This is the title of the web page
This is the title of the web page

Please assign a menu to the primary menu location under menu

Local News

ಚಿರತೆ ಕಾರ್ಯಾಚರಣೆಗೆ ಸಲಗಗಳ ಎಂಟ್ರಿ…


ಬೆಳಗಾವಿ: ನಗರದಲ್ಲಿ ಕೆಲವು ದಿನಗಳಿಂದ ಚಿರತೆಯು ಅರಣ್ಯ ಇಲಾಖೆಯೊಂದಿಗೆ ಕಣ್ಣು ಮುಚ್ಚಾಲೆಯಾಡುತ್ತಿದ್ದು ಜನರ ನಿದ್ದೆಗೆಡಿಸಿದೆ. ಚಿರತೆ ಸೆರೆಗೆ ಮತ್ತಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು ಶಿವಮೊಗ್ಗದಿಂದ ಆನೆಯ ವಿಶೇಷ ತಂಡವನ್ನು ಬೆಳಗಾವಿಗೆ ಆಗಮಿಸಿಕೊಳ್ಳಲಾಗುತ್ತಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜನರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಸೆರೆಗೆ ಅರಣ್ಯ ಇಲಾಖೆ ನಾನಾ ರೀತಿಯ ಕಾರ್ಯಾಚರಣೆ ನಡೆಸಿದರೂ ಪತ್ತೆಯಾಗಿಲ್ಲ, ನಿನ್ನೆಯಷ್ಟೆ ಚಿರತೆಯು ಎಲ್ಲರ ಎದುರೇ ಜಿಗಿದು ಪರಾರಿಯಾಗಿದ್ದು ದ್ರೋಣ ಕ್ಯಾಮರಾ ಮೂಲಕ ಚಿರತೆ ಪತ್ತೆ ಹಚ್ಚುವ ಕಾರ್ಯಾಚರಣೆ ಮಾಡಲು ಚಿಂತನೆ ನಡೆಸಲಾಗಿತ್ತು. ಆದರೆ ಚಿರತೆ ಅಡಗಿರುವ ಗಾಲ್ಪ್ ಮೈದಾನ ಪ್ರದೇಶವು ರಕ್ಷಣಾ ಇಲಾಖೆಗೆ ಸೆರಿದ್ದು ದ್ರೋಣ ಕಾರ್ಯಾಚರಣೆಗೆ ಅನುಮತಿ ಸಿಗಲಿಲ್ಲ.

ಇದೀಗ ಶಿವಮೊಗ್ಗದ ಡಾಟಿಂಗ್ ಸ್ಪೆಷಲಿಸ್ಟ್ ವನ್ಯಜೀವಿ ತಜ್ಞ ಡಾ. ವಿನಯ್ ನೇತೃತ್ವದಲ್ಲಿ ವಿಶೇಷ ತಂಡವೊಂದು ಬೆಳಗಾವಿಗೆ ತೆರಳಲು ಸಿದ್ಧವಾಗಿದೆ, ಇದರಲ್ಲಿ ಸಕ್ರೇಬೈಲು ಆನೆ ಬಿಡಾರದ ಅರ್ಜುನ ಹಾಗೂ ಆಲೆ ಆನೆಗಳೂ ಸೇರಿ ವೈದ್ಯರು, ಸಹಾಯಕ ಸಿಬ್ಬಂದಿ, ಮಾವುತರು, ಕಾವಾಡಿಗಳು ಮತ್ತು ಬಿಡಾರದ ಸಹಾಯಕ ಸಿಬ್ಬಂದಿ ಸೇರಿದಂತೆ 8 ಜನರ ತಂಡ ಬೆಳಗಾವಿಗೆ ಆಗಮಿಸುತ್ತಿದ್ದು ಇಂದು ರಾತ್ರಿ ಎಂಟು ಗಂಟೆಗೆ ಬೆಳಗಾವಿಗೆ ತಲುಪಲಿದ್ದಾರೆ. ನಾಳೆಯಿಂದ ಚಿರತೆ ಕಾರ್ಯಾಚರಣೆಯ ವೇಗ ಮತ್ತಷ್ಟು ಹೆಚ್ಚಲಿದ್ದು ಅರಣ್ಯ ಇಲಾಖೆಯ ತಂತ್ರಕ್ಕೆ ಚಿರತೆ ಸೆರೆಯಾಗುತ್ತಾ ನೋಡಬೇಕಿದೆ.


Gadi Kannadiga

Leave a Reply