ಕುಷ್ಟಗಿ:-ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದಿಂದ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಾರಣರಾದ ಸಮಾಜದ ಪ್ರಮುಖರಾದ ಜಮಖಂಡಿ ಶಾಸಕ ಆನಂದ ನ್ಯಾಮೇಗೌಡರ ಅವರನ್ನು ಪಟ್ಟಣದಲ್ಲಿ ಗಾಣಿಗ ಸಮುದಾಯದಿಂದ ಭಾನುವಾರ ಗೌರವಿಸಲಾಯಿತು.
ಸಮುದಾಯದ ತಾಲೂಕಾಧ್ಯಕ್ಷ ಸಂಗನಗೌಡ ಪಾಟೀಲ್ ಇತರರು ಮಾತನಾಡಿ, ಹಿಂದುಳಿದ ಸಮುದಾಯಗಳಲ್ಲಿ ಒಃದಾದ ಗಾಣಿಗ ಸಮುದಾಯದ ಬಹುದಿನಗಳ ಬೇಡಿಕೆಯನ್ನು ಈಡೇರಿಸಲು ಸಮಾಜದ ಒಗ್ಗಟ್ಟಿನ ಮೂಲಕ ಪ್ರಯತ್ನಿಸಿದ್ದ ಫಲವಾಗಿ ರಾಜ್ಯ ಸರ್ಕಾರ, ನಿಗಮ ಮಂಡಳಿ ಘೋಷಣೆ ಮಾಡಲು ಸಾಧ್ಯವಾಯಿತು. ಇದರಲ್ಲಿ ಶಾಸಕ ಆನಂದ ನ್ಯಾಮೇಗೌಡರ ಪರಿಶ್ರಮ ದೊಡ್ಡದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗೌರವ ಸ್ವೀಕರಿಸಿದ ಶಾಸಕ ಆನಂದ ನ್ಯಾಮೇಗೌಡರ ಮಾತನಾಡಿ, ಹಿರಿಯರು ಹೇಳುವಂತೆ ಒಗ್ಗಟ್ಟಿನಲ್ಲಿ ಬಲವಿದ್ದರೇ ನಮ್ಮ ಸಮಾಜದ ಎಲ್ಲಾ ಬೇಡಿಕೆಗಳು ಈಡೇರುತ್ತವೆ. ಕುಷ್ಟಗಿಯ ನಮ್ಮ ಸಮಾಜದ ಹಿರಿಯರಾದ ದಿ.ಜೋಗನಗೌಡ ಕೋಳೂರು ಅವರು ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ನೀಡಿದ್ದು ದೊಡ್ಡ ಕಾರ್ಯವಾಗಿದೆ. ಅವರ ಆಶಯದಂತೆ ಕೂಡಲೇ ಭವನ ನಿರ್ಮಾಣ ಕಾರ್ಯ ಆರಂಭಿಸಬೇಕು. ತಮ್ಮ ಕಡೆಯಿಂದಲೂ ಅಗತ್ಯ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಮುದಾಯದ ಉಪಾಧ್ಯಕ್ಷ ಪ್ರಭುರಾಜ ಪಾಟೀಲ್,
ಪ್ರಮುಖರಾದ ಭೀಮಮ್ಮ ಜೋಗನಗೌಡ ಕೋಳೂರು, ಪುರಸಭೆ ಸದಸ್ಯೆ ಗೀತಾ ಕೋಳೂರು, ಡಾ.ಭೀಮನಗೌಡ ಜಾಲಿಹಾಳ, ಈಶ್ವರಗೌಡ ಕೋಳೂರು, ಗೀತಾ ಪಾಟೀಲ್, ಮಹೇಶ ಕೋಳೂರು, ಕಿರಣ ಜ್ಯೋತಿ, ಪ್ರಕಾಶ್ ಪಾಟೀಲ್, ಡಾ.ಪಾರ್ವತಿ, ಪಲೋಟಿ, ಡಾ.ಮಲ್ಲಪ್ಪ, ಡಾ.ಚಿದಾನಂದ ಹುಣಸಿಹಾಳ, ಬಸವರಾಜ ಕೋಳೂರು, ಈರಣ್ಣ ಚಟ್ಫೇರ್, ಲಿಂಗರಾಜ ಬೊಮ್ಮನಾಳ, ದೇವೇಃದ್ರಗೌಡ ಪಾಟೀಲ್, ಗೂಳಪ್ಪ ಮನ್ನೇರಾಳ ರಮೇಶ್ ಮಲಕಾಪೂರ, ಹನುಮಂತಪ್ಪ ಹೊಮ್ಮಿನಾಳ, ಮಲ್ಲೇಶ ಕಡಿವಾಲರ, ಬಸವರಾಜ ಗಾಣಿಗೇರ, ಇತರರು ಉಪಸ್ಥಿತರಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ