This is the title of the web page
This is the title of the web page

Please assign a menu to the primary menu location under menu

State

ಕುಷ್ಟಗಿಯಲ್ಲಿ ಶೈಕ್ಷಣಿಕ ಆರ್ಥಿಕ ನೆರವು ಕಾರ್ಯಕ್ರಮ ಯಶಸ್ವಿ


ಕುಷ್ಟಗಿ:- ಪಟ್ಟಣದ ಶ್ರೀ ಬುತ್ತಿಬಸವೇಶ್ವರ ದೇವಸ್ಥಾನ ಆವರಣದಲ್ಲಿ ನೆಡೆದ ವಿದ್ಯಾ ಪೋಷಕ ಸಂಸ್ಥೆ ಧಾರವಾಡ ಕುಷ್ಟಗಿ ಘಟಕದ ವತಿಯಿಂದ ಶೈಕ್ಷಣಿಕ ಆರ್ಥಿಕ ನೆರವು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಗುಣಶೀಲ ಶೆಟ್ಟಿ ಆರ್.ಉಡುಪಿ ಕೈಗಾರಿಕೋದ್ಯಮಿಗಳು,ದುಬೈ

ಇವರು ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮ ಕುರಿತು ಮಾತನಾಡಿದ ಕುಷ್ಟಗಿ ತಾಲೂಕು ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಕೆ.ಎಸ್.ರಡ್ಡಿ ಮಾತನಾಡಿ ಶಿಕ್ಷಣದಿಂದ ಈ ಜಗತ್ತನ್ನೇ ಗೆಲ್ಲಬಹುದು ಎನ್ನುವುದಕ್ಕೆ ಸಾಕ್ಷಿ ನಮ್ಮ ಕಣ್ಣು ಮುಂದೆ ಇರುವ ದುಬೈ ದೇಶದಲ್ಲಿ ಕೈಗಾರಿಕೋದ್ಯಮ ಸ್ಥಾಪನೆ ಮಾಡಿ ನೂರಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದಾರೆ ದುಡಿಮೆ ಹಿಂದೆ ದುಡ್ಡಿನತಾಯಿ ಇರುತ್ತಾಳೆ ಮನುಷ್ಯ ಮನುಷ್ಯನಾಗಿ ಬಾಳಬೇಕು ಈ ಜೀವನದಲ್ಲಿ ಒಂದು ಒಳ್ಳೆಯ ಅರ್ಥ ಬರಬೇಕು ಎಂದರೆ ಬಡವನು ಬಡವನಾಗಿ ಉಳಿಯಬೇಕು ಎಂಬ ನಿಯಮವಿಲ್ಲ ಬಡವನು ಶ್ರೀಮಂತನಾಗಬಹುದು ಶ್ರೀಮಂತ ಬಡವನಾಗಬಹುದು ಆದ್ದರಿಂದ ವಿದ್ಯಾಪೋಷಕ ಸಂಸ್ಥೆ ಕೊಟ್ಟ ಆರ್ಥಿಕ ನೆರವು ಪಡೆದು ವಿದ್ಯಾರ್ಥಿಗಳು ಸಮಾಜದಲ್ಲಿ ಒಳ್ಳೆಯ ಉದ್ಯೋಗಸ್ಥನಾಗಿ ಯಶಸ್ವಿಯಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿದ್ಯಾಪೋಷಕ ಸಂಸ್ಥೆ ಕಾರ್ಯದರ್ಶಿ ಚಂದ್ರಶೇಖರ ಎಸ್.ಕೆ, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ, ನಿವೃತ್ತ ಶಿಕ್ಷಕ ಈಶ್ವರಪ್ಪ ನಾಲತವಾಡ ಕಾರ್ಯಕ್ರಮ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಶಾಂತರಾಜ ಗೋಗಿ ಜೈನ್, ವಿರೇಶ ಬಂಗಾರಶೆಟ್ಟರ್,
ಬಸವರಾಜ ಕೋಳೂರ, ಅಮರೇಶ ಮುದೇನೂರ, ಎಸ್.ಎನ್.ಘೋರ್ಪಡೆ, ಬಸವರಾಜ ಕುಡತನಿ, ಶಿವರಾಜ ಅಂಗಡಿ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.


Gadi Kannadiga

Leave a Reply