This is the title of the web page
This is the title of the web page

Please assign a menu to the primary menu location under menu

State

ಭೋವಿ ಸಮಾಜಕ್ಕೆ ನೂತನ ತಾಲೂಕ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ


  • ಕುಷ್ಟಗಿ:- ಕುಷ್ಟಗಿ ತಾಲೂಕಿನ ಭೋವಿ ಸಮಾಜದ ಮುಖಂಡರು ಹಿರಿಯರು ತಾಲೂಕಿನ ಚಳಗೇರಾ,ಮಾದಾಪೂರ,ಮುದ್ದಲಗುದ್ದಿ, ಶಿರಗುಂಪಿ,ಗೋತಗಿ, ಗ್ರಾಮಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಬೇಟಿ ನೀಡಿ ಭೋವಿ ಸಮಾಜದವರ ಜೊತೆ ಗ್ರಾಮಗಳಲ್ಲಿ ಸಭೆ ಕರೆಸಿ ಕುಷ್ಟಗಿ ತಾಲ್ಲೂಕಿನ ಭೋವಿ ಸಮಾಜದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ಕುರಿತು ಚರ್ಚಿಸಲಾಯಿತು.ಸಮಾಜದ ಬೆಳವಣಿಗೆ ಗೆ ಸೇವೆ ಮಾಡುವ ವ್ಯಕ್ತಿಯನ್ನು ಆಯ್ಕೆ ಮಾಡುವ ಕುರಿತು ತಾಲೂಕಿನ ಗ್ರಾಮಗಳಿಗೆ ಸಮಾಜದ ಬಾಂಧವರಲ್ಲಿ ಚರ್ಚಿಸಿದಾಗ ,ಸಮಾಜದ ಸೂಚಪ್ಪ ಭೋವಿ ಉತ್ತಮ ಸಂಘಟನ ಕಾರ ಇಂತವರನ್ನು ನೂತನವಾಗಿ ಅಧ್ಯಕ್ಷರನ್ನಾಗಿ ಆಯ್ಕೆಯಾಗಿ ಮಾಡುವುದು ಸೂಕ್ತ ಎಂದು ಸಮಾಜದ ಮುಖಂಡರು ಚರ್ಚಿಸಿದರು .ನಂತರ ಸೂಚಪ್ಪ ಭೋವಿ ಯವರನ್ನು ಅಧ್ಯಕ್ಷರನ್ನಾಗಿ,ಹಾಗೂ ಉಪಾಧ್ಯಕ್ಷರನ್ನಾಗಿ ಗೋವಿಂದ ವಡ್ಡರನ್ನು ಆಯ್ಕೆ ಮಾಡಲಾಯಿತು. ನಂತರ ಸಮಾಜದವರೆಲ್ಲರೂ ಅವರಿಗೆ ಸನ್ಮಾನ ಮಾಡಿ ಸಮಾಜದ ವರಿಗೆ ಶಿಕ್ಷಣ ,ಆರೋಗ್ಯ,ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವದು ಎಂದು ನೂತನ ಅಧ್ಯಕ್ಷ ಸೂಚಪ್ಪ ಭೋವಿ ಹೇಳಿದರು. ನಂತರ ಭೋವಿ ಸಮಾಜದವರು ಸನ್ಮಾನ ಮಾಡಿದರು.ಈ ಸಂದರ್ಭದಲ್ಲಿ ನಾಗರಾಜ ಭೋವಿ ರಾಜ್ಯ ಮಾಧ್ಯಮ ಪ್ರತಿನಿಧಿ ಯುವ ವೇದಿಕೆ. ಬಸವರಾಜ ಮಹಾಸ್ವಾಮಿಗಳು, ಶಿವು ಹಿರೇಮನ್ನಾಪುರ, ಮಾರುತಿ, ಮುತ್ತಣ್ಣ, ಗೋಪಾಲ, ಶ್ರೀಶೈಲ, ಮಾರುತಿ, ಗೋಪಾಲ, ಧನಸೇಪ್,ರಮೇಶ,ಚಂದ್ರು,ಗದ್ದೆಪ್ಪ, ಹಿರಿಯರು ಹಾಗೂ ಯುವಕರು ಇದ್ದರು.

ಆರ್ ಶರಣಪ್ಪ ಗುಮಗೇರಾ

ಕೊಪ್ಪಳ


Gadi Kannadiga

Leave a Reply