This is the title of the web page
This is the title of the web page

Please assign a menu to the primary menu location under menu

State

ನಮ್ಮ ಕ್ಲಿನಿಕ್‌ಗಳ ಗುತ್ತಿಗೆ ಆಧಾರದ ವಿವಿಧ ಹುದ್ದೆ: ಸೆಪ್ಟೆಂಬರ್ ೦೨ರಿಂದ ದಾಖಲಾತಿ ಪರಿಶೀಲನೆ


ಕೊಪ್ಪಳ ಆಗಸ್ಟ್ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದಿಂದ ಎನ್.ಹೆಚ್.ಎಂ ಅಡಿಯಲ್ಲಿ ಪಿಎಂ ಎ.ಬಿ.ಹೆಚ್.ಐ.ಎಂ ಕಾರ್ಯಕ್ರಮದ ನಮ್ಮ ಕ್ಲಿನಿಕ್‌ಗಳಲ್ಲಿ ಸೃಜನೆಗೊಂಡಿರುವ ಗುತ್ತಿಗೆ ಆಧಾರದ ಮೇಲೆ ವೈದ್ಯಾಧಿಕಾರಿಗಳು, ಶುಶ್ರೂಷಕಿಯರು ಹಾಗೂ ಪ್ರಯೋಗಶಾಲಾ ತಂತ್ರಜ್ಞರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಮೂಲದಾಖಲಾತಿ ಪರಿಶೀಲನೆಯನ್ನು ಸೆಪ್ಟೆಂಬರ್ ೦೨ರಿಂದ ೦೮ರವರೆಗೆ ಹಮ್ಮಿಕೊಳ್ಳಲಾಗಿದೆ.
ನಮ್ಮ ಕ್ಲಿನಿಕ್‌ಗಳಲ್ಲಿ ಸೃಜನೆಗೊಂಡಿರುವ ಗುತ್ತಿಗೆ ಆಧಾರದ ಮೇಲೆ ವೈದ್ಯಾಧಿಕಾರಿಗಳು-೦೪, ಶುಶ್ರೂಷಕಿಯರು-೦೪ ಹಾಗೂ ಪ್ರಯೋಗಶಾಲಾ ತಂತ್ರಜ್ಞರು-೦೪ ಹುದ್ದೆಗಳಿಗೆ ಮೆರಿಟ್ ಕಮ್ ರೋಸ್ಟರ್ ಹಾಗೂ ೩೭೧ಜೆ ಆಧಾರದಡಿಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಆಗಸ್ಟ್ ೦೪ರಿಂದ ಆಗಸ್ಟ್ ೧೮ರ ವರೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಅಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅನುಮೋದನೆ ಪ್ರಕಾರ ಕೊಪ್ಪಳ ಜಿಲ್ಲಾ ವೆಬ್‌ಸೈಟ್ ತಿತಿತಿ.ಞoಠಿಠಿಚಿಟ.ಟಿiಛಿ.iಟಿ ನಲ್ಲಿ ಪ್ರಕಟಿಸಿದ ಪಟ್ಟಿಯಂತೆ ಅಭ್ಯರ್ಥಿಗಳ ಮೂಲ ದಾಖಲಾತಿಗಳನ್ನು ಪರಿಶೀಲನೆ ಮಾಡಲು ದಿನಾಂಕ ಮತ್ತು ಸ್ಥಳವನ್ನು ನಿಗದಿಪಡಿಸಲಾಗಿದೆ.
ಸೆಪ್ಟೆಂಬರ್ ೦೨, ೦೪, ೦೫, ೦೬, ೦೭ ಮತ್ತು ೦೮ರ ದಿನಾಂಕದಂದು ಪಟ್ಟಿಯಲ್ಲಿ ನಮೂದಿಸಿದಂತೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಹಾಜರಾಗಬೇಕು. ದಾಖಲಾತಿ ಪರಿಶೀಲನೆಗೆ ಹಾಜರಾಗುವ ಅಭ್ಯರ್ಥಿಗಳು ತಾವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಅಟ್ಯಾಚ್ ಮಾಡಿದ ದಾಖಲಾತಿಗಳ ಸ್ವಯಂ ದೃಢೀಕೃತ ಒಂದು ಪ್ರತಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಕೊಪ್ಪಳ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಜಿಲ್ಲಾ ವೆಬ್‌ಸೈಟ್‌ನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಘದ ಉಪಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply