This is the title of the web page
This is the title of the web page

Please assign a menu to the primary menu location under menu

Local News

ದಸರಾ ಹಬ್ಬದ ರಂಗೋಲಿ ಸ್ಪರ್ಧೆ


ಬೆಳಗಾವಿ ೩೦- ರೋಟರಿ ಕ್ಲಬ್ ಆಫ್ ಬೆಳಗಾಮ್ ಮಿಡ್ ಟೌನ್ ದವರು ದಿ. ೨೯ ಗುರುವಾರದಂದು ಖಾನಾಪೂರ ರಸ್ತೆಯ ಜಕ್ಕೇರಿ ಹೊಂಡದ ಹತ್ತಿರವಿರುವ ಸಂತ ತುಕಾರಾಮ್ ಮಹರಾಜ್ ಸಂಸ್ಕೃತಿ ಭವನದಲ್ಲಿ ದಸರಾ ಉತ್ಸವ ಕಾರ್ಯಕ್ರಮದಲ್ಲಿ ರಂಗೋಲಿ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದರು. ರೋಟರಿ ಕ್ಲಬ್ ಆಫ್ ಬೆಳಗಾಮ್ ಮಿಡ್ ಟೌನ್ ದ ಅಧ್ಯಕ್ಷರಾದ ಡಾ. ವಿಜಯ ಪೂಜಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಒಂಬತ್ತು ದಿನಗಳ ಕಾಲ ಹಮ್ಮಿಕೊಂಡಿರುವ ದಸರಾ ಉತ್ಸವ ಕಾರ್ಯಕ್ರಮದಲ್ಲಿ ದಿನಕ್ಕೊಂದು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲಿವೆ. ಇಂದು ಹಿರಿಯರಿಗಾಗಿ ಹಾಗೂ ಮಕ್ಕಳಿಗೆ ರಂಗೋಲಿ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದರು.
ಸ್ಪರ್ಧೆಯಲ್ಲಿ ಹಿರಿಯರಿಗಾಗಿ ಹಾಗೂ ಮಕ್ಕಳಿಗಾಗಿ ಹೀಗೆ ಎರಡು ಗುಂಪುಗಳಲ್ಲಿ ತಲಾ ಮೂರು ಬಹುಮಾನಗಳಿದ್ದು ಉತ್ಸವದ ಕೊನೆದಿನದ ಕಾರ್ಯಕ್ರಮದಲ್ಲಿ ಬಹುಮಾನ ನೀಡಿ ಗೌರವಿಸಲಾಗುವುದು. ಸ್ಪ಼ರ್ಧೆಗಾಗಿ ಬಿಡಿಸಿದ ರಂಗೋಲಿಯಲ್ಲಿ ನೀರು ಉಳಿತಾಯ, ನಿಸರ್ಗ, ಭೂಮಿ, ದೇವರು ಹೀಗೆ ಎಲ್ಲ ವಿಷಯಗಳ ಕುರಿತಂತೆ ಚಿತ್ರವನ್ನು ಕಲಾವಿದರು ಬಿಡಿಸಿದ್ದರು.
ರಂಗೋಲಿ ಸ್ಪರ್ಧೆಯ ನಿರ್ಣಾಯಕರಾಗಿ ಶ್ರೀಮತಿ ರಂಜನಾ ಹೇರೆಕರ, ಶ್ರೀಮತಿ ಸುನಿತಾ ಹನಮಶೇಟ ಹಾಗೂ ಶ್ರೀಮತಿ ರೀಮಾ ರಾಜೋಳಿ ಆಗಮಿಸಿದ್ದರು.
ಅಶೋಕ ಬದಾಮಿ, ಅಶೋಕ ಮಳಗಲಿ, ಅನ್ನಪೂರ್ಣಾ ಮಳಗಲಿ ನೀತಾ ಬಿಡಿಕರ, ಸತೀಸ ನಾಯಕ, ಮನೋಹರ ಜರತಾರಕರ, ಗುಲಾಬಚಂದ ಚೌಗಲಾ, ರಾಜೀವ ದೇಶಪಾಂಡೆ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Gadi Kannadiga

Leave a Reply