This is the title of the web page
This is the title of the web page

Please assign a menu to the primary menu location under menu

Local News

ಸಾಮೂಹಿಕ ವಿವಾಹಗಳಿಗೆ ಪ್ರೋತ್ಸಾಹ ನೀಡಿ


ಯಮಕನಮರಡಿ:- ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಇಂದು ಸಾಮೂಹಿಕ ವಿವಾಹಗಳನ್ನು ಮಾಡುವುದು ಅವಶ್ಯವಾಗಿದೆ ಎಂದು ತೋಲಗಿ-ಚಿಕ್ಕಲದಿ£್ನಯ ಶ್ರೀ ಅದೃಶ್ಯಾನಂದ ಮಹಾಸ್ವಾಮಿಗಳು ಹೇಳಿದರು.
ಅವರು ಗುರುವಾರ ದಿ. ೩೦ ರಂದು ಶಹಾಬಂದರ ಗ್ರಾಮದ ಶ್ರೀ ಸದ್ಗುರು ಬಾಳಯ್ಯಜ್ಜನವರ ಭಕ್ತಿಮಠದ ೩೨ನೇ ಯಾತ್ರಾ ಮಹೋತ್ಸವ ಮತ್ತು ಸಾಮೂಹಿಕ ವಿವಾಹಗಳ ಕಾರ್ಯಕ್ರಮದ ಸಾ£ಧ್ಯ ವಹಿಸಿ ಮಾತನಾಡಿದರು. ಇಂದು ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಜೀವನ ಸಾಗಿರುವುದು ಕಷ್ಟಕರವಾಗಿದೆ. ದುಂದುವೆಚ್ಚ ಮಾಡಿ ಮದುವೆಗಳನ್ನು ಮಾಡಲು ತಪ್ಪಿಸಲು ಸಾಮೂಹಿಕ ವಿವಾಹಗಳನ್ನು ಮಾಡಿ ಬಡಜನರಿಗೆ ಸಹಾಯ ಮಾಡಬೇಕು ಎಂದು ಹೇಳಿ ಈ ಮಠದಲ್ಲಿ ಕಳೆದ ೩೨ ವರ್ಷಗಳಿಂದ ಶರಣಮೇಳ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆ ಮಾಡುತ್ತಾ ಬರಲಾಗಿದೆ ಎಂದು ಹೇಳಿದರು.
ಬಾಳಯ್ಯಜ್ಜನ ಭಕ್ತಿಮಠದ ಶ್ರೀ ಸಂಕಪ್ಪಜ್ಜನವರು ಸಾ£ಧ್ಯ ವಹಿಸಿ ಆರ್ಶಿವದಿಸಿದರು. ಶರಣರಾದ ಸದಾಶಿವ ಹಗೆದಾಳ, ಮಾನವ ಹಕ್ಕುಗಳ ರಾಷ್ಟ್ರೀಯ ಅಧ್ಯಕ್ಷರಾದ ಅಖಿಲಾ ಪಠಾಣ, ಭೂತರಾಮಹಟ್ಟಿಯ ಶ್ರೀ ಸಿದ್ದಕೃಷ್ಣಾ ಗುಡಿಯಾ, ವಿಠ್ಠಲ ಸ್ವಾಮಿಗಳು, ಹೊನ್ನಪ್ಪ ದೊಡ್ಡಮ£, ಯಲ್ಲಪ್ಪ ದನದವರ, ಮತ್ತು ಗ್ರಾಮಸ್ಥರು ಭಕ್ತರು ಇದ್ದರು. ಇದೇ ಸಂದರ್ಭದಲ್ಲಿ ಮೂಕರಾದ ಖಾನಾಪೂರ ತಾಲೂಕಿನ ನೇಸ್ ಗ್ರಾಮದ ಮಲ್ಲೇಶÀ ಉದಿ, ಭಮನಟ್ಟಿಯ ಯಲ್ಲವ್ವಾ ಶಿವಪ್ಪಾ ಮುತ್ಯಾನಟ್ಟಿ ಇವರು ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡು ಹಸೆಮನೆ ಏರಿದರು.


Leave a Reply