರಿಕಾ ಪರಿಷತ್ತಿನಲ್ಲಿ ಮಾತನಾಡಿದ ಅವರು ಹಿರಿಯ ಕಲಾವಿದ ದಿವಂಗತ ಚಂದ್ರಕಾಂತ್ ಕುಸನೂರ ಅವರಿಗೆ ಅರ್ಪಿತವಾಗಲಿರುವ ಈ ನಾಟಕೋತ್ಸವವೂ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ, ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಸೌದತ್ತಿಯ ರಂಗ ಆರಾಧನಾ ಸಂಸ್ಕೃತಿಕ ಸಂಘಟನೆ ಮತ್ತು ಬೆಳಗಾವಿಯ ಕನ್ನಡ ಭವನದ ಸಹಯೋಗದೊಂದಿಗೆ ನೆರವೇರಲಿದೆ ಎಂದರು.
ಬೆಳಗಾವಿ ನೆಹರು ನಗರದಲ್ಲಿರುವ ರಾಮದೇವ್ ಹೊಟೇಲ ಹಿಂಭಾಗದ ಕನ್ನಡ ಭವನದಲ್ಲಿ ಮೂರು ದಿನಗಳ ನಾಟಕೋತ್ಸವ ಚರುಗಲಿದೆ ಶನಿವಾರ 26 ರಂದು ಜಯಂತ ಕಾಯ್ಕಿಣಿ ರಚಿಸಿರುವ ಹುಲುಗಪ್ಪ ಕಟ್ಟಿಮನಿ ನಿರ್ದೇಶಿಸಿರುವ ನಾಟಕ ಸಂಕಲ್ಪ ಮೈಸೂರು ತಂಡದಿಂದ “ಜೊತೆಗಿರುವನು ಚಂದಿರ” ರವಿವಾರ 27 ರಂದು ಶ್ರೀಧರ್ ಗಸ್ತಿ ರಚಿತ ಜಾಕೀರ್ ನದಾಫ್ ನಿರ್ದೇಶಿಸಿರುವ ನಾಟಕ “ದೇವಸೂರ” ಮತ್ತು ಸೋಮವಾರ 28ರಂದು ರಂಗ ಆರಾಧನಾ ಸಂಸ್ಕೃತಿಕ ಸಂಘಟನೆ ಸೌದತ್ತಿ ಇವರಿಂದ ಶ್ರೀನಿವಾಸ್ ವೈದ್ಯರ ಕಥೆ ಆಧಾರಿತ ಜಾಕೀರ್ ನದಾಫ್ ನಿರ್ದೇಶಿಸಿರುವ “ಬಾಸಿಂಗ ಬಲ” ನಾಟಕ ಪ್ರದರ್ಶನ ಗೊಳ್ಳಲಿದೆ, ಮೂರು ದಿನಗಳ ಕಾಲ ಸಂಜೆ 6:30 ಗಂಟೆಗೆ ನಾಟಕಗಳು ಪ್ರದರ್ಶನಗೊಳ್ಳಲಿವೆ.
26ರಂದು ಉದ್ಘಾಟನಾ ಸಮಾರಂಭದಲ್ಲಿ ಜಾಕೀರ್ ನದಾಫ್ ರಚಿತ ದೇವಸೂರ ಹಾಗೂ ಹುಚ್ಚರ ಕನಸು ನಾಟಕಗಳ ಪುಸ್ತಕಗಳು ಲೋಕಾರ್ಪಣೆಗೊಳಲಿವೆ, ಡಾ .ಬಿ ಎಸ್ ಗವಿಮಠ , ಡಾ.ಬಸವರಾಜ್ ಜಗಜಂಪಿ, ಡಾ. ಸರ್ಜು ಕಾಟ್ಕರ್, ಸುಭಾಷ್ ಏಣಗಿ, ಯ.ರು .ಪಾಟೀಲ್, ಹುಲುಗಪ್ಪ ಕಟ್ಟಿಮನಿ ಡಿ ಎಸ್ ಚೌಗುಲೆ ಭಾಗವಹಿಸುವರು.
ದಿನಾಂಕ್ 27ರಂದು ವೇದಿಕೆ ಕಾರ್ಯಕ್ರಮದಲ್ಲಿ ವಿದ್ಯಾವತಿ ಭಜಂತ್ರಿ, ನಿರ್ಮಲ ಪ್ರಕಾಶ್ , ಸಂಧ್ಯಾ ದೇಶಪಾಂಡೆ, ಪದ್ಮ ಕುಲಕರಣಿ , ನಳಿನಿ ವಿದ್ಯಾಸಾಗರ್, ರಾಜೇಶ್ವರ್ ಹಿರೇಮಠ , ಶಾಂತ ಆಚಾರ , ರವಿ ಕೋಟಾರಗಸ್ತಿ , ರವಿ ಭಜಂತ್ರಿ , ಆನಂದ ಬಿಂಗೆ , ಬಾಬಾ ಸಾಹೇಬ್ ಕಾಂಬಳೆ , ವೈಭವ ಲೋಕೂರ್, ವಿನಯ್ ಕುಲಕರ್ಣಿ , ರಾಜು ಮಠಪತಿ ಭಾಗವಹಿಸುವರು.
28ರಂದು ಸಮಾರೋಪ ಸಮಾರಂಭದಲ್ಲಿ ಗುರುನಾಥ ಕಡಬೂರ್ ಡಾ ರಾಮಕೃಷ್ಣ ಮರಾಠೆ ,ರಾಘವೇಂದ್ರ ಹಲಗತ್ತಿ, ರಾಮಚಂದ್ರ ಕಟ್ಟಿ , ರಮೇಶ್ ಜಂಗಲ್, ಮಂಜುಳಾ ಜೋಶಿ , ಶರಣಗೌಡ ಪಾಟೀಲ್, ಬಸವರಾಜ ಗಾರ್ಗಿ ಭಾಗವಹಿಸುವರು ಎಂದು ಅವರು ಹೇಳಿದರು.
ಪತ್ರಿಕಾ ಪರಿಷತ್ತಿನಲ್ಲಿ ಶ್ರೀನಿವಾಸ್ ಗದಗ್, ಯ.ರು.ಪಾಟೀಲ್ , ಶರೀಶ್ ಜೋಶಿ ರಮೇಶ್ ಜಂಗಲ್, ರಾಮಕೃಷ್ಣ ಮರಾಠೆ, ಶರಣಗೌಡ ಪಾಟೀಲ್ , ಅನಂತ ಪಪ್ಪು ಉಪಸ್ಥಿತರಿದ್ದರು.
26ರಿಂದ 28ರ ವರೆಗೆ ಬೆಳಗಾವಿಯಲ್ಲಿ ನಾಟಕೋತ್ಸವ
WhatsApp Group
Join Now