This is the title of the web page
This is the title of the web page

Please assign a menu to the primary menu location under menu

State

ನವೀಕರಣಗೊಂಡ ಜಿ.ಪಂ. ಸಭಾಂಗಣಕ್ಕೆ ಸಂಸದರಿಂದ ಚಾಲನೆ


ಕೊಪ್ಪಳ, ಅ. ೧೦ : ನವೀಕರಣಗೊಂಡ ಜಿಲ್ಲಾ ಪಂಚಾಯಿತಿಯ ಜೆ.ಹೆಚ್. ಪಟೇಲ್ ಸಭಾಂಗಣಕ್ಕೆ ಸಂಸದರಾದ ಕರಡಿ ಸಂಗಣ್ಣ ಅವರು ರಿಬ್ಬನ್ ಕತ್ತರಿಸಿ, ಜ್ಯೋತಿ ಬೆಳಗಿಸುವುದರ ಮೂಲಕ ಇಂದು (ಅ.೧೦) ಚಾಲನೆ ನೀಡಿದರು.
ಕೊಪ್ಪಳ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಜಿ.ಪಂ. ಜೆ.ಹೆಚ್. ಪಟೇಲ್ ಸಭಾಂಗಣ ನವೀಕರಣ ಕಾಮಗಾರಿ ಉದ್ಘಾಟನಾ (ಪೂಜಾ) ಕಾರ್ಯಕ್ರಮ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಫೌಜಿಯಾ ತರನ್ನುಮ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಾಹಾಂತೇಶ ಎಸ್. ಪಾಟೀಲ್, ಜಿ.ಪಂ. ಉಪಕಾರ್ಯದರ್ಶಿ ಸಮೀರ್ ಮುಲ್ಲಾ, ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ, ಕೆ.ಆರ್.ಐ.ಡಿ.ಎಲ್. ಕಾರ್ಯಪಾಲಕ ಅಭಿಯಂತರ ಚಿಂಚೋಳ್ಕರ್ ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜಿ.ಪಂ. ಸಭಾಂಗಣದ ನವೀಕರಣ ಕಾಮಗಾರಿಯನ್ನು ಕೆ.ಆರ್.ಐ.ಡಿ.ಎಲ್. ಸಂಸ್ಥೆಯಿಂದ ಕೈಗೊಳ್ಳಲಾಗಿದೆ. ಜಿ.ಪಂ. ಸಭಾಂಗಣ ನವೀಕರಣಗೊಂಡ ಹಿನ್ನೆಲೆ ಸಂಸದರು, ಶಾಸಕರು ಶುಭ ಕೋರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪುಸ್ತಕ ಬಿಡುಗಡೆ : ಜಿಲ್ಲಾ ಪಂಚಾಯತಿ ವತಿಯಿಂದ ತಯಾರಿಸಲಾದ ‘’ಗ್ರಾಮ ಪಂಚಾಯತಿ ದೂರ ದೃಷ್ಟಿ ಯೋಜನೆ ತಯಾರಿಕೆ’’ ಕುರಿತ ಪುಸ್ತಕವನ್ನು ಗಣ್ಯರು ಬಿಡುಗಡೆಗೊಳಿಸಿದರು.


Gadi Kannadiga

Leave a Reply