ಗದಗ ನವೆಂಬರ್ ೧೬: ತೋಟಗಾರಿಕೆಯಲ್ಲಿ ನೀರಿನ ಮಿತಬಳಕೆ ಮತ್ತು ಸಂರಕ್ಷಣೆ ಅತ್ಯಂತ ಮಹತ್ವ ಪಡೆದಿದ್ದು ಈ ನಿಟ್ಟಿನಲ್ಲಿ ಸೂಕ್ಷö್ಮ ನೀರಾವರಿ ( ಹನಿ ನೀರಾವರಿ ) ಬಳಕೆ ಅವಶ್ಯಕವಾಗಿದೆ. ಹನಿ ನೀರಾವರಿ ಪದ್ಧತಿಯಿಂದ ನೀರಿನ ಸದ್ಭಳಕೆ ಮಾಡುವುದರೊಂದಿಗೆ ಹನಿ ನೀರಾವರಿಯನ್ನು ಅಳವಡಿಸಿಕೊಂಡು ತೋಟಗಾರಿಕೆಯನ್ನು ಮಾಡಿದಲ್ಲಿ, ಕಡಿಮೆ ನೀರಿನಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು. ಈ ನಿಟ್ಟಿನಲ್ಲಿ ಗದಗ ಜಿಲ್ಲೆಯ ನೀರಾವರಿ ಸೌಲಭ್ಯವುಳ್ಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಸಆಮಾನ್ಯ ವರ್ಗದ ತೋಟಗಾರಿಕೆ ಬೆಳೆ ಬೆಳೆಯುವ ಹಾಗೂ ಆಸಕ್ತಿ ಇರುವ ರೈತರ ಜಮೀನಿಗೆ ಹನಿ ನೀರಾವರಿ ಅಳವಡಿಕೆಗೆ ಇಲಾಖೆ ವತಿಯಿಂದ ಸಹಾಯಧನ ಸೌಲಭ್ಯ ಇರುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರಿಗೆ ಮೊದಲ ೨ ಹೆಕ್ಟೇರ್ ಪ್ರದೇಶದವರೆಗೆ ಶೇ. ೯೦ % ರಷ್ಟು ಮತ್ತು ೨ ಹೆಕ್ಟೇರ್ ಮೇಲ್ಪಟ್ಟು ೩ ಹೆಕ್ಟೇರವರೆಗೆ ಶೇ. ೪೫ % ರಷ್ಟು ಸಹಾಯಧನ ಸೌಲಭ್ಯವಿರುತ್ತದೆ. ಸಾಮಾನ್ಯ ರೈತರಿಗೆ ಮೊದಲ ೨ ಹೆಕ್ಟೇರ್ ಪ್ರದೇಶದವರಗೆ ಶೇ ೭೫ % ರಷ್ಟು ಮತ್ತು ೨ ಹೆಕ್ಟೇರ್ ಮೇಲ್ಪಟ್ಟು ೩ ಹೆಕ್ಟೇರ್ ವರೆಗೆ ಶೇ. ೪೫ % ರಷ್ಟು ಸಹಾಯಧನ ಸೌಲಭ್ಯವಿರುತ್ತದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತೋಟಗಾರಿಕೆ ತಾಲೂಕ ಅಧಿಕಾರಿಗಳನ್ನು ಹಾಗೂ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದಾರೆ.
Gadi Kannadiga > State > ರೈತರಿಗೆ ಹನಿ ನೀರಾವರಿ ಸೌಲಭ್ಯಗಳು