ಬೆಳಗಾವಿ, ಆ.೦೯ : ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಬೆಳಗಾವಿ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ ಬೆಳಗಾವಿ, ಮಹಿಳಾ ಮತ್ತು ಮಕ್ಕಳ ಅಭಿವ್ರದ್ಧಿ ಇಲಾಖೆ, ರೋಟರಿ ದರ್ಶನ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಬೆಳಗಾವಿ ಇವರ ಸಹಯೋಗದಲ್ಲಿ ಆ.೭ ೨೦೨೩ ರಂದು “ಪರಿಣಾಮಕಾರಿ ಮಿಷನ್ ಇಂದ್ರಧನುಷ ೫.೦ ಅಭಿಯಾನ ಕಾರ್ಯಕ್ರಮ ಉದ್ಘಾಟನಾ ಸಮಾರಂಭವು ಜರುಗಿತು.
ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರರಾದ ಶೋಭಾ ಸೋವiನ್ನಾಚೆ ಅವರು ಜ್ಯೋತಿ ಬೆಳಗಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೆಳಗಾವಿ ಉತ್ತರ ಶಾಸಕರಾದ ಆಸಿಪ್ (ರಾಜು) ಶೇಠ್ ಅವರು ಪರಿಣಾಮಕಾರಿ ಮಿಷನ್ ಇಂದ್ರಧನುಷ ೫.೦ ಅಭಿಯಾನದ ಲಸಿಕಾ ಸಸ್ತ್ರದಲ್ಲಿ (ಶೇಶನ್) ಅರ್ಹ ಮಕ್ಕಳಿಗೆ ಲಸಿಕಾ ಹನಿ ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಆರೋಗ್ಯ ಇಲಾಖೆ ಲಸಿಕೆಗಳಿಂದ ಅನೇಕ ಖಾಯಿಲೆಗಳನ್ನು ನಿರ್ಮೂಲನೆ ಮತ್ತು ಹತೋಟಿಯಲ್ಲಿ ಇಟ್ಟಿದ್ದು, ನಮ್ಮ ಜಿಲ್ಲೆಯಲ್ಲಿ ಯಾರೂ ಲಸಿಕೆಯಿಂದ ವಂಚಿತರಾಗದೇ ಸರ್ಕಾರ ಮಾರ್ಗಸೂಚಿಗಳ ಪ್ರಕಾರ ಲಸಿಕೆಗಳನ್ನು ಪಡೆದುಕೊಂಡು ಸದೃಡ ರಾಷ್ಟ್ರ ನಿರ್ಮಾಣಕ್ಕೆ ಕೈಜೊಡಿಸಬೇಕೆಂದು ತಿಳಿಸಿ ಮಿಷನ್ ಇಂದ್ರಧನುಷ ೫.೦ ಅಭಿಯಾನದ ಹಾಗೂ ವಿಶ್ವ ಸ್ತನ್ಯಪಾನ ಸಪ್ತಾಹದ ಆರೋಗ್ಯ ಶಿಕ್ಷಣ ಪರಿಕರಗಳನ್ನು ಬಿಡುಗಡೆ ಮಾಡಿದರು.
ಬೆಳಗಾವಿ ಜಿಲ್ಲೆಯಲ್ಲಿ ಅಗಷ್ಟ ೭ ರಿಂದ ೧೨ ರವರೆಗೆ ಮೊದಲನೆ ಸುತ್ತು, ಸಪ್ಟೆಂಬರ ೧೧ ರಿಂದ ೧೬ ರವರೆಗೆ ೨ನೇ ಸುತ್ತು. ಹಾಗೂ ಅಕ್ಟೋಬರ ೯ ರಿಂದ ೧೪ ರವರೆಗೆ ೩ನೇ ಸುತ್ತು ಈ ಮೂರು ಸುತ್ತುಗಳಲ್ಲಿ ತೀವ್ರ ಇಂದ್ರದನುಷ್ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಸ್ತಾವಿಕವಾಗಿ ಜಿಲ್ಲಾ ಸಂತಾನೋತ್ಪತಿ ಮತ್ತು ಮಕ್ಕಳ ಆರೋಗ್ಯ ಹಾಗೂ ಲಸಿಕಾಧಿಕಾರಿ ಡಾ.ಚೇತನ ಕಂಕಣವಾಡಿ ಅವರು ತಿಳಿಸಿದರು.
ಜಿಲ್ಲೆಯಲ್ಲಿ “ಪರಿಣಾಮಕಾರಿ ಮಿಷನ್ ಇಂದ್ರಧನುಷ ೫.೦ ಅಭಿಯಾನದಡಿ ಸೂಕ್ತ ತಯಾರಿಗಳನ್ನು ಮಾಡಿಕೊಂಡಿದ್ದು, ಸಮೀಕ್ಷೆ ಮೂಲಕ ಲಸಿಕೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ನೀಡಲಾಗುವ ಲಸಿಕೆಯನ್ನು ಪಡೆಯದೇ ಅಥವಾ ಅರ್ಧಕ್ಕೆ ಬಿಟ್ಟುಹೋದ ಒಟ್ಟು ೧೧೫೩೬ ಎರಡು ವರ್ಷದೊಳಗಿನ ಮಕ್ಕಳು’ ೨೯೪೩ ಎರಡ ರಿಂದ ಐದು ವರ್ಷದ ಮಕ್ಕಳು ಹಾಗೂ ೨೫೯೬ ಗರ್ಭಿಣಿಯರು, ತೀವ್ರತರ ಮಿಷನ್ ಇಂದ್ರದನುಷ ೫.೦ ಅಭಿಯಾನದಲ್ಲಿ ಲಸಿಕೆಯನ್ನು ನೀಡಲಾಗುತ್ತಿದ್ದು ಇದಕ್ಕಾಗಿ ೩೨ ಮೊಬೈಲ್ ಲಸಿಕಾ ತಂಡಗಳನ್ನು ಮತ್ತು ೧೧೨೯ ಲಸಿಕಾ ಸಸ್ತ್ರಗಳನ್ನು ಜಿಲ್ಲೆಯಾದ್ಯಂತ ಆಯೋಜನೆ ಮಾಡಿಕೊಳ್ಳಲಾಗಿದೆ. ಲಸಿಕೆ ಪಡೆಯದ ಗರ್ಬಿಣಿ ಮತ್ತು ಮಕ್ಕಳ ಪಾಲಕರು ತಮ್ಮ ಸಮೀಪದ ಆಶಾ ಅಂಗನವಾಡಿ ಕಾರ್ಯಕರ್ತೆಯರನ್ನು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ಬೇಟಿನೀಡಿ ಲಸಿಕೆ ಪಡೆದುಕೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಕೋಣಿ ಅವರು ತಿಳಿಸಿದರು.
ರೋಟರಿಯನ್ ಕೋಮಲ್ ಕೋಳಿಮಠ ಅಧ್ಯಕ್ಷರು ರೋಟರಿ ದರ್ಶನ ಬೆಳಗಾವಿ ಅವರು ಮಾತನಾಡಿ ಮಾರಕ ರೋಗಗಳ ವಿರುದ್ದ ನೀಡುತ್ತಿರುವ ಲಸಿಕೆಗಳಿಂದ ಯಾರೂ ವಂಚಿತರಾಗಬಾರದು ಲಸಿಕೆಗಳು ಪರಿಣಾಮಕಾರಿಗಳಾಗಿವೆ ಎಂದು ತಿಳಿಸಿದರು.
ಡಾ.ಶಿವಾನಂದ ಮಾಸ್ತಿಹೋಳಿ ತಾಲೂಕಾ ಆರೋಗ್ಯಾಧಿಕಾರಿಗಳು ಬೆಳಗಾವಿ ಎಲ್ಲರಿಗೂ ಸ್ವಾಗತಿಸಿ ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮದಡಿಯಲ್ಲಿ ಬರುವ ಲಸಿಕೆಗಳ ಕುರಿತು ಮಾಹಿತಿಯನ್ನು ನೀಡಿದರು.
ಬೆಳಗಾವಿ ಮಹಾನಗರ ಪಾಲಿಕೆ ಉಪ ಮಹಾಪೌರರಾದ ರೇಷ್ಮಾ ಪಾಟೀಲ ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ ದುಡಗುಂಟಿ, ಬಿಮ್ಸ್ ನಿರ್ದೇಶಕರಾದ ಡಾ.ಅಶೊಕ ಶೇಟ್ಟಿ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಸುಧಾಕರ ಆರ್.ಸಿ, ಬಿಮ್ಸ್ ಸ್ಥಳೀಯ ವೈದ್ಯಾಧಿಕಾರಿಗಳಾದ ಡಾ.ಸರೋಜ ತಿಗಡಿ, ಬೆಳಗಾವಿ ವೃತ್ತದ ಸಮೀಕ್ಷಣಾ ವೈದ್ಯಾಕಾರಿ ಡಬ್ಲೂ ಎಚ್ ಓರಾದ ಡಾ.ಸಿದ್ದಲಿಂಗಯ್ಯಾ, ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳಾದ ಡಾ.ಸಂಜಯ ಡುಮ್ಮಗೋಳ ಉಪಸ್ಥಿತರಿದ್ದರು. ಬಿ.ಪಿ ಯಲಿಗಾರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಕಾರ್ಯಕ್ರಮ ನಿರೂಪಿಸಿದರು. ಶಿವಾಜಿ ಮಾಳಗೆನ್ನವರ ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ವಂದಿಸಿದರು.
Gadi Kannadiga > Local News > “ಪರಿಣಾಮಕಾರಿ ಮಿಷನ್ ಇಂದ್ರಧನುಷ ೫.೦ ಅಭಿಯಾನ
“ಪರಿಣಾಮಕಾರಿ ಮಿಷನ್ ಇಂದ್ರಧನುಷ ೫.೦ ಅಭಿಯಾನ
Suresh09/08/2023
posted on