ಹುಕ್ಕೇರಿ ; ೧೩ ಇಂದಿನ ಆಧು£ಕ ದಿನಮಾನಗಳಲ್ಲಿ ಸಾಮೂಹಿಕ ಕಾರ್ಯಗಳ ಮೂಲಕ ಸಮಾಜದಲ್ಲಿ ಪರಸ್ಪರ ಒಗ್ಗೂಡುವ ಹಾಗೂ ಬೆರೆಯುವ ಮನಸ್ಥಿತಿಗಳು ಉಂಟಾಗಿ ನಾವೆಲ್ಲ ಒಂದೇ ಎನ್ನುವ ಏಕತೆಯ ಭಾವ ಮೂಡಿ ಇದರಿಂದಾಗಿ ಶಾಂತಿ-ನೆಮ್ಮದಿ ಜೀವನ ನೆಲೆಯೂರುತ್ತದೆ ಎಂದು £ಡಸೋಸಿ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ರವಿವಾರ ತಾಲೂಕಿನ £ಡಸೋಸಿಯ ಜಗದ್ಗುರು ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಮಹಾಶಿವರಾತ್ರಿ ಮಹೋತ್ಸವ £ಮಿತ್ತ ಏರ್ಪಡಿಸಲಾಗಿದ್ದ ಸಾಮೂಹಿಕ ಗುಗ್ಗಳೋತ್ಸವ ಕಾರ್ಯಕ್ರಮಕ್ಕೆ ಚಾಲನೆ £Ãಡಿ ಖಾಸಗಿ ಕಾರ್ಯಕ್ರಮಗಳು ಆಡಂಬರದ ಬದುಕು ತೋರಿಸಿದರೆ ಸಾಮೂಹಿಕ ಕಾರ್ಯಗಳು ಏಕತೆಯನ್ನು ತೋರುತ್ತದೆ. ಎಲ್ಲ ಜವಾಬ್ದಾರಿಗಳನ್ನು ಪರಸ್ಪರ ಹೊತ್ತು ಅಚ್ಚುಕಟ್ಟಾಗಿ £ರ್ವಹಿಸಿದರೆ ಆರ್ಥಿಕ ಹಾಗೂ ಸಾಮಾಜಿಕ ದೃಷ್ಟಿಯಿಂದ ಎಲ್ಲರಿಗೂ ಅನುಕೂಲವಾಗುತ್ತದೆ.
ಈ ವ್ಸÀðವೂ ಸಹ ಆರ್ಥಿಕ ಅನಾನುಕೂಲತೆ ಅಥವಾ ಇ£್ನತರ ಕಾರಣಗಳಿಂದ ಗುಗ್ಗಳ ಸಂಸ್ಕಾರ ಪಡೆಯದೇ ಇರುವದನ್ನು ಗಮ£ಸಿ ಮಠದಿಂದ ಸಾಮೂಹಿಕ ಗುಗ್ಗಳೋತ್ಸವ ಏರ್ಪಡಿಸಲಾಗಿದೆ ಎಂದರು.
ಚಿಕ್ಕೋಡಿ ಸಂಪಾದನಾ ಸ್ವಾಮೀಜಿ ಆಶೀರ್ವಚನ £Ãಡುತ್ತ, ಮನ್ಸುÀ್ಯನ ಬದುಕಿನಲ್ಲಿ ಸಂಘ ಜೀವಿಯಾಗಿ ಬದುಕಿದರೆ ಮಾತ್ರ ಆತನ ಬದುಕಿಗೆ ಮಹತ್ವ ಬರುತ್ತದೆ. ಧಾರ್ಮಿಕ ಪರಂಪರೆಯಲ್ಲಿ ನಡೆಯುವ ಲಿಂಗದೀಕ್ಷೆ, ಗುಗ್ಗಳ, ಉಪನಯನದಂಹತ ಧಾರ್ಮಿಕ ಕಾರ್ಯಗಳು ಮನ್ಸುÀ್ಯನ ಬದುಕಿನಲ್ಲಿ ಬದಲಾವಣೆ ತರುವ ಶಕ್ತಿ ಹೊಂದಿದ್ದು, ಸಾಮೂಹಿಕ ಕಾರ್ಯಗಳಲ್ಲಿ ಆಸಕ್ತಿ ತೋರುವ ಪರಂಪರೆ ಸಮಾಜದಲ್ಲಿ ಉಂಟಾಗಬೇಕು ಇದರಿಂದ ಸಮಯ, ಹಣದ ಉಳಿತಾಯದ ಜೊತೆಗೆ ಬಾಂಧವ್ಯಗಳು ಬೆಸೆಯುತ್ತವೆ ಎಂದರು.
ಸಾಮೂಹಿಕ ಲಿಂಗದೀಕ್ಷೆ:
ಮಠದಲ್ಲಿ ಬೆಳಿಗ್ಗೆ ೬ ಗಂಟೆಗೆ ಶ್ರೀ ದುರದುಂಡೀಶ್ವರ ಕತೃ ಗದ್ದುಗೆಗೆ ವಿಶ್ಸೇÀ ಪೂಜೆ ನೆರವೇರಿಸಲಾಯಿತು.
ವೀರಶೈವ ಪರಂಪರೆಯ ಪ್ರಕಾರ ಪ್ರತಿಯೊಂದು ಧಾರ್ಮಿಕ ಪ್ರಕ್ರಿಯೆ ನಡೆಯುವ ಪೂರ್ವದಲ್ಲಿ ಲಿಂಗದೀಕ್ಷೆ ಪಡೆಯುವ ಪರಂಪರೆ ನಡೆದು ಬಂದಿದ್ದರಿಂದ ಗುಗ್ಗಳೋತ್ಸವ ಪೂರ್ವದಲ್ಲಿ ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿ ಧಾರ್ಮಿಕ ವಿಧಿ-ವಿಧಾನಗಳ ಲಿಂಗದೀಕ್ಷೆ ನೆರವೇರಿಸಿದರು.
ಹಬ್ಬದ ವಾತಾವರಣ:
ಸಾಮೂಹಿಕ ಗುಗ್ಗಳೋತ್ಸವದ £ಮಿತ್ತ £ಡಸೋಸಿ ಗ್ರಾಮದ ಪ್ರಮುಖ ಬೀದಿಗಳನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಲಾಗಿತ್ತು. ಅಲ್ಲದೇ ಗುಗ್ಗಳದಲ್ಲಿ ಪಾಲ್ಗೊಂಡವರ ಸಂಬಂಧಿಕರು ಸೇರಿದಂತೆ ಸಹಸ್ರಾರು ಜನ ಗುಗ್ಗಳೋತ್ಸವದಲ್ಲಿ ಪಾಲ್ಗೊಂಡಿದ್ದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ £ರ್ಮಾಣವಾಗಿತ್ತು.
ಗುಗ್ಗಳೋತ್ಸವ
ಸಾಮೂಹಿಕ ಗುಗ್ಗಳೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆ ಸೇರಿದಂತೆ ಮಹರ‍್ಸಾÀ್ಟ್ರ ಹಾಗೂ ಗೋವಾ ಸೇರಿದಂತೆ ಶ್ರೀಮಠದಲ್ಲಿ ೧೦೦ಕ್ಕೂ ಜೋಡಿ ಗುಗ್ಗಳದಲ್ಲಿ ಭಾಗವಹಿಸಿ ಗುಗ್ಗಳೋತ್ಸವ ಸಂಸ್ಕಾರ ಪಡೆದುಕೊಂಡರು.
ಗುಗ್ಗಳ ಹಂಚುಗಳಿಗೆ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ಚಿಕ್ಕೋಡಿ ಸಂಪಾದನಾ ಶ್ರೀಗಳು ಅಗ್ನಿ ಪ್ರದೀಪನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಬ ದೇವಸ್ಥಾನದ ಆವರಣದಿಂದ ಗುಗ್ಗಳದ ಕೊಡಗಳನ್ನು ಹೊತ್ತ ಭಕ್ತಾಧಿಗಳು ಸಾಗಿದರು. ವೀರಭದ್ರ ಕುಣಿತ, ವೀರಗಾಸೆ, ಡೊಳ್ಳು ಸೇರಿದಂತೆ ಇ£್ನತರ ಜನಪದ ಕಲಾ ತಂಡಗಳೊಂದಿಗೆ ಗುಗ್ಗಳ ಶ್ರೀಮಠದಿಂದ ಹಿರೇಮಠದ ಮನೆಗೆ ತೆರಳಿ ಲಕ್ಷ್ಮಿದೇವಿ ದೇವಸ್ಥಾನ ಮಾರ್ಗದವರೆಗೆ, ಕಾಳಾಯಿ ಓಣಿ, ವಾಡೆ ಓಣಿ, ಮಠದ ಓಣಿಯಿಂದ ಶಂಕರಲಿಂಗದೇವಸ್ಥಾನ ಮಾರ್ಗವಾಗಿ ಶ್ರೀಮಠದ ಬಸವೇಶ್ವರ ದೇವಸ್ಥಾನ ಭಾವಿಹತ್ತಿರ ಸಂಚರಿಸಿತು. ನಂತರ ಶ್ರೀಗಳು ಆಗ್ನಿ ಹೊತ್ತ ಹಂಚಿಗೆ ಹಾಲು-ತುಪ್ಪ ಎರೆಯುವ ಮೂಲಕ ಗುಗ್ಗಳ ಸಂಸ್ಕಾರ ಕೊನೆಗೊಂಡಿತು.
ಮೈನವಿರೇಳಿಸಿದ ಪುರವಂತಿಕೆ:
ಜಾತ್ರೆ ಅಂಗವಾಗಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ೨೫ಕ್ಕೂ ಹೆಚ್ಚು ಪುರವಂತರು ತಮ್ಮ ವಿವಿಧ ಪೌರಾಣಿಕ ಒಡಪುಗಳ ಮೂಲಕ ಕೈಯಲ್ಲಿಖಡ್ಗ ಹಿಡಿದು ಝಳಪಿಸತ್ತಾ ಜಾತ್ರೆಯಲ್ಲಿ ಸೇರಿದ್ದ ಜನರನ್ನು ಬೆರಗುಗೊಳಿಸಿದರಲ್ಲದೆ ತಮ್ಮ ಅದ್ಭುತ ಪುರವಂತಿಕೆ ಕಲೆಯನ್ನು ಪ್ರದರ್ಶಿಸಿದರು.
ಅನ್ನಸಂತರ್ಪಣೆ:
ಮಧ್ಯಾಹ್ನ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಊರುಗಳಿಂದ ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿಸಾವಿರಾರು ಭಕ್ತರು ಅನ್ನಪ್ರಸಾದ ಸೇವಿಸಿದರು. ಈ ಸಂದರ್ಭದಲ್ಲಿ ಶಾಂತೇಶಗೌಡ ಪಾಟೀಲ, ದುಂಡಪ್ಪಾ ಗಳಗಿ, ಎ.ಎಸ್.ಪಾಟೀಲ, ರಾಯಪ್ಪಾ £ಂಗನೂರಿ, ಶಂಕರ ಮಾದನ್ನವರ, ಗುರುಲಿಂಗ ಸೊಲ್ಲಾಪೂರಿ, ಸುಭ್ಸಾÀ ಪಾಟೀಲ, ಮಹಾಲಿಂಗ ಕುಂಬಾರ, ಬಿ.ಆರ್. ಪಾಟೀಲ, ಬಿ.ಕೆ.ಪಾಟೀಲ, ಮಲ್ಲಪ್ಪಾ ತನೋಡಿ, ಮಲ್ಲಯ್ಯಾ ಕಾಡದೇವರಮಠ, ತಮ್ಮಣ್ಣ ಸೊಲ್ಲಾಪೂರಿ ಉಪಸ್ಥಿತರಿದ್ದರು.
Gadi Kannadiga > Local News > ಸಾಮೂಹಿಕ ಗುಗ್ಗಳೋತ್ಸವ ಕಾರ್ಯಕ್ರಮಕ್ಕೆ ಚಾಲ£