This is the title of the web page
This is the title of the web page

Please assign a menu to the primary menu location under menu

State

ಕೃಷಿ ರಂಗದಲ್ಲಿ ತಾಂತ್ರಿಕತೆ, ಜೈವಿಕ ಪದ್ಧತಿಗೆ ಒತ್ತು ನೀಡಬೇಕು ವಿಧ್ಯಾರ್ಥಿಗಳು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜ ಸುಧಾರಣೆಗೆ ಮುಂದಾಗಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ


ಗದಗ ಮಾ.೧೦: ಕೃಷಿ ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು ಇಂದಿನ ಕೃಷಿ ಕ್ಷೇತ್ರದಲ್ಲಿ ಬದಲಾವಣೆಯಾಗಬೇಕಾಗಿದ್ದು ಕೃಷಿ ರಂಗದಲ್ಲಿಯೂ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುವದರ ಜೊತೆಗೆ ಜೈವಿಕ ಕೃಷಿ ಪದ್ಧತಿಗೆ ಒತ್ತು ನೀಡಬೇಕು ಎಂದು ರಾಜ್ಯಪಾಲರಾದ ಥಾವರ ಚಂದ್ ಗೆಹ್ಲೊಟ್ ನುಡಿದರು.
ನಾಗಾವಿಯ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಹಾಗೂ ವಿಧ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರಧಾನ ಮಾಡಿ ಅವರು ಮಾತನಾಡಿದರು. ಈ ವಿಶ್ವವಿದ್ಯಾಲಯದಲ್ಲಿ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ಶಿಕ್ಷಣ ನೀಡಲಾಗುತ್ತಿದ್ದು ಇಲ್ಲಿ ನೀಡಲಾಗುತ್ತಿರುವ ಶಿಕ್ಷಣವನ್ನು ದೇಶದ ಬೇರಾವ ವಿಶ್ವವಿದ್ಯಾಲಯದಲ್ಲಿ ನೀಡಲಾಗುತ್ತಿಲ್ಲ ಎಂದರು. ವಿಧ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಕೃಷಿ ಹಾಗೂ ಗ್ರಾಮಗಳ ಅಭಿವೃದ್ಧಿಗಾಗಿ ನೀಡುವಂತಹ ಶಿಕ್ಷಣದೊಂದಿಗೆ ಗಾಂಧೀಜಿ ಅವರು ಕಂಡಂತಹ ಗ್ರಾಮ ಸ್ವರಾಜ್ ಕನಸನ್ನು ನನಸಾಗಿಸಲು ಮುಂದಾಗುವಂತೆ ತಿಳಿಸಿದರು.
ವಿಧ್ಯಾರ್ಥಿಗಳು ಈ ವಿಶ್ವವಿದ್ಯಾಲಯದಿಂದ ಪಡೆದಂತಹ ಶಿಕ್ಷಣದಿಂದ ಜೀವನದಲ್ಲಿ ಮುನ್ನಡೆಯುವದರೊಂದಿಗೆ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಗಾಗಿ ಸಂಕಲ್ಪ ತೊಡುವಂತೆ ತಿಳಿಸಿದರು. ಇಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೃಷಿ ಕ್ಷೇತ್ರಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು ಗ್ರಾಮೀಣ ಭಾಗದಲ್ಲಿ ಇವುಗಳ ಸದುಪಯೋಗಯಾಗುವಂತೆ ಪ್ರೇರೆಪಿಸಲು ಕರೇ ನೀಡಿದರು. ನವಭಾರತ ನಿರ್ಮಾಣದಲ್ಲಿ ಹೊಸ ಶಿಕ್ಷಣ ನೀತಿ ಮಹತ್ತರ ಪಾತ್ರ ವಹಿಸುವದು. ಅಲ್ಲದೇ ಮಾತೃ ಭಾಷೆಗೆ ಪ್ರೋತ್ಸಾಹ ನೀಡುವದರ ಮೂಲಕ ವಿಕಾಸ ಹೊಂದಿದ ದೇಶಗಳ ಸಾಲಿನಲ್ಲಿ ಭಾರತವು ಬರುವಂತೆ ಆಗಬೇಕು.
ಮನುಷ್ಯನ ಜೀವನ ಪ್ರಕೃತಿ ಮೇಲೆ ಅವಲಂಭಿತವಾಗಿದೆ. ಪರಿಸರ ಸಂರಕ್ಷಣೆ ಹಾಗೂ ಸಂವರ್ಧನೆಗೆ ಹೆಚ್ಚಿನ ಒತ್ತು ನೀಡುವದರ ಮೂಲಕ ಭಾರತವನ್ನು ಸ್ವಸ್ಥö್ಯ ಭಾರತವನ್ನಾಗಿಸಬೇಕು. ವಿಧ್ಯಾರ್ಥಿಗಳು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮಾಜ ಸುಧಾರಣೆಗೆ ಮುಂದಾಗಿ ತಮ್ಮ ಚಿಂತನೆಗಳೊಂದಿಗೆ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮುಂದಾಗುವಂತೆ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ ಕರೇ ನೀಡಿದರು.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷರು ಹಾಗೂ ಇಂಫಾಲ್ ಕೇಂದ್ರಿಯ ಕೃಷಿ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ.ಸುಬ್ಬಣ್ಣ.ಅಯ್ಯಪನ್ ಅವರು ಘಟಿಕೋತ್ಸವದ ಭಾಷಣ ಮಾಡುತ್ತಾ ಮಾತನಾಡಿ ರೈತ ಸಮುದಾಯ, ಅನ್ನದಾತರು ತಮ್ಮ ಸಮರ್ಪಣೆ ಮತ್ತು ಕಠಿಣ ಪರಿಶ್ರಮದ ಮೂಲಕ ದೇಶದ ೧೪೦ ಕೋಟಿ ಜನರ ಆಹಾರ ಭದ್ರತೆಯನ್ನು ಖಚಿತಪಡಿಸುವದರ ಜೊತೆಗೆ ಸಧೃಢ ಹಾಗೂ ಶಕ್ತಿಯುತ ರಾಷ್ಟ್ರವನ್ನು ರೂಪಿಸುತ್ತಿದ್ದಾರೆ ಎಂದರು. ಇಂದು ಮೌಲ್ಯ ವರ್ಧಿತ ಉತ್ಪನ್ನಗಳ ತಯಾರಿಕೆ, ಕೃಷಿ ಪದ್ಧತಿಗಳ ವೈವಿದ್ಯಕರಣದ ಜೊತೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಕೃಷಿಯ ಬಗೆಗಿನ ಋಣಾತ್ಮಕ ಮಿಥ್ಯೆಗಳನ್ನು ನಿರ್ಲಕ್ಷಿಸಬೇಕಾಗಿದ್ದು ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣದ ಮೂಲಕ ತರಬೇತಿ ಪಡೆದ ಸಿಬ್ಬಂದಿಗಳ ಉದ್ಯೋಗವಕಾಶವನ್ನು ಹೆಚ್ಚಿಸಲು ಗಮನ ಹರಿಸಬೇಕಾಗಿದೆ. ಯುವ ರೈತರಿಗೆ ತಂತ್ರಜ್ಞಾನ, ಕೃಷಿಯಲ್ಲಿ ಸಂಯೋಜಿತ ಮತ್ತು ಬಹುಕ್ರಿಯಾತ್ಮಕ ವ್ಯಾಪಾರ ವಿಧಾನಗಳ ಕುರಿತು ಮನವರಿಕೆ ಮಾಡಬೇಕಾಗಿದೆ ಎಂದರು.
ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವವಿದ್ಯಾಲಯವು ರಾಜ್ಯದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿ ಒಂದು ವಿಶಿಷ್ಟ ಶಿಕ್ಷಣ ಸಂಸ್ಥೆಯಾಗಿದೆ. ಭಾರತ ಹಳ್ಳಿಗಳ ನಾಡಾಗಿದ್ದು ದೇಶದ ೬೦% ಕ್ಕಿಂತ ಹೆಚ್ಚು ಜನರು ಗ್ರಾಮೀಣ ವಾಸಿಗಳಾಗಿದ್ದು ಸಮಾಜದ ಜೀವನಾಡಿಯಾಗಿದ್ದಾರೆ. ಈ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಅವಿಷ್ಕಾರಗಳ ಮೂಲಕ ಗ್ರಾಮೀಣ ಜನರ ಸಮಸ್ಯೆಗಳನ್ನು ಪರಿಸಹರಿಸುವ ವಿಧಾನಗಳು ಮತ್ತು ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಯುವಜನರ ಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದೆ. ಈ ವಿಶ್ವವಿದ್ಯಾಲಯದಿಂದ ಪಡೆದಂತಹ ತಾಂತ್ರಿಕ ಜ್ಞಾನದೊಂದಿಗೆ ಯಶಸ್ವಿ ಉದ್ಯಮಿ, ಉದ್ಯೋಗಾಂಕ್ಷಿ ಬದಲಿಗೆ ಉದ್ಯೋಗ ಒದಗಿಸುವವರಾಗುವಂತೆ ಕರೇ ನೀಡಿದರು. ಉತ್ತಮ ಶಿಕ್ಷಣ ಮತ್ತು ಜ್ಞಾನ, ಕೌಶಲ್ಯಗಳು, ನಾವಿನ್ಯತೆ ಮತ್ತು ಸೇವಾ ಮನೋಭಾವದೊಂದಿಗೆ ಉತ್ತಮ ಸಾಧನೆ ಮಾಡಲು ಮುಂದಾಗಬೇಕು.
ಜೀವನಪರ್ಯಂತ ಜ್ಞಾನದ ಅನ್ವೇಷಣೆಯಲ್ಲಿ ಪ್ರಾಮಾಣಿಕವಾಗಿ ಹಾಗೂ ಕಟ್ಟುನಿಟ್ಟಾಗಿ ಸಮರ್ಪಣಾ ಭಾವದಿಂದ ಮಾನವೀಯ ಸೇವೆಯನ್ನು ಮಾಡಬೇಕು. ಸಾಂಪ್ರದಾಯಿಕ ಬುದ್ದಿವಂತಿಕೆಯೊಂದಿಗೆ ಆಧುನಿಕ ಜ್ಞಾನವನ್ನು ಸೇರಿಸುವ ಮೂಲಕ ಈ ವಿಶ್ವವಿದ್ಯಾಲಯಕ್ಕೆ ಕೀರ್ತಿ ತರುವಂತಹ ಕಾರ್ಯ ಮಾಡಲು ಮುಂದಾಗುವಂತೆ ವಿಧ್ಯಾರ್ಥಿಗಳಿಗೆ ಡಾ.ಸುಬ್ಬಣ್ಣ.ಅಯ್ಯಪನ್ ಕರೇ ನೀಡಿದರು.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯದ ಕುಲಪತಿ ಪ್ರೋ. ವಿಷ್ಣುಕಾಂತ.ಎಸ್.ಚಟಪಲ್ಲಿ ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಪ್ರೊ. ಬಸವರಾಜ ಲಕ್ಕಣ್ಣವರ, ವಿಶ್ವವಿದ್ಯಾಲಯದ ಪರಿಷತ ಹಾಗೂ ಶೈಕ್ಷಣಿಕ ಸದಸ್ಯರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಸೇರಿದಂತೆ ಗಣ್ಯರು, ವಿಧ್ಯಾರ್ಥಿಗಳು, ವಿಶ್ವ ವಿದ್ಯಾಲಯ ಭೋಧಕ ಮತ್ತು ಭೋಧಕೇತರ ಸಿಬ್ಬಂದಿಗಳು ಹಾಜರಿದ್ದರು. ಕಾರ್ಯಕ್ರಮಕ್ಕೂ ಮುನ್ನ ರಾಜ್ಯಪಾಲರಾದ ಥಾವರ ಚಂದ್ ಗೆಹ್ಲೊಟ ಅವರು ವಿಶ್ವ ವಿದ್ಯಾಲಯದ ಆವರಣದಲ್ಲಿರುವ ಸಬರಮತಿ ಪ್ರತಿಕೃತಿ ಆಶ್ರಮಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ: ಗದಗ ತಾಲೂಕಿನ ನಾಗಾವಿಯಲ್ಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕೌಶಲ್ಯ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವ ಸಮಾರಂಭದಲ್ಲಿ ಕರ್ನಾಟಕ ರಾಜ್ಯಪಾಲರಾದ ಥಾವರ ಚಂದ್ ಗೆಹ್ಲೋಟ ಅವರು ಬೆಳಗಾವಿ ಜಿಲ್ಲೆಯ ಕಟ್ಟಣಭಾವಿ ಗ್ರಾಮದ ಗಾಂಧೀವಾದಿ ಮತ್ತು ಹಿರಿಯ ಸಮಾಜಿಕ ಕಾರ್ಯಕರ್ತರಾದ ಶಿವಾಜಿ ಕಾಗಣಿಕರ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದರು.
ಚಿನ್ನದ ಪದಕ ಪ್ರಧಾನ: ಗದಗ ತಾಲೂಕಿನ ನಾಗಾವಿಯಲ್ಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕೌಶಲ್ಯ ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವ ಸಮಾರಂಭದಲ್ಲಿ ಕರ್ನಾಟಕ ರಾಜ್ಯಪಾಲರಾದ ಥಾವರ ಚಂದ್ ಗೆಹ್ಲೋಟ ಅವರು ವಿವಿಧ ಸ್ನಾತ್ತಕೋತ್ತರ ವಿಭಾಗಗಳಲ್ಲಿ ಉತ್ತಮ ಅಂಕ ಗಳಿಸಿದ ಪ್ರೀತಂ.ಸಿ.ಜಿ., ದಿವ್ಯ ಬಿ.ಯು., ಚಿದಾನಂದ ಆಶ್ಯಾಳ, ವೀಣಾ ಭಜಂತ್ರಿ, ಕೆ.ಆರ್.ಮೋಹನ, ಎಸ್. ತೇಜಸ, ಪ್ರಿಯಾ ನೀರಲಕಟ್ಟಿ, ಶೋಭಾ ಪೂಜೆರ, ಪೂಜಾ ಕಣವಿ, ಅಫ್ರಿನಸನಾ ಹಂಪಾಪಟ್ಟಣ ಅವರುಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

 


Gadi Kannadiga

Leave a Reply