ಗದಗ ಜನೆವರಿ ೪ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ಡಿ.೨೭ರ ಅಂತ್ಯಕ್ಕೆ ಗದಗ ಜಿಲ್ಲೆಯ ಒಟ್ಟು ೧೩೪೧೫೬ ಜನ ಅರ್ಹ ರೈತ ಫಲಾನುಭವಿಗಳ ಪೈಕಿ ೪೬೧೫೫ ರೈತರು ಇ-ಕೆವೈಸಿ ಮಾಡಿಸಿಕೊಳ್ಳುವುದು ಬಾಕಿ ಇದೆ. ಗದಗ ತಾಲೂಕು ೮೫೫೪, ಮುಂಡರಗಿ ೭೧೯೬, ನರಗುಂದ ೪೮೯೨, ರೋಣ (ಗಜೇಂದ್ರಗಡ ಸೇರಿ) ೧೪೭೨೮, ಶಿರಹಟ್ಟಿ (ಲಕ್ಷ್ಮೇಶ್ವರ ಸೇರಿ) ೧೦೭೮೫ ಜನ ರೈತರುಇ-ಕೆವೈಸಿ ಮಾಡಿಸಿಕೊಳ್ಳುವುದು ಬಾಕಿ ಇರುತ್ತದೆ. ಸದರಿ ಬಾಕಿ ಪಟ್ಟಿಗಳನ್ನು ಗ್ರಾಮ ಪಂಚಾಯತಗಳಲ್ಲಿ, ರೈತ ಸಂಪರ್ಕ ಕೇಂದ್ರಗಳಲ್ಲಿ ಲಗತ್ತಿಸಲಾಗಿದೆ. ಕೃಷಿ ಇಲಾಖೆಯ ಕ್ಷೇತ್ರ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಮನೆ ಮನೆಗೆ ತೆರಳಿ ಮೋಬೈಲ್ ಓಟಿಪಿ ಆಧಾರಿತ ಇ-ಕೆವೈಸಿಯನ್ನು ಸ್ಥಳದಲ್ಲೇ ಮಾಡಿಕೊಡುತ್ತಿದ್ದಾರೆ. ಆದರೆ, ಇ-ಕೆವೈಸಿ ಬಾಕಿ ಇರುವ ಬಹಳಷ್ಟು ಜನ ರೈತರ ಆಧಾರ್ ಕಾರ್ಡನಲ್ಲಿ ಮೋಬೈಲ್ ನಂಬರ್ ದಾಖಲಾಗಿರುವುದಿಲ್ಲ. ಅಥವಾ ಬೇರೆಯವರ ಮೋಬೈಲ್ ನಂಬರ್ ದಾಖಲಿಸಿ ಈ ಹಿಂದೆ ಪಿಎಂಕಿಸಾನ್‌ಯೋಜನೆಯಡಿ ನೋಂದಣಿ ಮಾಡಿಕೊಂಡಿರುವುದರಿಂದಓಟಿಪಿ ಆಧಾರಿತ ಇ-ಕೆವೈಸಿ ಸಾಧ್ಯವಾಗುತ್ತಿಲ್ಲ. ಸ್ಥಳಿಯ ನಾಗರಿಕ ಸೇವಾ ಕೇಂದ್ರಗಳು ಅಥವಾಗ್ರಾಮಒನ್ ಕೇಂದ್ರಗಳಿಗೆ ತೆರಳಿ ಬಯೋಮೆಟ್ರಿಕ್ (ಹೆಬ್ಬೆರಳು ಗುರುತು ದಾಖಲಿಸಿ) ಆಧಾರಿತ ಇ-ಕೆವೈಸಿ ಮಾಡಿಸಿಕೊಳ್ಳಬೇಕಾಗುತ್ತದೆ. ಬಾಕಿ ಪಟ್ಟಿಗಳನ್ನು ನಾಗರಿಕ ಸೇವಾ ಕೇಂದ್ರಗಳು ಮತ್ತುಗ್ರಾಮಒನ್ ಕೇಂದ್ರಗಳಿಗೆ ಈಗಾಗಲೇ ಒದಗಿಸಲಾಗಿದ್ದು, ಬಾಕಿ ಪಟ್ಟಿಯಲಿ ್ಲತಮ್ಮ ಹೆಸರು ಇರುವ ರೈತರು ಶೀಘ್ರ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಪಿಎಂಕಿಸಾನ್‌ಯೋಜನೆಯ ಮುಂದಿನ ಕಂತುಗಳು ನಿಮ್ಮ ಖಾತೆಗೆ ಜಮೆ ಆಗುವುದಿಲ್ಲ.
ಜಂಟಿ ಖಾತೆದಾರರು, ದಿ: ೦೧-೦೨-೨೦೧೯ ರ ನಂತರ ಪೌತಿ ಕಾರಣದಿಂದಾಗಿ ಖಾತೆ ವರ್ಗಾವಣೆಯಾಗಿರುವ ಫಲಾನುಭವಿಗಳು, ಒಂದೇ ಕುಟುಂಬದ ಸದಸ್ಯರೆಂದು ಭೂಹಿಡುವಳಿ ಹೊಂದಿರುವ ವಯಸ್ಕ ಮಕ್ಕಳು, ಹಿರಿಯ ನಾಗರಿಕರು ಹಾಗೂ ಮಾಹಿತಿಕೊರತೆಯಿಂದ ಮೇಲಿನ ಅರ್ಹ ಕಾರಣಗಳಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದರೈತ ಕುಟುಂಬಗಳು ಹೊಸದಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಬಾಕಿ ಇರುವರೈತರು ಪಿಎಂಕಿಸಾನ್ ಇ-ಕೆವೈಸಿ ಮಾಡಿಸಿಕೊಳ್ಳಲು ಹಾಗೂ ಮೇಲಿನ ಕಾರಣಗಳಿಗಾಗಿ ಯೋಜನೆಯ ಲಾಭ ಪಡೆಯದೆ ವಂಚಿತರಾಗಿರುವ ಅರ್ಹ ಫಲಾನುಭವಿಗಳು ಹೊಸದಾಗಿ ನೋಂದಣಿ ಮಾಡಿಸಿಕೊಳ್ಳಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ರೈತ ಸಂಪರ್ಕ ಕೇಂದ್ರ, ನಾಗರಿಕ ಸೇವಾ ಕೇಂದ್ರ, ಗ್ರಾಮಒನ್‌ಕೇಂದ್ರ ಅಥವಾ ತಾಲೂಕಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳನ್ನು ಸಂಪರ್ಕಿಸಬಹುದಾಗಿದೆ. ತಾಲೂಕಾ ಸಹಾಯಕ ಕೃಷಿ ನಿರ್ದೇಶಕರ ಮೋಬೈಲ್ ಸಂಖ್ಯೆಗದಗ ೮೨೭೭೯೩೧೪೧೦, ಮುಂಡರಗಿ ೮೨೭೭೯೩೧೪೪೫, ನರಗುಂದ ೮೨೭೭೯೩೧೪೫೪, ರೋಣ ೮೨೭೭೯೩೧೪೫೧ ಹಾಗೂ ಶಿರಹಟ್ಟಿ ೮೨೭೭೯೩೧೪೬೧ ಗಳಿಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
Gadi Kannadiga > State > ರೈತರಿಗೆ ಇ ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ
ರೈತರಿಗೆ ಇ ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ
Suresh04/01/2023
posted on