ಬೆಳಗಾವಿ: ಇತರ ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆ ಹಾಗೂ ಗುಣಮಟ್ಟ ಹೆಚ್ಚಾಗುತ್ತಿರುವ ಪರಿಸ್ಥಿತಿಯಲ್ಲಿ, ಶಿಕ್ಷಣ ಕ್ಷೇತ್ರದಲ್ಲಿಯೂ ಬದಲಾವಣೆ, ಗುಣಮಟ್ಟದ ವರ್ಧನೆ ಈಗಿನ ಪರಿಸ್ಥಿಯ ಅಗತ್ಯವಾಗಿರುತ್ತÀದೆ. ವಿಜ್ಞಾನವು ವಿದ್ಯಾರ್ಥಿಗಳಲ್ಲಿ ಸಮಸ್ಯೆ ಪರಿಹಾರಕ್ಕೆ ಸಹಾಯ ಮಾಡುವಲ್ಲಿ, ತಾರ್ಕಿಕತೆ, ಸೃಜನ ಶೀಲತೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾಂಪ್ರದಾಯಿಕ ಪದ್ದತಿಯಿಂದ ಅಥವಾ ಕೇವಲ ಬೋಧನಾ ವಿಧಾನದಿಂದ ವಿಜ್ಞಾನವÀನ್ನು ಬೋಧಿಸುವುದರಿಂದ ವಿದ್ಯಾರ್ಥಿಗಳಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲಾ, ಯಾವುದೇ ವೈಜ್ಞಾನಿಕ ಪ್ರಕ್ರಿಯೆಯ ಪರಿಕಲ್ಪನೆಯನ್ನು ಸುಲಭವಾಗಿ ಅರ್ಥಮಾಡಿಸಿಕೊಳ್ಳಲು ಶಿಕ್ಷಕರಿಗೆ ಬೋಧನಾ ಸಾಮಗ್ರಿಗಳು ಬಹಳ ಉಪಯೋಗಕ್ಕೆ ಬರುತ್ತದೆ. ಸಾಂಪ್ರದಾಯಿಕ ಬೋಧನೆ ಹಾಗೂ ಕಲಿಕಾ ವಿಧಾನಗಳು ನವೀನ, ಸೃಜನಶೀಲ ಹಾಗೂ ಸಮರ್ಥ ಶಿಕ್ಷಣ ವಿಧಾನಗಳಿಗೆ ವೇಗವಾಗಿ ದಾರಿ ಮಾಡಿಕೊಡುತ್ತಿವೆ. ಕೇವಲ “ಚಾಕ್‌ಅಂಡ್‌ಟಾಕ್” ಸಾಂಪ್ರದಾಯಿಕ ಬೋಧನಾ ಪದ್ದತಿಯು ಸಂಪೂರ್ಣವಾಗಿ ಅನಗತ್ಯವಲ್ಲದಿದ್ದರೂ, ಸಮಕಾಲೀನ ಶೈಕ್ಷಣಿಕ ದೃಷ್ಠಿಯಲ್ಲಿ ಅಸಮರ್ಪಕವೆಂದು ಪರಿಗಣಿಸಲ್ಪಡುತ್ತಿದೆ. ಕಲಿಕಾ ಪರಿಸರವು ಉತ್ತೇಜಕ ಮತ್ತು ಸಕ್ರಿಯವಾಗಿದ್ದಾಗ ಕಲಿಕೆ ನಡೆಯುತ್ತದೆ. ಶಿಕ್ಷಣ ಪದ್ದತಿಯಲ್ಲಿ ಕಲಿಕಾ ಸಾಮಗ್ರಿಗಳನ್ನು ತಯಾರಿಸುವುದು ಮತ್ತು ಬಳಸುವುದು ಬೋಧನೆಯ ಪ್ರಮುಖ ಭಾಗವಾಗಿರುವುದರಿಂದ ಶಿಕ್ಷಣ ಸಾಮಾಗ್ರಿಗಳ ತಯಾರಿಕೆ ಮೂಲಕ ವಿಜ್ಷಾನ ಸಂವಹನ ಕಾರ್ಯಾಗಾರದ ಪ್ರಯೋಜನ ಪಡೆಯಬೇಕೆಂದು ಸೇವಕ, ಬೆಳಗಾವಿ ಸಂಸ್ಥೆಯ ನಿರ್ದೇಶಕ ಹಾಗೂ ಪ್ರಧಾನ ಪರಿವೀಕ್ಷಕ ಆನಂದ ಲೋಬೊ ಕರೆ ನೀಡಿದರು. ಇವರು ಸೇವಕ ಸಂಸ್ಥೆ ಇವರು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಪರಿಷತ್ತು, ನವ ದೆಹಲಿ ಇವರ ಸಹಯೋಗದೊಂದಿಗೆ ಸ್ಥಳೀಯ ಫಿನಿಕ್ಸ್ ಶಿಕ್ಷಣ ಮಹಾ ವಿದ್ಯಾಲಯ, ಇಲ್ಲಿ ವಿಜ್ಷಾನ ಶಿಕ್ಷಕರು ಹಾಗೂ ಶಿಕ್ಷಣ ಮಹಾ ವಿದ್ಯಾಲಯಗಳ ಶಿಕ್ಷಣ ಪ್ರಶಿಕ್ಷಕರುಗಳಿಗೆ ಆಯೋಜಿಸಿದ್ದ ಮೂರು ದಿನಗಳ “ಕಡಿಮೆ ವೆಚ್ಚದ ಶಿಕ್ಷಣ ಸಾಮಾಗ್ರಿಗಳ ತಯಾರಿಕೆ ಮೂಲಕ ವಿಜ್ಷಾನ ಸಂವಹನ ಕಾರ್ಯಾಗಾರ” ವನ್ನು ಉದ್ಘಾಟಿಸಿ ಮಾತನಾಡಿದರು.ವಿಜ್ಞಾನ ಶಿಕ್ಷಣಕ್ಕೆ ದುಬಾರಿ ಬೋಧನಾ ಸಾಮಾಗ್ರಿಗಳ ಆವಶ್ಯಕತೆಇಲ್ಲದೇ ಸ್ಥಳೀಯವಾಗಿ ದೊರಕುವ ವಸ್ತುಗಳಿಂದಲೇ ಶಿಕ್ಷಣ ಪರಿಕರಗಳನ್ನು ತಯಾರಿಸಿ ಪರಿಣಾಮಕಾರಿಯಾಗಿ ವಿಜ್ಞಾನವನ್ನು ಬೋಧಿಸಲು ಸಾಧ್ಯವಾಗುವುದು ವಿದ್ಯಾರ್ಥಿಗಳಿಗೆ ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವೆಂದುಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಮಖ್ಯ ಅತಿಥಿಗಳಾದ ರಾಣಿಚನ್ನಮ್ಮಾ ವಿಶ್ವವಿದ್ಯಾಲಯದ ಶೈಕ್ಷಣಿಕ ಪರಿಷತ್ತಿನ ಸದಸ್ಯ ಭರ್ಮಪ್ಪಾ ಗುಂಡುಕೇರಿ ಇವರು ವಿಜ್ಙಾನ ಬೋಧನಾ ಸಾಮಾಗ್ರಿಗಳ ಮೂಲಕ ಕಲಿಕೆಯು ಮಕ್ಕಳಲ್ಲಿ ಕುತೂಹಲ, ಸೃಜನಶೀಲತೆೆ, ಭಾಗವÀಹಿಸುವಿಕೆ ಮತ್ತು ಆಸಕ್ತಿ ಹೆಚ್ಚಿಸಲು ಸಹಾಯವಾಗುತ್ತದೆ. ಇದರಿಂದ ವಿಜ್ಞಾನ ವಿಷಯವು ಆಸಕ್ತಿದಾಯಕವಾಗುವುದರಿಂದ ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಾಗಲು ಕೂಡಕಾರಣವಾಗುತ್ತೆ. ಓರ್ವ ಶಿಕ್ಷಕ ಕೇವಲ ಒಳ್ಲೆಯ ಶಿಕ್ಷಕನಾಗುವುಷ್ಟೇ ಮುಖ್ಯವಲ್ಲಾ ಆತ ಪರಿಣಾಮಕಾರಿ ಶಿಕ್ಷಕನಾಗುವುದು ಇಂದಿನ ಆವಶ್ಯಕತೆಎಂದು ಹೇಳಿದರು. ಶಿಕ್ಷಕರ ಹಾಗೂ ಶಿಕ್ಷಣ ಪ್ರಶಿಕ್ಷಕರ ಉಪಯೋಗಕ್ಕಾಗಿ ಸೇವಕ ಸಂಸ್ಥೆಯು ಉತ್ತರ ಕರ್ನಾಟÀಕದ ಎಂಟು ಜಿಲ್ಲೆಗಳಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿರುವ ಇಂತಹ ಕಾರ್ಯಕ್ರಮಗಳ ಉಪಯೋಗವನ್ನು ಶಿಕ್ಷಣ ಪ್ರಶಿಕ್ಷಕರು ಸೂಕ್ತವಾಗಿ ಉಪಯೊಗಿಸಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಶ್ರೀ ರಾಜಶೇಖರ ಗಂಜ್ ಶಿಕ್ಷಕ ಒಳ್ಳೆಯ ಪಾಠಕ್ಕಿಂತ ಪರಿಣಾಮಕಾರಿ ಪಾಠ ಮಾಡುವಂತಿರಬೇಕು ಅಲ್ಲದೇ ಈಗಿನ ಪರಿಸರದಲ್ಲಿ ಶಿಕ್ಷಕ ಭೋಧಕನಾಗಿರದೆ ಫೆಸಿಲಿಟೇಟರ್‌ನಾಗಿರಬೇಕು. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರಿಗೆ ಮತ್ತು ಶಿಕ್ಷಣ ಪ್ರಶಿಕ್ಷಕರಿಗೆ ಸೇವೆಕ ಸಂಸ್ಥೆಯು ಹಮ್ಮಿಕೊಳ್ಳುವ ಇಂತಹ ಕಾರ್ಯಕ್ರಮಗಳು ಪರಿಣಾಮಕಾರಿಯಂದು ಶ್ಲಾಘಿಸಿದರು. ಮಖ್ಯ ತರಬೇತುದಾರರಾಗಿ ರಾಘವೇಂದ್ರ ಮಿಸಳೆ ಹಾಗೂ ಆರುಣ ಹೆಬ್ಬಳ್ಳಿ ಭಾಗವಹಿಸಿದರೆ ಕಾರ್ಯಾಗಾರದ ಭಾಗಾರ್ಥಿಗಳಾಗಿ ಅರವತ್ತು ವಿಜ್ಞಾನ ಶಿಕ್ಷಣ ಪ್ರಶಿಕ್ಷಕರು ಭಾಗವಹಿಸಿದ್ದರು.
Gadi Kannadiga > Local News > ಬದಲಾದ ಶಿಕ್ಷಣ ಕ್ಷೇತ್ರದಲ್ಲಿಗುಣಮಟ್ಟ ಹಾಗೂ ಮೌಲಯುತ ಶಿಕ್ಷಣಕ್ಕೆಒತ್ತು ನೀಡುವುದು ಅಗತ್ಯ: ಆನಂದ ಲೋಬೊ
ಬದಲಾದ ಶಿಕ್ಷಣ ಕ್ಷೇತ್ರದಲ್ಲಿಗುಣಮಟ್ಟ ಹಾಗೂ ಮೌಲಯುತ ಶಿಕ್ಷಣಕ್ಕೆಒತ್ತು ನೀಡುವುದು ಅಗತ್ಯ: ಆನಂದ ಲೋಬೊ
Suresh22/02/2023
posted on
