This is the title of the web page
This is the title of the web page

Please assign a menu to the primary menu location under menu

Local News

ಸಮಾಜದಲ್ಲಿನ ಅಸ್ಪೃಶ್ಯತೆ ನಿರ್ಮೂಲನೆ ಮಾಡಿ


ಬೆಳಗಾವಿ: ಸಮಾಜದಲ್ಲಿನ ಅಸ್ಪೃಶ್ಯತೆ ನಿರ್ಮೂಲನೆ ಮಾಡಿ ಎಲ್ಲ ಸಮುದಾಯದವರು ಸಹೋದರತ್ವ ಭಾವನೆಯಿಂದ ಬದುಕಿದರೆ ನಾಡಿಗೆ ಹಿತವಾಗುತ್ತದೆ. ಕಲಾತ್ಮಕವಾಗಿ ಬೀದಿನಾಟಕದ ಮುಖಾಂತರ ಸಮುದಾಯ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಿದ್ದು, ಕಲಾವಿದರು ಕೂಡ ಒಳ್ಳೆಯ ಪ್ರದರ್ಶನ ನೀಡಿ ಜನಸಾ ಮಾನ್ಯರಿಗೆ ಮನಮುಟ್ಟುವಂತೆ ಅಸ್ಪೃಶ್ಯತೆ ನಿರ್ಮೂಲನೆ ಜಾಗೃತಿ ಮೂಡಿ¸ Àಬೇಕೆಂದು ಆನಂದಕುಮಾರ ಆಯ್. ಪಾಟೀಲ ಬೆಳಗಾವಿ ತಾಲೂಕಾ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಗ್ರೇಡ್-೧ ಇವರು ಜಿಲ್ಲಾ ಪಂಚಾಯತ ಬೆಳಗಾವಿ ಜಿಲ್ಲಾ ಸಮಾಜಕಲ್ಯಾಣ ಇಲಾಖೆ ಹಾಗೂ ತಾಲೂಕಾ ಸಮಾಜಕ ಲ್ಯಾಣ ಇಲಾಖೆ ಬೆಳಗಾವಿ ಹಾಗೂ ಬೆಳಗಾವಿ ತಾಲೂಕಿನ ಆಯ್ದ ಗ್ರಾಮಗಳಲ್ಲಿ ೧೬ ಜನೇವರಿ ೧೯.೨೦೨೩ ರವರೆಗೆ ಜರುಗಿದ ಬೀದಿನಾಟಕ ಕಲಾಜಾತಾಕ್ಕೆ ವಾದ್ಯನುಡಿಸಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಕಛೇರಿ ಅದೀಕ್ಷಕರಾದ ಶ್ರೀಮತಿ ಜೆ.ಬಿ.ಗಸ್ತೆ ಹಾಗೂ ಬಸನಗೌಡಾ ಜಿ.ಕೆ, ಶಿವನಗೌಡಾ ಪಾಟೀಲ ಉಪಸ್ಥಿ ತರಿದ್ದರು. ಎಸ್.ಎ.ಉಪ್ಪಾರ ಸ್ವಾಗತಿಸಿ ವಂದಿಸಿದರು. ರಂಗದರ್ಶನ ಗ್ರಾಮೀಣ ವಿಕಾಸ ಸಂಘ ಧುಳಗನವಾಡಿ ಕಲಾತಂ ಡದವರು ಅಸ್ಪೃಶ್ಯತೆ ನಿರ್ಮೂಲನೆ ಜೊತೆಗೆ ಶಿಕ್ಷಣ ಜಾಗೃತಿ ವಿಶೇಷ ಘಟಕ ಯೋಜನೆಗಳು ಕುರಿತು ಸಮುದಾಯಕ್ಕೆ ಜಾಗೃತಿ ಮೂಡಿಸಿದರು. ಕಲಾತಂಡದವರು ಕೇಕೆಕೊಪ್ಪ, ಹಿರೇಬಾಗೇವಾಡಿ, ಮುತ್ನಾಳ, ಬಾಳೆಕುಂದ್ರಿ ಕೆ.ಎಚ್, ಸಾಂಬ್ರಾ, ನಿಲಜಿ, ಕರಡಿಗುಡ್ಡ ಗ್ರಾಮಗಳಲ್ಲಿ ಪ್ರದರ್ಶನ ನೀಡಿ ಅರಿವು ಮೂಡಿಸಿದರು.


Leave a Reply