This is the title of the web page
This is the title of the web page

Please assign a menu to the primary menu location under menu

Local News

ಪ್ರಬಂಧ ಸ್ಪರ್ಧೆಯ ವಿಜೇತರ ವಿವರ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಪ್ರಬಂಧ ಸ್ಪರ್ಧೆಯ ವಿಜೇತರು


ಬೆಳಗಾವಿ: ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ವತಿಯಿಂದ ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ಸ್ವಾತಂತ್ರೊö್ಯÃತ್ತರ ಭಾರತದ ಅಭಿವೃದ್ದಿಯ ಕುರಿತು ಪಂ. ದೀನದಯಾಳ ಉಪಾಧ್ಯಾಯರ ಚಿಂತನೆಗಳು ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಪ್ರಬಂಧ ಸ್ಪರ್ಧೆಯ ಪ್ರಥಮ ಬಹುಮಾನ ಆರ್‌ಸಿಯು ಅಪರಾಧಶಾಸ್ತ್ರ ಮತ್ತು ಅಪರಾಧಿಕ ನ್ಯಾಯ ವಿಭಾಗದ ಆನಂದಾ ಸಾಲಿಮನಿ ಪಡೆದಿದ್ದಾರೆ. ದ್ವಿತೀಯ ಬಹುಮಾನ ಬಾದಾಮಿಯ ಎಸ್. ಎಸ್. ಬಿ.ಎಮ್.ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪವಿತ್ರಾ ಜೇಮಾಜಿ ಮತ್ತು ತೃತೀಯ ಬಹುಮಾನ ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪ್ರಥಮದರ್ಜೆಘಟಕ ಮಹಾವಿದ್ಯಾಲಯದ ಪುಷ್ಪಾ ಪುರವಾಣಿ ಅವರು ಪಡೆದುಕೊಂಡಿದ್ದಾರೆ.
ಈ ಪ್ರಬಂಧ ಸ್ಪರ್ಧೆಯಲ್ಲಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಬಾಗಲಕೋಟೆ, ವಿಜಯಪುರ ಮತ್ತು ಬೆಳಗಾವಿ ಜಿಲ್ಲೆಗಳ ಕಾಲೇಜುಗಳ (ಸ್ನಾತ್ತಕ) ವಿದ್ಯಾರ್ಥಿಗಳು, ಸ್ನಾತ್ತಕೊತ್ತರ ಅಧ್ಯಯನ ಮಾಡುವ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೧೫೪ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಥಮ ಬಹುಮಾನ ೫,೦೦೦ ರೂಪಾಯಿಗಳು ಮತ್ತು ಪ್ರಶಸ್ತಿ ಪತ್ರ, ದ್ವಿತೀಯ ಬಹುಮಾನ ೩,೦೦೦ ರೂಪಾಯಿಗಳು ಮತ್ತು ಪ್ರಶಸ್ತಿ ಪತ್ರ, ತೃತೀಯ ಬಹುಮಾನ ೨,೦೦೦ ರೂಪಾಯಿಗಳು ಮತ್ತು ಪ್ರಶಸ್ತಿ ಪತ್ರ ಮತ್ತು ೧೧ ಸಮಾಧಾನಕರ ಬಹುಮಾನ ತಲಾ ೧,೦೦೦ ರೂಪಾಯಿಗಳಂತೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.
೧೫೪ ಪ್ರಬಂಧಗಳ ಪೈಕಿ ೧೧ ಉತ್ತಮ ಪ್ರಬಂಧಗಳನ್ನು ಸಮಾಧಾನಕರ ಬಹುಮಾನಗಳೆಂದು ಆಯ್ಕೆ ಮಾಡಲಾಗಿದೆ. ೧. ಸೀಮಾ ಗಣಾಚಾರಿ, ರಸಾಯನಶಾಸ್ತ್ರ ವಿಭಾಗ, ರಾಚವಿ, ಬೆಳಗಾವಿ. ೨. ಶಿಲ್ಪಾ ಶಿಂಗಾಡಿ, ಸಮಾಜಶಾಸ್ತ್ರ ವಿಭಾಗ. ರಾಣಿಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ. ೩. ವೀಣಾ ಬಿ. ಫರಾಳೆ, ರಾಜ್ಯಶಾಸ್ತ್ರ ವಿಭಾಗ, ರಾಚವಿ, ಬೆಳಗಾವಿ. ೪. ಸೃಷ್ಠಿ ಡಿ ಹಾರೂಗೇರಿ, ಕೆಎಲ್‌ಇ ಸೊಸೈಟಿ, ಲಿಂಗರಾಜಕಾಲೇಜು ಬೆಳಗಾವಿ. ೫. ದೀಪಾ ಕನಕಪ್ಪತೋಟದ, ಬಿ.ಎಲ್.ಡಿ.ಇ ಸಂಸ್ಥೆಯ, ಬಸವೇಶ್ವರ ಕಲಾ ಮತ್ತು ವಾಣಿಜ್ಯ ವiಹಾವಿದ್ಯಾಲಯ ಬಸವನ ಬಾಗೇವಾಡಿ. ೬. ಸ್ವಾತಿ ಅ ಮಸಳಿ, ನೂತನ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯತಿಕೋಟಾ. ೭. ಸಚಿನ ಕಲಶೆಟ್ಟಿ, ಸರಕಾರಿ ಪ್ರಥಮದರ್ಜೆಕಾಲೇಜು ಹುನ್ನೂರ. ೮. ಶಿವುಕುಮಾರ ಸಾಬನ್ನವರ, ಕೆಎಲ್‌ಇ ಸೊಸೈಟಿ, ಎಸ್‌ಸಿಪಿ ಕಲಾ, ವಾಣೀಜ್ಯ ಮತ್ತುಡಿಡಿಎಸ್ ವಾಣಿಜ್ಯ ಮಹಾವಿದ್ಯಾಲಯ£ ಮಹಾಲಿಂಗಪುರ. ೯. ಸೃಷ್ಠಿ ಮಾರುತಿ ನರೂಟಿ, ಚನ್ನಬಸವ ಮಹಾಸ್ವಾಮಿಜಿ ಪ್ರಥಮದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಮುನವಳ್ಳಿ. ೧೦. ಶಿಲ್ಪಾ ಆರ್ ನಾಯ್ಕವಾಡಿ, ಏಸ್.ಆರ್.ಇ.ಎಸ್ ಪ್ರಥಮದರ್ಜೆ ಮಹಾವಿದ್ಯಾಲಯ ಕಲ್ಲೋಳಿ. ೧೧. ರವಿನಾ ಲಮಾಣಿ, ಸಂಗೊಳ್ಳಿ ರಾಯಣ್ಣ ಪ್ರಥಮದರ್ಜೆಘಟಕ ಮಹಾವಿದ್ಯಾಲಯ, ಬೆಳಗಾವಿ. ಇವರು ಸಮಾಧಾನಕರ ಬಹುಮಾನ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.
ಬಹುಮಾನ ಪಡೆದ ಈ ಎಲ್ಲ ವಿದ್ಯಾರ್ಥಿಗಳನ್ನು ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಮ್.ರಾಮಚಂದ್ರಗೌಡ ಈ ವಿದ್ಯಾರ್ಥಿಗಳು ದೇಶಕ್ಕಾಗಿ ದುಡಿದಿರುವ ಮಹಾನ ನಾಯಕರ ಬಗ್ಗೆ ಇನ್ನೂ ಹೆಚ್ಚಿಗೆ ತಿಳಿದುಕೊಳ್ಳಲಿ ಮತ್ತು ಕಾಲೇಜು ಮತ್ತು ವಿಶ್ವವಿದ್ಯಾಲಯದ ಹೆಸರನ್ನು ತರಲಿ ಎಂದು ಅಭಿನಂದಿಸಿದ್ದಾರೆ ಎಂದು ಪಂ.ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ಸಂಯೋಜಕ ಡಾ.ಕನಕಪ್ಪ ಪೂಜಾರ ತಿಳಿಸಿದ್ದಾರೆ.

 


Gadi Kannadiga

Leave a Reply