ಸವದತ್ತಿ : ಕನ್ನಡ ಕಿರುತೆರೆಗೆ ಹಲವಾರು ಮಹತ್ವದ ಪೌರಾಣಿಕ ಧಾರಾವಾಹಿಗಳನ್ನು £Ãಡಿ ವೀಕ್ಷಕರ ಮನಗೆದ್ದಿರುವ ಸ್ಟಾರ್ ಸುವರ್ಣ ವಾಹಿ£ ಇದೀಗ ಮತ್ತೂಮ್ಮೇ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯ, ರಾಷ್ಟ್ರದ ಹಲವಾರು ಭಾಗಳಲ್ಲಿ ಭಕ್ತರನ್ನು ಹೊಂದಿರುವ ಶ್ರೀರೇಣುಕಾ ಯಲ್ಲಮ್ಮ ಮಹ್ಮಾತೆಯ ಕುರಿತಾದ ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿಯನ್ನು ಇದೇ ದಿ.೨೩ ರಿಂದ ಪ್ರಸಾರ ಮಾಡಲಿದೆ.
ಈ ಧಾರಾವಾಹಿಯ ಪ್ರಸಾರ ಕಾಲಕ್ಕೆ ಈ ದೇವಿಯ ದರ್ಶನವನ್ನೂ ರಾಜ್ಯಾದ್ಯಂತ ಭಕ್ರರಿಗೆ ಮಾಡಿಸುವ ಉದ್ದೇಶದಿಂದ ವಾಹಿ£ ಟೆಂಪಲ್ ಆನ್ ವೀಲ್ಸ್ ಕಾರ್ಯಕ್ರಮದ ಅಂಗವಾಗಿ ಗುರುವಾರ ಇಲ್ಲಿಂದ ಈ ದೇವಿ ದರ್ಶನದ ವಾಹನಕ್ಕೆ ಚಾಲನೆ £Ãಡಲಾಯಿತು.
ಸುವರ್ಣ ಸಂಕಲ್ಪ ಖ್ಯಾತಿಯ ಡಾ. ಗೋಪಾಲ ಶರ್ಮಾ ಗುರೂಜೀ ಈ ವಾಹನಕ್ಕೆ ಹಸಿರು £ಶಾನೆ ತೋರಿಸುವ ಮೂಲಕ ಚಾಲನೆ £Ãಡಿದರು. ಇದೇ ಸಂದರ್ಭದಲ್ಲಿ ಯಲ್ಲಮ್ಮ ದೇವಾಲಯದ ಹಿರಿಯ ಸ್ವಾಮೀಜಿಗಳಾದ ಯಡಿಯೂರಯ್ಯ ಮತ್ತಿತರರು ಹಾಜರಿದ್ದು ಈ ಮಹತ್ವದ ಕಾರ್ಯಕ್ರಮಕ್ಕೆ ಶುಭಕೋರಿದರು.
ಮನೆಯಲ್ಲೇ ದೇವಿ ದರ್ಶನ: ಇದೇ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ. ಗೋಪಾಲಶರ್ಮಾ ಗುರೂಜೀ ಅವರು ಸ್ಟಾರ್ ಸುವರ್ಣ ವಾಹಿ£ಯವರು ಉತ್ತರ ಕರ್ನಾಟಕದ ಶಕ್ತಿದೇವಾತೆಯಾದ ಯಲ್ಲಮ್ಮದೇವಿಯ ಕನ್ನಡ ಮಣ್ಣಿನ ಸೊಗಡಿನ ಕತೆಯನ್ನು ಎಲ್ಲ ಭಕ್ಕರ ಮನೆಮನೆಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘ£Ãಯ. ಲೋಕ ಕಲ್ಯಾಣದ ಈ ಕಾರ್ಯಕ್ಕೆ ಎಲ್ಲರೂ ಸಹಕರಿಸುವಂತಾಗಲಿ, ಈ ಧಾರಾವಾಹಿ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಸ್ಟಾರ್ ಸುವರ್ಣ ವಾಹಿ£ಯ ಪ್ರಫುಲ್ ಪಟೇಲ್ ಮಾತನಾಡಿ ಪೌರಾಣಿಕ ಈ ಧಾರವಾಹಿಯನ್ನು ಅದರ ಮೂಲಸ್ವರೂಪದಲ್ಲಿ ಅತ್ಯಾಧು£ಕ ತಂತ್ರಜ್ಞಾನದೊಂದಿಗೆ ವೀಕ್ಷಕರಿಗೆ £Ãಡುತ್ತಿದ್ದೇವೆ. ಸವದತ್ತಿ ಕ್ಷೇತ್ರದ ಹಲವಾರು ಸ್ಥಳಗಳಲ್ಲೂ ಇದರ ಚಿತ್ರೀಕರಣ ನಡೆಸಲಾಗಿದೆ ಎಂದರು.
ಉದೋ ಉದೋ ವಿಶೇಷ : ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ ಧಾರವಾಹಿ ಜನವರಿ ೨೩ ರಿಂದ ಸೋಮವಾರದಿಂದ ಶ£ವಾರದವರೆಗೆ ರಾತ್ರಿ ೮;೩೦ ಕ್ಕೆ ಪ್ರಸಾರವಾಗಲಿದೆ.
ಈ ಮೆಗಾ ಧಾರವಾಹಿಯಲ್ಲಿ ಕನ್ನಡದಲ್ಲಿ ಇದೇ ಪ್ರಥಮ ಬಾರಿಗೆ ಅತ್ಯಾಧು£ಕ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ಕನ್ನಡ ವೀಕ್ಷಕರು ಇದೇ ಮೊದಲಬಾರಿಗೆ ಹಲವಾರು ಹೊಸ ತಂತ್ರಜ್ಞಾನದ ಅನುಭವ ಕಾಣಲಿದ್ದರೆ.
ಬೃಹತ್ £ರ್ಮಾಣ ಸಂಸ್ಥೆಯಾದ ನಂದಿ ಪ್ರೋಡಕ್ಷನ ಈ ಧಾರಾವಾಹಿ £ರ್ಮಾಣ ಮಾಡಿದೆ.ಇದಕ್ಕಾಗಿ ಬೆಂಗಳೂರು ಹೊರ ವಲಯದಲ್ಲಿ ಭಾರಿ ಸೆಟ್ ಗಳನ್ನು ಹಾಕಲಾಗಿದ್ದು ಧಾರವಾಹಿಯಲ್ಲಿ ಭಾರಿ ತಾರಾಬಳಗ ಕಾಣಬಹುದಾಗಿದೆ.
ರಾಜ್ಯ ಹಾಗೂ ನಾಡಿನಾದ್ಯಂತ ಇರುವ ಯಲ್ಲಮ್ಮದೇವಿ ಭಕ್ತರು ಈ ಧಾರಾವಾಹಿಯನ್ನು ಕಾತುರದಿಂದ £ರೀಕ್ಷಿಸುತ್ತಿದ್ದಾರೆ. ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ ಧಾರವಾಹಿ ಭಕ್ತಾಧಿಗಳಿಗೆ ಭಕ್ತಿ, ಜ್ಞಾನದ ಜತೆಗೆ ಮನರಂಜನೆಯನ್ನು ಉಣಬಡಿಸಲಿದೆ.
Gadi Kannadiga > State > ಯಲ್ಲಮ್ಮದೇವಿ ದರ್ಶನದ ವಾಹನಕ್ಕೆ ಚಾಲನೆ
ಯಲ್ಲಮ್ಮದೇವಿ ದರ್ಶನದ ವಾಹನಕ್ಕೆ ಚಾಲನೆ
Suresh20/01/2023
posted on
