ಬೆಳಗಾವಿ: ರಾಯಬಾಗದ ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾದ ದುರ್ಯೋಧನ ಐಹೊಳೆ ಶನಿವಾರ ಹುಕ್ಕೇರಿ ಹಿರೇಮಠಕ್ಕೆ ಭೇಟಿ ನೀಡಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು.
ನೂತನ ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ಜನ ಬಲದ ಜೊತೆ, ಜೊತೆಗೆ ದೈವ ಬಲವೂ ಇದೆ. ಇದರೊಂದಿಗೆ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ನಮ್ಮ ಮನೆಯ ಗುರುಗಳು. ಅವರ ಆಶೀರ್ವಾದಿಂದ ನಾನು ಮತ್ತೇ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅವರ ಮಾರ್ಗದರ್ಶನದಲ್ಲಿ ನಾನು ರಾಯಬಾಗ ಕ್ಷೇತ್ರವನ್ನು ಇನ್ನೂ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದರು.
ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದುಯೋಧನ ಐಹೊಳೆ ಅವರು ಸಾತ್ವೀಕರು. ಎಲ್ಲರ ಜೊತೆಗೆ ಬೆರೆಯುವ ಸ್ವಭಾವದವರು. ಇಂಥ ಸಂದರ್ಭದಲ್ಲಿಯೂ ಅವರು ಆಯ್ಕೆಯಾಗಿದ್ದಾರೆ ಎಂದರೆ ಅವರು ಜನರ ಮೇಲೆ ಇಟ್ಟಿರುವ ನಂಬಿಕೆ. ಹೀಗೆ ಉನ್ನತ ಕಾರ್ಯ ಮಾಡಲಿ. ಅಧಿಕಾರ ಇರುವುದು ಅಧಿಕಾರ ಮಾಡಲು ಅಲ್ಲ. ಅಧಿಕಾರ ಅದೊಂದು ಅವಕಾಶ ಅದನ್ನು ಸದ್ಬಳಕೆ ಮಾಡಿಕೊಂಡು ಮುಂದೆ ಹೋಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಟಕೋಳ ಎಂ ಚಂದರಗಿಯ ರೇಣುಕ ಗಡದೇಶ್ವರ ದೇವರು, ವಿದ್ವಾನ್ ಚಂದ್ರಶೇಖರ ಶಾಸ್ತ್ರೀಗಳು, ಬಿಜೆಪಿ ದುರೀಣರಾದ ಮಹೇಶ ಭಾತೆ, ಅರುಣ ಐಹೊಳೆ ಸೇರಿ ದಂತೆ ಇನ್ನಿತರರು ಉಪಸ್ಥಿತರಿದ್ದರು.
Gadi Kannadiga > Local News > ಹುಕ್ಕೇರಿ ಶ್ರೀಗಳ ಆಶೀರ್ವಾದ ಪಡೆದ ದುರ್ಯೋಧನ ಐಹೋಳೆ
ಹುಕ್ಕೇರಿ ಶ್ರೀಗಳ ಆಶೀರ್ವಾದ ಪಡೆದ ದುರ್ಯೋಧನ ಐಹೋಳೆ
Suresh13/05/2023
posted on
