ಬೆಳಗಾವಿ, ಮಾ.೦೬ : ಬೆಳಗಾವಿ ಜಿಲ್ಲೆಯಾದ್ಯಂತ ಮಾರ್ಚ.೯ ರಿಂದ ಮಾ.೨೯ ೨೦೨೩ ರ ವರೆಗೆ ದ್ವ್ವಿತೀಯ ಪಿ.ಯು.ಸಿ ವಾರ್ಷಿಕ ಪರಿಕ್ಷೆಗಳು ನಡೆಯಲಿದ್ದು, ಯಾವುದೇ ಲೋಪದೋಷಗಳಾಗದಂತೆ ಹಾಗೂ ಯಾವುದೇ ರಿತೀಯ ಅವ್ಯವಹಾರಗಳು ಜರುಗದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ನಿತೇಶ್ ಪಾಟೀಲ್ ಅವರು ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿರುತ್ತಾರೆ. ಕಾನೂನು ಭಂಗ ಉಂಟು ಮಾಡುವ ಉದ್ದೇಶದಿಂದ ೫ ಅಥವಾ ೫ ಕ್ಕಿಂತ ಹೆಚ್ಚು ಜನರು ಗುಂಪು ಸೇರಿ ತಿರುಗಾಡುವುದನ್ನು ನಿಷೇಧಿಸಿದೆ. ಪರೀಕ್ಷೆಯಲ್ಲಿ ಭಾಗವಹಿಸುತ್ತಿರುವ ಮಕ್ಕಳಿಗೆ ನಕಲು ಮಾಡಲು ಸಹಾಯ ಮಾಡುವ ಉದ್ದೇಶದಿಂದ ಪರಿಕ್ಷಾ ಕೇಂದ್ರದ ಹತ್ತಿರ ಬರುವುದನ್ನು ನಿಷೇಧಿಸಲಾಗಿದೆ.
ಸಾರ್ವಜನಿಕರ ಸಭೆ, ಮೆರವಣಿಗೆ ಮಾಡುವುದನ್ನು (ಶವ ಸಂಸ್ಕಾರ, ಮದುವೆ ಹಾಗೂ ಮೆರವಣಿಗೆಗಳನ್ನು ಹೊರತುಪಡಿಸಿ) ಆಯುಧ ಮಾರಕಾಸ್ತ್ರ ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ತಿರುಗಾಡುವಂತಿಲ್ಲ. ಯಾವುದೇ ರಿತೀಯ ಪಟಾಕಿ ಸಿಡಿಮದ್ದು ಸಿಡಿಸುವಂತಿಲ್ಲ. ಸರ್ಕಾರಿ ಬಸ್ಸು ಹಾಗೂ ಇತರೇ ವಾಹನಗಳಿಗೆ ಅಡೆತಡೆ ಮಾಡುವಂತಿಲ್ಲ.ಸದರಿ ಪರಿಕ್ಷಾ ಕೇಂದ್ರಗಳ ೨೦೦ ಮೀಟರ್ ಒಳಗಿನ ಝೆರಾಕ್ಸ್ ಅಂಗಡಿಗಳನ್ನು ಬಂದ್ ಇಡತಕ್ಕದ್ದು. ವಿದ್ಯಾರ್ಥಿಗಳು, ಶಾಲಾ ಕಾಲೇಜು ಸಿಬ್ಬಂದಿಗಳು ಸರ್ಕಾರದಿಂದ ನೇಮಿಸಿದ ಅಧಿಕಾರಿಗಳು ಹಾಗೂ ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಿದ ಆರಕ್ಷಕ ಸಿಬ್ಬಂದಿಗಳನ್ನು ಹೊರತುಪಡಿಸಿ ಪ್ರವೇಶವನ್ನು ನಿರ್ಭಂದಿಸಲಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಪರಿಕ್ಷಾ ಕೇಂದ್ರಗಳ ಸುತ್ತಮುತ್ತ ಸಿ.ಆರ್.ಪಿ.ಸಿ ೧೯೭೩ ಕಲಂ ೧೪೪ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ನಿತೇಶ್ ಪಾಟೀಲ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
Gadi Kannadiga > State > ದ್ವ್ವಿತೀಯ ಪಿ.ಯು.ಸಿ ಪರಿಕ್ಷೆ: ನಿಷೇಧಾಜ್ಞೆ ಜಾರಿ
ದ್ವ್ವಿತೀಯ ಪಿ.ಯು.ಸಿ ಪರಿಕ್ಷೆ: ನಿಷೇಧಾಜ್ಞೆ ಜಾರಿ
Suresh13/03/2023
posted on