ಲಕ್ಷೆ÷್ಮÃಶ್ವರ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಳ್ಳುವ ಎಲ್ಲ ಕಾಮಗಾರಿಗಳ ನಾಮಫಲಕದಲ್ಲಿ ಕಡ್ಡಾಯವಾಗಿ ಓಂಬಡ್ಸಮನ್ ಮತ್ತು ಆಯುಕ್ತಾಲಯದ ಉಚಿತ ಸಹಾಯವಾಣಿ ದಾಖಲಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ£ರ್ವಾಹಕ ಅಧಿಕಾರಿಯವರಾದ ಡಾ. ಸುಶೀಲಾ ಬಿ. ಅವರು ಸೂಚನೆ £Ãಡಿದರು.
ತಾಲೂಕಿನ ಅಡರಕಟ್ಟಿ, ಪು.ಬಡ್ನಿ ಮತ್ತು ಬಟ್ಟೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿಯ ಉದ್ಯೋಗ ಖಾತ್ರಿ ಯೋಜನೆಯಡಿ ೨೦೨೨-೨೩ನೇ ಸಾಲಿನಲ್ಲಿ ಸೃಜನೆಯಾಗಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಮಾಡಿ ಅವರು ಮಾತನಾಡಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಂಪೂರ್ಣ ಮಾಹಿತಿ ಒಳಗೊಂಡ ನಾಮಫಲಕ ಅಳವಡಿಸಲು ಹಣ ಮೀಸಲಿಡಲಾಗಿರುತ್ತದೆ. ಗ್ರಾಮ ಪಂಚಾಯತಿ ಹಂತದ ಸಿಬ್ಬಂದಿ ಮೇಲೆ ತಾಲೂಕು ಹಂತದ ಸಿಬ್ಬಂದಿ ಮೇಲ್ವಿಚಾರಣೆ ಮಾಡಬೇಕು. ನಾಮ ಫಲಕದಲ್ಲಿ ಅಳವಡಿಸಿ ಜನರಿಗೆ ಮಾಹಿತಿ ದೊರಕುವಂತೆ ಮಾಡಬೇಕು ಎಂದರು.
ನರೇಗಾ ಯೋಜನೆಯಡಿ ಕೈಗೊಂಡ ಮೊರಂ ರಸ್ತೆ ಕಾಮಗಾರಿ, ಸಿಸಿ ಗಟಾರ, ಸಿಡಿ £ರ್ಮಾಣ, ಶಾಲಾ ಶೌಚಲಯ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿದರು.
ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಹೆಚ್ಚು ಆಸ್ತಿ ಸೃಜನೆ ಮಾಡುವ ಮೂಲಕ ಅವರಿಗೆ ಅನುಕೂಲ ಆಗುವ £ಟ್ಟಿನಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಕೆಲಸ ಮಾಡಬೇಕು. £Ãವು ಮಾಡುವ ಸಿಸಿ ರಸ್ತೆಗಳು ಗುಣಮಟ್ಟ ದಿಂದ ಕೂಡಿರಬೇಕು ಗುಣಮಟ್ಟದಲ್ಲಿ ಯಾವುದೇ ರೀತಿಯ ಲೋಪ ಆಗದಂತೆ ತಾವು ಕಟ್ಟು£ಟ್ಟಾಗಿ £ಗಾವಹಿಸುವ ಮೂಲಕ ಕಾಮಗಾರಿ ಲಾಭ ಜನ ಸಾಮಾನ್ಯರಿಗೆ ತಲುಪಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಸಿಇಓ ಆಪ್ತ ಸಹಾಯಕ ಬಿ.ಎಸ್. ಕಪರದ, ತಾಲೂಕು ಪಂಚಾಯತಿ ಕಾರ್ಯ£ರ್ವಾಹಕ ಅಧಿಕಾರಿ ಕೃಷ್ಣ ಧರ್ಮರ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ.ಆರ್. ಮಾದರ, ಕಾರ್ಯದರ್ಶಿ ಎಸ್.ಕೆ. ಡಂಬಳ, ತಾಂತ್ರಿಕ ಸಂಯೋಜಕ ಅರುಣಕುಮಾರ ತಂಬ್ರಳ್ಳಿ, ತಾಂತ್ರಿಕ ಸಹಾಯಕರಾದ ಸುರೇಶ ಬಳ್ಳಾರಿ, ವಿ.ಎಸ್. ಅಳವಂಡಿಮಠ, ಲಿಂಗರಾಜ ಅರಿಷಿಣದ, ಬಿಎಫ್‌ಟಿ ಸತೀಶ ಅರಿಷಿಣದ, ಶಿಲ್ಪಾ ಲಮಾಣಿ, ಗ್ರಾಪಂ ಸಿಬ್ಬಂದಿ ಇತರರು ಇದ್ದರು.
Gadi Kannadiga > Local News > ಓಂಬಡ್ಸಮನ್ ಸಹಾಯವಾಣಿ ಸಂಖ್ಯೆ ನಮೂದಿಸಿ ಜಿಪಂ ಸಿಇಒರವರಾದ ಡಾ. ಸುಶೀಲಾ ಬಿ. ಸೂಚನೆ / ಕಾಮಗಾರಿಳ ಸ್ಥಳ ಪರಿಶೀಲನೆ
ಓಂಬಡ್ಸಮನ್ ಸಹಾಯವಾಣಿ ಸಂಖ್ಯೆ ನಮೂದಿಸಿ ಜಿಪಂ ಸಿಇಒರವರಾದ ಡಾ. ಸುಶೀಲಾ ಬಿ. ಸೂಚನೆ / ಕಾಮಗಾರಿಳ ಸ್ಥಳ ಪರಿಶೀಲನೆ
Suresh12/07/2023
posted on
