ಸವದತ್ತಿ ೨೫ : ತಾಲೂಕಿನ ಇನಾಮಹೊಂಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹೀರೇಉಳ್ಳಿಗೇರಿ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಗುರುವಾರ “ಗ್ರಾಮ ಆರೋಗ್ಯ” ಅಭಿಯಾನದಡಿ ಹಮ್ಮಿಕೊಂಡಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ತಾಪಂ ಸಹಾಯಕ £ರ್ದೇಶಕರು (ಗ್ರಾ.ಉ) ರಮೇಶ ರಕ್ಕಸಗಿ ಸಸಿಗೆ £Ãರು ಹಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು £Ãಡಿದರು.
ಬಳಿಕ ತಾಪಂ ಸಹಾಯ £ರ್ದೇಶಕರು (ಗ್ರಾ.ಉ) ರಮೇಶ ರಕ್ಕಸಗಿ ಮಾತನಾಡಿ ಉದ್ಯೋಗ ಖಾತರಿ ಯೋಜನೆಯಡಿ ದುಡಿಯುವ ಕೈಗಳಿಗೆ ಕೆಲಸ £Ãಡುವುದರ ಜೊತೆಗೆ ಕೆಲಸಕ್ಕಾಗಿ ಬರುವ ಕೂಲಿಕಾರರ ಆರೋಗ್ಯ ತಪಾಸಣೆಗೂ ಒತ್ತು £Ãಡಲಾಗುತ್ತಿದೆ. ಕೂಲಿಕಾರರಿಗೆ ಕೆಲಸದ ಬಗ್ಗೆ ಹೆಚ್ಚಿನ ಕಾಳಜಿ ಇರುತ್ತದೆಯೇ ಹೊರತು, ತಮ್ಮ ಆರೋಗ್ಯದ ಬಗ್ಗೆ ಅರಿವು ಇರುವುದಿಲ್ಲ. ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಲು ಬರುವ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸುವ ಮೂಲಕ, ಸರಕಾರ ಕೂಲಿಕಾರರ ಬಗ್ಗೆ ಸಾಮಾಜಿಕ ಕಳಕಳಿ ಮನೋಭಾವನೆ ಹೊಂದಬೇಕೆಂಬುದಾಗಿದೆ. ಜಮೀನು ಇದ್ದಲ್ಲಿ, ಕೂಲಿಕಾರರು, ತಮ್ಮ ಜಮೀ£ನಲ್ಲಿ ಕೃಷಿಹೊಂಡ ಕಾಮಗಾರಿ ಅನುಷ್ಠಾನ ಮಾಡಿಕೊಳ್ಳಬಹುದು. ಜತೆಗೆ ಜಾನುವಾರು, ಮೇಕೆಗಳು ಇದ್ದರೆ ದನದದೊಡ್ಡಿ, ಕುರಿದೊಡ್ಡಿ ಸಹ £ರ್ಮಿಸಿಕೊಳ್ಳಲು ಈ ಯೋಜನೆಯಲ್ಲಿ ಅವಕಾಶವಿದೆ. ಕೂಲಿಕಾರರು ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿ ಮಾಹಿತಿ ಪಡೆದುಕೊಂಡು ಸೌಲಭ್ಯ ಪಡೆದುಕೊಳ್ಳಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ದಯಾನಂದ ಹುಲಮ£, ಗ್ರಾಪಂ ಉಪಾಧ್ಯಕ್ಷ ಪರಮೇಶ್ವರ ಕಪಲಿ, ಗ್ರಾಪಂ ಸದಸ್ಯ ಫಕೀರವ್ವ ದಳವಾಯಿ, ತಾಪಂ ಐಇಸಿ ಸಂಯೋಜಕ ಮಲೀಕಜಾನ ಮೋಮಿನ, ತಾಂತ್ರಿಕ ಸಂಯೋಜಕ ಮಹಾದೇವ ಕಾಮನ್ನವರ, ತಾಂತ್ರಿಕ ಸಹಾಯಕರುಗಳಾದ ಅ£ಲ ಹಕಾರಿ, ಚೈತನ್ಯ ಪಾಟೀಲ, ತಾಪಂ ಆಡಳಿತ ಸಹಾಯಕಿ ಮಹಾದೇವಿ, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಇಬ್ರಾಹಿಂ, ಎಂ ಎಂ ಸಂಗನ್ನವರ, ಕೆಎಚ್ ಪಿಟಿ ತಾಲೂಕಾ ಸಂಯೋಜಕ ಆನಂದ ಛಲವಾದಿ, ಆಶಾ ಕಾರ್ಯಕರ್ತೆಯರು, ಬಿಎಫ್ ಟಿ ರಮೇಶ, ಗ್ರಾಪಂ ಸಿಬ್ಬಂದಿಗಳು, ಇ£್ನತರರು ಉಪಸ್ಥಿತರಿದ್ದರು.
Gadi Kannadiga > Local News > ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ
ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ
Suresh25/05/2023
posted on

More important news
ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ
24/05/2023