This is the title of the web page
This is the title of the web page

Please assign a menu to the primary menu location under menu

Local News

ಕನ್ನಡ ಭಾಷೆಯ ಬಳಕೆಗೆ ಹೆಚ್ಚಿನ ಒತ್ತು ನೀಡಿ :ಬಾಳೆಕುಂದ್ರಿ


ಬೆಳಗಾವಿ: “ಆಧುನಿಕ ಜಗತ್ತಿನಲ್ಲಿ ಮಹಿಳೆ ಪುರುಷರಿಗೆ ಸರಿ ಸಮನಾಗಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾಳೆ. ತೊಟ್ಟಿಲು ತೂಗುವ ಕೈ ಇಂದು ಜಗವನ್ನೇ ತೂಗುತ್ತಿದೆ. ಶಿಕ್ಷಣ, ವೈದ್ಯಕೀಯ, ನ್ಯಾಯಾಂಗ, ಸಾಮಾಜಿಕ, ವ್ಯಾಪಾರ ಕ್ಷೇತ್ರಗಳನ್ನೊಳಗೊಂಡು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾಳೆ. ರಾಜಕೀಯ ಕ್ಷೇತ್ರದಲ್ಲೂ ಮಹಿಳೆ ಮತ್ತಷ್ಟು ಮುಂದೆ ಬರುವಂತಾಗಲಿ” ಎಂದು ಖ್ಯಾತ ವೈದ್ಯೆ ವಿಜಯಲಕ್ಷ್ಮಿ ಬಾಳೆಕುಂದ್ರಿ ಅಭಿಪ್ರಾಯ ಪಟ್ಟರು.
ಬೆಂಗಳೂರಿನ ಗಾಂಧಿ ಭವನದಲ್ಲಿ ಸಿರಿಗನ್ನಡ ಮಹಿಳಾ ವೇದಿಕೆಯ ವತಿಯಿಂದ ರಾಜ್ಯಮಟ್ಟದ ಪ್ರಥಮ ಮಹಿಳಾ ಸಮಾವೇಶ ಹಾಗೂ ‘ಸ್ತ್ರೀ ಸಂಭ್ರಮ-೨೦೨೨’ ಉದ್ಘಾಟಿಸಿ ಮಾತನಾಡಿದ ಅವರು, ” ನಮ್ಮ ತಾಯಿಭಾಷೆ ಕನ್ನಡ. ಎರಡು ಸಾವಿರಕ್ಕಿಂತಲೂ ಹೆಚ್ಚಿನ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಇಂದಿನ ಯುವ ಪೀಳಿಗೆಯ ಬಾಯಲ್ಲಿ ಸೊರಗುತ್ತಿದೆ. ಹೀಗಾಗಿ ಕನ್ನಡ ಪ್ರಜ್ಞೆ ಹಾಗೂ ಕನ್ನಡದ ಸ್ಪಷ್ಟ ಭಾಷೆಯ ಬಳಕೆಗೆ ಹೆಚ್ಚಿನ ಒತ್ತು ಕೊಡಬೇಕಿದೆ”ಎಂದರು.
ಸಮಾವೇಶದ ಸರ್ವಾಧ್ಯಕ್ಷರಾದ ಮಾಜಿ ಸಚಿವೆ, ಸಾಹಿತಿ ಡಾ. ಬಿ. ಟಿ. ಲಲಿತಾನಾಯಕ ಅವರು ಮಾತನಾಡಿ, ” ನಮ್ಮ ದೇಶದಲ್ಲಿ ಮಹಿಳೆಯನ್ನು ಭಾಷಣಗಳಲ್ಲಿ ದೇವರಿಗೆ ಹೋಲಿಸಿ, ಸ್ತ್ರೀ ಸ್ವಾತಂತ್ರತೆಗೆ ಅರ್ಹಳಲ್ಲ ಎಂಬ ನಂಬಿಕೆಯಿಂದ ಅವಳನ್ನು ಶೂದ್ರಳಂತೆ ಕಾಣಲಾಗಿದೆ. ಆಧುನಿಕ ಭಾರತದ ಇತಿಹಾಸದಲ್ಲಿ ಸಾವಿತ್ರಿಬಾಯಿ ಫುಲೆ ದಂಪತಿಗಳ ಪ್ರೇರಣೆಯಿಂದ ಅಕ್ಷರ ಕಲಿತು ಜ್ಞಾನವಂತಳಾಗಿದ್ದಾಳೆ. ಅಡುಗೆ ಮನೆಗೆ ಸೀಮಿತವಾಗಿಸಿದ್ದ ಅವಳಿಂದು ಗಗನ ಯಾತ್ರೆ ಮಾಡುವ ಹಂತ ತಲುಪಿದ್ದಾಳೆ” ಎಂದು ಹೇಳಿದರು.
ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯಾಧ್ಯಕ್ಷೆ ರಜನಿ ಜೀರಗ್ಯಾಳರವರು ಮಾತನಾಡಿ, ” ಕನ್ನಡಕ್ಕಾಗಿ ನಾವೆಲ್ಲ ಹೊರಾಡುವುದಕ್ಕಿಂತ ತಾಯಿ ಮೊದಲ ಗುರು. ಹೀಗಾಗಿ ನಮ್ಮ ಮಹಿಳೆಯರು ಮಕ್ಕಳಿಗೆ ಕನ್ನಡ ನುಡಿಯನ್ನು ಕಲಿಸಿ ಕನ್ನಡ ಭಾಷೆ ಮನೆ ಮನೆಗಳಲ್ಲೂ ಮನಮನದಲ್ಲೂ ಸ್ಥಿರ ವಾಗುವಂತೆ ನೋಡಿಕೊಳ್ಳಬೇಕು” ಎಂದು ನುಡಿದರು.
ಕಾರ್ಯಕ್ರಮದಲ್ಲಿ ೨೦೨೨ ನೇ ಸಾಲಿನ ಸಾಹಿತ್ಯ ಕ್ಷೇತ್ರದಲ್ಲಿ ವರ್ಷದ ಸಿರಿಗನ್ನಡತಿ ಪ್ರಶಸ್ತಿಯನ್ನು ಶ್ರೀಮತಿ ರಾಧಾಭಾಯಿ ಶಿರಾಲಿ, ರಂಗಭೂಮಿ ಕ್ಷೇತ್ರಕ್ಕೆ ಶ್ರೀಮತಿ ಮಾಲತಿ ಮೈಸೂರು, ಪತ್ರಿಕಾ ಮಾಧ್ಯಮ ಕ್ಷೇತ್ರದಲ್ಲಿ ಶ್ರೀಮತಿ ಎ. ಬಿ. ರುದ್ರಮ್ಮ ಗಾಯನ ಕ್ಷೇತ್ರದಲ್ಲಿ ಶ್ರೀಮತಿ ಅನುಪಮಾ ಸುಲಾಖೆ, ಸಾಮಾಜಿಕ ಕಾರ್ಯದಲ್ಲಿ ಶ್ರೀಮತಿ ಜಯಶ್ರೀ ಚುನಮರಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಮಹಿಳಾ ಸಾಧಕರಾದ ರಾಧಾಭಾಯಿ ಶಿರಾಲಿ, ಮಾಲತಿ ಮೈಸೂರು, ವಿಜಯಾ ಶೆಟ್ಟಿ, ಎ. ಬಿ. ರುದ್ರಮ್ಮ, ಶಾಂತಾ ಜಯಾನಂದ, ಶುಭಾ ವಿಷ್ಣು ಸಭಾಹಿತ, ಮಾಲಾ ಚಲುವನಹಳ್ಳಿ, ಅನುಪಮಾ ಸುಲಾಖೆ, ಜ್ಯೋತಿ ಹೆಬ್ಬಾರ, ಶೈಲಾ ಕೊಕ್ಕರಿ, ರಾಜಶ್ರೀ ಧಳಂಗೆ, ವೀಣಾ ಸುಧಿಂದ್ರ, ಜಯಶ್ರೀ ಮನಮಲಿ, ಗೀತಾ ಸಾಲಿಮಠ,ಜ್ಯೋತಿ ಕುಲಕರ್ಣಿ, ರೂಪಾ ಪಾಟೀಲ, ಸುವರ್ಣಾ ಬಂಡಿ, ಗೀತಾ ಮಂಜುನಾಥ, ಶ್ವೇತಾ ಮೋಹನ, ಉಮೇಶ ಸಿ. ಎನ್., ಸರ್ವಮಂಗಲಾ, ಬಾಲ ಪ್ರತಿಭೆಗಳಾದ ಪೂರ್ವಿ ಶೆಟ್ಟಿ, ನಿತ್ಯಾ ಹುಣಸಿಗಿಡದ, ಪ್ರಣತಿ ಪಿ.,ಚೈತನ್ಯ ಟಿ. ಎನ್. ಯಶಸ್ವಿನಿ, ಮಧುರಾ ಎ., ದಿಗಂತ ಪ್ರಸಾದ ಅವರಿಗೆ ವಿತರಿಸಲಾಯಿತು.
ಸಿರಿಗನ್ನಡ ಮಹಿಳಾ ಜಯಾ ಚುನಮರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಲಾ ಚೆಲುವಿನಹಳ್ಳಿ ಸ್ವಾಗತಿಸಿದರು. ಜ್ಯೋತಿ ಕುಲಕರ್ಣಿ ಕಾರ್ಯಕ್ರಮ ನಿರ್ವಹಿಸಿದರು. ಸಾವಿತ್ರಿ ಖೆಮಲಾಪೂರ ವಂದಿಸಿದರು.


Gadi Kannadiga

Leave a Reply