ಸಂಡೂರು: ಆ: ೩೦: ಸಂಡೂರು ಪಟ್ಟಣದ ಶ್ರೀ ಶ್ರೀಶೈಲೆಶ್ವರ ವಿದ್ಯಾ£ಕೇತನ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಸಂಡೂರು, ತೋರಣಗಲ್ಲು, ಚೋರುನೂರು ಸರ್ಕಲ್ ನ ಪೋಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಹಾಗೂ ಬಿ.ಎಡ್ ಕಾಲೇಜು ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಕುರಿತು ಅರಿವಿನ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ಕಾರ್ಯಕ್ರಮ ಉದ್ದೇಶಿಸಿ ಪೋಲೀಸ್ ಉಪ-ಅಧೀಕ್ಷಕರು ಪ್ರಸಾದ್ ಗೋಕಲ್ ಅವರು ನಮ್ಮ ಇಲಾಖೆಯ ಸಾರ್ವಜ£ಕ ಸೇವೆಯಲ್ಲಿ ಕರ್ತವ್ಯದ ಒತ್ತಡ ಇದ್ದೆ ಇರುತ್ತದೆ, ಅದಕ್ಕೆ ಮಾನಸಿಕವಾಗಿ ಸಿದ್ದವಾಗಿರಬೇಕು, ವ್ಯಾಯಾಮ, ದ್ಯಾನ ಮತ್ತು ಪ್ರಾಣಾಯಾಮ ಮಾಡಿಕೊಂಡಲ್ಲಿ £ಭಾಯಿಸಬಹುದು, ಹೆಚ್ಚಿನ ಮಟ್ಟದಲ್ಲಿ ಇದ್ದಾಗ ಮನೋವೈದ್ಯರನ್ನು ಸಂಪರ್ಕ ಮಾಡಬೇಕು, ತರಬೇತಿಯಿಂದ ಎಲ್ಲರಿಗೂ ಉಪಯೋಗವಾಗಬಹುದು ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಅಧಿಕಾರಿ ಶ್ರೀ ಕುಮಾರ್ ನಾನಾವಟೆ ಅವರು ಮಾತನಾಡಿ ಒತ್ತಡ ಯಾರಿಗೆ ಇರುವುದಿಲ್ಲ ಹೇಳಿ ಒತ್ತಡಲ್ಲೆ ಯಶಸ್ಸನ್ನು ಕಾಣಬೇಕು, ಪೋಲಿಸ್ ಅಧಿಕಾರಿಗಳಿಗೆ ಸಮಯ ಪಾಲನೆ ಮುಖ್ಯ, ಅದಕ್ಕಾಗಿ ಇರುವ ಬರುವ ಒತ್ತಡವನ್ನು ಮೈಮೇಲೆ ಹಾಕಿಕೊಂಡರೆ ಆರೋಗ್ಯ ಹಾಳಾಗುವುದು, ಅರಕ್ಷಕ ಮತ್ತು ಶಿಕ್ಷಕ ವೃತ್ತಿಯನ್ನು £ಭಾಯಿವುದು ಕಷ್ಟಕರ ಅದರೆ ಪ್ರತಿಫಲ ಉತ್ತಮ ದೇಶದ ಕೊಡುಗೆಯಾಗುವುದಲ್ಲಿ ಸಂದೇಹವಿಲ್ಲ, ಬಿ.ಎಡ್ ವಿದ್ಯಾರ್ಥಿಗಳು ಸಹ ಮಾನಸಿಕ ಆರೋಗ್ಯ ಕುರಿತು ವೃತ್ತಿಜೀವನದಲ್ಲಿ ಅರಿವು ಮೂಡಿಸುವ ಕೆಲಸ ಮಾಡುವಂತೆ ತಿಳಿಸಿದರು,
ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಮಾನಸಿಕ ಶಾಸ್ತ್ರಜ್ಞರಾದ ಕಾವ್ಯಾ ಮತ್ತು ಶಾಂತ ಕುಮಾರ್ ನಡೆಸಿಕೊಟ್ಟರು, ಈ ಸಂದರ್ಭದಲ್ಲಿ ಸಂಡೂರು ಪೋಲೀಸ್ ಉಪ £ರೀಕ್ಷಕ ಎಸ್.ಉಮೇಶ್, ಡಬ್ಲೂ÷್ಯ.ಪಿ.ಎಸ್.ಐ ನಾಗರತ್ನ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಚೋರುನೂರು ಎ.ಎಸ್.ಐ ವೀರೇಶ್, ಪ್ರಕಾಶ್,ಚಂದ್ರಪ್ಪ,ಲೋಕೇಶ್, ತೋರಣಗಲ್ಲು ಸ್ಟೇಷನ್ ನ ಮಹೇಶ್ ಬಣಕಾರ್,ರಘುರಾಮ ರೆಡ್ಡಿ, ಅಣ್ಣಪ್ಪ, ಸಂಡೂರು ಬಿ.ವೀರಭದ್ರ,ವಸೂರಪ್ಪ, ವಾಲ್ಯಾನಾಯ್ಕ,ಜಾಫರ್,ಸಂತೋಷ್, ಕಾಲೇಜಿನ ನಾಗಭೂಷಣ್,ಆನಂದ್, ದೇವರಾಜ್ ಇವರೊಂದಿಗೆ ವೀರಭದ್ರ ಅವರು ಕಾರ್ಯಕ್ರಮ ನಡೆಸಿಕೊಟ್ಟರು, ಕುಮಾರ್ ನಾನಾವಟೆ ಅವರು ಪೋಸ್ಟರ್ ಗಳನ್ನು ಬಿಡುಗಡೆ ಮಾಡಿ ಅತಿಥಿಗಳಿಗೆ ನೆನಪಿನ ಕಾಣಿಕೆಗಳನ್ನು ವಿತರಣೆ ಮಾಡಿದರು
Gadi Kannadiga > State > ಪೋಲಿಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾನಸಿಕ ಆರೋಗ್ಯವನ್ನು ಸುಸ್ಥಿರವಾಗಿಟ್ಟುಕೊಳ್ಳಬೇಕು; ಡಿ.ವೈ.ಎಸ್.ಪಿ ಪ್ರಸಾದ್ ಗೋಕಲ್
ಪೋಲಿಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾನಸಿಕ ಆರೋಗ್ಯವನ್ನು ಸುಸ್ಥಿರವಾಗಿಟ್ಟುಕೊಳ್ಳಬೇಕು; ಡಿ.ವೈ.ಎಸ್.ಪಿ ಪ್ರಸಾದ್ ಗೋಕಲ್
Suresh30/08/2023
posted on

More important news
ಬೆಳಗಾವಿಯ ಹುಡುಗರ ಸಾಹಸ ” ಪರ್ಯಾಯ”
18/09/2023