This is the title of the web page
This is the title of the web page

Please assign a menu to the primary menu location under menu

Local News

ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ


ಹಾರೂಗೇರಿ : ಉತ್ತಮವಾದ ಆರೋಗ್ಯವನ್ನು ಹೊಂದಲು ಪರಿಶುದ್ಧವಾದ ಆಮ್ಲಜನಕದ ಅವಶ್ಯಕತೆಯಿದೆ ಪರಿಶುದ್ಧವಾದ ಆಮ್ಲಜನಕ ಸಿಗಬೇಕೆಂದರೆ ಪರಿಸರ ಅವಶ್ಯಕ ಹಾಗೂ ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ಪರಿಸರದ ಪಾತ್ರ ಬಹುಮುಖ್ಯವಾಗಿದೆ ಆದ್ದರಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಹಾರೂಗೇರಿ ಪುರಸಭೆಯ ಮುಖ್ಯಸ್ಥರಾದ ಜಿ.ವಿ. ಹಣ್ಣಿಗೇರಿಯವರು ಹೇಳಿದರು.

ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಅಡಿಯಲ್ಲಿ ಭೂಗೋಳಶಾಸ್ತ್ರ ಮತ್ತು ಸಾಂಸ್ಕೃತಿಕ ವಿಭಾಗ, ಎನ್.ಎಸ್.ಎಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಪರಿಸರ ನಾಶದಿಂದ ದಿನೇ ದಿನೇ ಜಾಗತಿಕ ತಾಪಮಾನ ಏರುತ್ತಿದ್ದು ಇದರಿಂದ ನಮ್ಮೆಲ್ಲರ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತಿದೆ ಇದರ ಕುರಿತಾಗಿ ಎಚ್ಚರವಹಿಸುವುದು ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಆರ್.ಬಿ .ಕೊಕಟನೂರ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯೂ ನಿಮ್ಮ ಮನೆಗಳ ಹತ್ತಿರ ಗಿಡಗಳನ್ನು ಬೆಳೆಸಿ ನಿಮ್ಮ ಸುತ್ತಲಿನ ವಾತಾವರಣವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡುವ ಜವಾಬ್ದಾರಿ ನಿಮ್ಮದಾಗಬೇಕು ಎಂಬ ಸಲಹೆಯನ್ನು ವಿದ್ಯಾರ್ಥಿಗಳಿಗೆ ನೀಡಿದರು.

ಕಾರ್ಯಕ್ರಮದಲ್ಲಿ ಹಾರೂಗೇರಿಯ ಸರ್ಕಾರಿ ಪ್ರೌಢಶಾಲೆಯ ಪ್ರಧಾನ ಗುರುಮಾತೆಯರಾದ ಆರ್.ಬಿ ಕೆಮಲಾಪುರೆ, ದೈಹಿಕ ಶಿಕ್ಷಕರಾದ ಸರ್ದಾರ ಜಮಾದರ, ಕಾಲೇಜಿನ ಸೂಪಿರಿಡೆಂಟ ರಾಜು ಹುದ್ದಾರ, ಅತಿಥಿ ಉಪನ್ಯಾಸಕರಾದ ಸಂಜೀವ ಹಾದಿಮನಿ, ಪ್ರಕಾಶ ಅಂಬಲಿ, ಸಂಗಮೇಶ ದಡ್ಡಿಮನಿ,ಸೈಯದ ಜಮಾದಾರ, ಶೃತಿ ಅಕ್ಕತಂಗೇರಹಾಳ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ವಿಜಯಕುಮಾರ ಕಟ್ಟಿಮನಿ ನಿರೂಪಿಸಿದರು.ಅಪ್ಪು ಮಾದರ ವಂದಿಸಿದರು.


Gadi Kannadiga

Leave a Reply