ಬೆಳಗಾವಿ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ಆಚರಣೆ ನಿಮಿತ್ತ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಮತ್ತು ಎಲ್ಲ ವಯೋಮಿತ ಹಿರಿಯ ನಾಗರಿಕರಿಗೆ ಐದು ವಿಭಾಗಗಳಲ್ಲಿ ಪ್ರಬಂಧ ಸ್ಪರ್ಧೆಯನ್ನು ೫ ಎಪ್ರಿಲ್ ೨೦೨೩ ರಂದು ಮುಂಜಾನೆ ೧೦.೩೦ ಗಂಟೆಗೆ ಕೆಎಲ್‌ಇ ಸಂಸ್ಥೆಯ ಬೆಳಗಾವಿಯ ಜಿ. ಎ. ಪ್ರೌಢಶಾಲೆಯಲ್ಲಿ ಆಯೋಜಿಸಿದೆ.
ಪ್ರಾಥಮಿಕ ವಿಭಾಗದಲ್ಲಿ ‘ಬಸವಣ್ಣನವರ ಬಾಲ್ಯ ಜೀವನ’, ಮಾಧ್ಯಮಿಕ ವಿಭಾಗಕ್ಕೆ ‘ಕಲ್ಯಾಣ ಪಟ್ಟಣದ ಅನುಭವ ಮಂಟಪ ಮತ್ತು ಮಹಾಮನೆ’, ಪದವಿಪೂರ್ವ ವಿಭಾಗಕ್ಕೆ ‘ಮಹಾತ್ಮ ಬಸವಣ್ಣನವರ ವೈಚಾರಿಕತೆ’, ಪದವಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ‘ಕಲ್ಯಾಣಕ್ರಾಂತಿಯ ಪ್ರಾಮುಖ್ಯತೆ’, ಹಾಗೂ ಎಲ್ಲ ವಯೋಮಾನದವರಿಗೆ ‘ಯುಗದ ಉತ್ಸಾಹ ಬಸವಣ್ಣ’ ವಿಭಾಗವಾರು ವಿಷಯಗಳನ್ನು ನೀಡಲಾಗಿದೆ. ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ಬಸವ ಜಯಂತಿಯಂದು ವಿತರಿಸಲಾಗುವುದು.
ಆಸಕ್ತ ಸ್ಪರ್ಧಾಳುಗಳು ದಿನಾಂಕ ೪ ಎಪ್ರಿಲ್ ೨೦೨೩ ರ ಒಳಗಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ, ಲಿಂಗಾಯತ ಭವನದಲ್ಲಿ ಹೆಸರನ್ನು ನೋಂದಾಯಿಸಬಹುದು ಅಥವಾ ಕಾರ್ಯಾಲಯದ ಪ್ರವೀಣ ತೆವರಿ ಮೊ.ನಂ. ೯೧೬೪೩೪೫೨೦೮ ಇವರನ್ನು ಸಂಪರ್ಕಿಸಬೇಕಾಗಿ ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷೆ ಶ್ರೀಮತಿ ರತ್ನಪ್ರಭಾ ಬೆಲ್ಲದ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.