This is the title of the web page
This is the title of the web page

Please assign a menu to the primary menu location under menu

State

ಧ್ವಜವನ್ನು ಅತಿ ಗೌರವದಿಂದ ಮಡಚಿ ಇಡಿ : ಶಾಸಕಿ ಅಂಜಲಿ ನಿಂಬಾಳ್ಕರ್ ಮನವಿ


ಬೆಳಗಾವಿ : ಖಾನಾಪೂರ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸನ್ಮಾನ್ಯ ಕಾರ್ಯಸಾಮ್ರಾಜ್ಞಿ ಶಾಸಕಿ ಡಾ ಅಂಜಲಿತಾಯಿ ಹೇಮಂತ್ ನಿಂಬಾಳ್ಕರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ 76 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆ ನಿಮಿತ್ತ ಭಾಗವಹಿಸಿದ ಸಂದರ್ಭ.

ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಸ್ವಾತಂತ್ರ್ಯ ಅಮೃತ ಮಹೋತ್ಸವು ದೇಶಾದ್ಯಂತ ಅತಿ ವಿಶಿಷ್ಟವಾಗಿ ಹಾಗೂ ವಿಬ್ರಂಜನೆಯಿಂದ ಮನೆ ಮನೆಗೆ ರಾಷ್ಟ್ರ ಧ್ವಜವನ್ನು ಕಟ್ಟಿ ವಿಶೇಷವಾಗಿ ಆಚರಿಸಲಾಗಿದೆ.

ಶಾಸಕರು ಡಾ ಅಂಜಲಿತಾಯಿ ರವರು ನಮ್ಮ ಖಾನಾಪೂರ ತಾಲೂಕಿನ ಜನತೆಗೆ ಒಂದು ಮನವಿ ಮಾಡಿಕೊಂಡಿದ್ದು ಅಗಸ್ಟ್ 15 ಸಾಯಂಕಾಲ ಧ್ವಜವನ್ನು ಅತಿ ಗೌರವದಿಂದ ಮಡಚಿ ಮನೆಯ ತಿಜೋರಿ ಅಥವಾ ಗೌರವದ ಸ್ಥಳದಲ್ಲಿ ಇಡಬೇಕು ಇಲ್ಲವಾದಲ್ಲಿ ಖಾನಾಪೂರ ಪಟ್ಟಣದ ಜನತೆ ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಹಸ್ತಾಂತರಿಸಬೇಕು ಹಾಗೂ ಗ್ರಾಮೀಣ ಭಾಗದ ಜನರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಹಸ್ತಾಂತರಿಸಬೇಕು ಪಟ್ಟಣ ಪಂಚಾಯತ್ ಅಧಿಕಾರಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಹತ್ತಿರ ಸೇರಿರುವ ಎಲ್ಲ ಧ್ವಜಗಳನ್ನು ತಹಶೀಲ್ದಾರ್ ಖಾನಾಪೂರ ರವರಿಗೆ ಗೌರವದಿಂದ ಹಸ್ತಾಂತರಿಸಬೇಕು ತದನಂತರ ತಹಶೀಲ್ದಾರ್ ರವರು ರಾಷ್ಟ್ರ ಧ್ವಜದ ನಿಯಮಾನುಸಾರ ಹಿರಿಯ ಅಧಿಕಾರಿಗಳ ಜೋತೆಗೂಡಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ವಿನಂತಿ ಮಾಡಿದರು.


Gadi Kannadiga

Leave a Reply