This is the title of the web page
This is the title of the web page

Please assign a menu to the primary menu location under menu

Local News

ಕಲ್ಲೋಳಿ ಪಟ್ಟಣದಲ್ಲಿ ಗ್ರಂಥಾಲಯ ಸ್ಥಾಪನೆ. ೧೨.೫೦ ಲಕ್ಷ ರಾಜ್ಯಸಭಾ ಸಂಸದರ ಅನುದಾನ ಒಳ್ಳೆಯ ಪುಸ್ತಕಗಳು ನೂರು ಸ್ನೇಹಿತರಿಗೆ ಸಮ – ಸಂಸದ ಈರಣ್ಣ ಕಡಾಡಿ


ಮೂಡಲಗಿ: ಸಮುದಾಯಗಳಲ್ಲಿ ವಿದ್ಯೆ, ಜ್ಞಾನ, ಓದಿನ ಬಗ್ಗೆ ಆಸಕ್ತಿ ಮತ್ತು ಅಭಿರುಚಿ ಬೆಳೆಸುವ ಉದ್ದೇಶದಿಂದ ಕಲ್ಲೋಳಿ ಪಟ್ಟಣದಲ್ಲಿ ಗ್ರಂಥಾಲಯ ಸ್ಥಾಪನೆ ಮಾಡಲಾಗಿದೆ. ಗ್ರಂಥಾಲಯದಲ್ಲಿರುವ ಒಂದೊಂದು ಒಳ್ಳೆಯ ಪುಸ್ತಕಗಳು ಕೂಡಾ ನೂರು ಸ್ನೇಹಿತರಿಗೆ ಸಮ. ವ್ಯರ್ಥ ಸಮಯ ಕಳೆಯದೇ ಇಂದಿನ ಯುವಜನತೆ ಗ್ರಂಥಾಲಯಗಳ ಸದುಪಯೋಗ ಪಡೆದುಕೊಳ್ಳಬೇಕಾಗಿದೆ ಎಂದು ಸಂಸದ ಈರಣ್ಣ ಕಡಾಡಿ ಹೇಳಿದರು.
ಶುಕ್ರವಾರದಂದು ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ೨೦೨೦-೨೧ನೇ ಸಾಲಿನ ರಾಜ್ಯಸಭಾ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಲಾದ ಸಾರ್ವಜನಿಕ ಗ್ರಂಥಾಲಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾವು ಕಲಿಯುವ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಪೀಳಿಗೆಯಿಂದ ಪೀಳಿಗೆಗೆ ನಮ್ಮ ಸಂಸ್ಕೃತಿ, ಸಾಹಿತ್ಯ, ಕಲೆ, ವಿಜ್ಞಾನ ಪರಂಪರೆ, ಭಾಷೆಗಳ ಜ್ಞಾನವನ್ನು ಗ್ರಂಥಾಲಯಗಳು ಒದಗಿಸುತ್ತದೆ.
ಜನಸಾಮಾನ್ಯರು ದಿನ ನಿತ್ಯದ ಆಗು-ಹೋಗುಗಳು ಮತ್ತು ನಮ್ಮ ಸುತ್ತಲಿನ ಪ್ರಂಪಚದ ಜ್ಞಾನವನ್ನು ತಿಳಿದುಕೊಳ್ಳಲು ಗ್ರಂಥಾಲಯದಲ್ಲಿ ನಮಗೆ ದೊರೆಯುವ ದಿನಪತ್ರಿಕೆಗಳು, ವಾರಪತ್ರಿಕೆಗಳು, ಮಾಸಪತ್ರಿಕೆಗಳು ಮತ್ತು ಪತ್ರಿಕೆಯಲ್ಲಿನ ಹಲವಾರು ವಿಚಾರ ಕುರಿತು ಲೇಖನಗಳು ಓದುಗರಿಗೆ ಜ್ಞಾನ ವೃದ್ದಿಸುವಲ್ಲಿ ಸಹಾಯ ಮಾಡುತ್ತವೆ ಎಂದರಲ್ಲದೇ ವಿದ್ಯಾರ್ಥಿಗಳು,ಯುವಕರಲ್ಲಿ ಓದುವ ಹವ್ಯಾಸ ಕಡಿಯಾಗಿದೆ ಓದಿನ ಕಡೆ ಗಮನಹರಿಸಬೇಕೆಂದು ಕರೆ ನೀಡಿದರು.
ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ರಾಮಯ್ಯ,ಸಹಾಯಕ ಗ್ರಂಥಪಾಲಕರಾದ ವಸಂತ ಐಹೋಳಿ,ಈರಣ್ಣ ಜೊಂಡ,ಬಿ.ಬಿ.ಬಿರಾದಾರ ಪಾಟೀಲ ಸೇರಿದಂತೆ ನಿರ್ಮಿತಿ ಕೇಂದ್ರ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಪ್ರಮುಖರಾದ ರಾವಸಾಬ ಬೆಳಕೂಡ,ಸೇವಾ ಸಂಸ್ಥೆ ಅಧ್ಯಕ್ಷ ಬಸವರಾಜ ಕಡಾಡಿ, ಅಜಿತ್ ಬೆಳಕೂಡ, ಹಣಮಂತ ಸಂಗಟಿ, ಗಿರಿಮಲ್ಲಪ್ಪ ಸವಸುದ್ದಿ,ಮಲ್ಲಪ್ಪ ಖಾನಾಪುರ, ಸುರೇಶ ಕಬ್ಬೂರ, ಶಿವಪ್ಪ ಬಿ ಪಾಟೀಲ್,ಹಣಮಂತ ಖಾನಗೌಡ್ರ, ಡಾ, ತುಕಾರಾಮ ಉಮರಾಣಿ ಡಾ.ಲಕ್ಷ್ಮಣ ಪಾಲಕಿ,ಪ್ರಭು ಕಡಾಡಿ,ಶಿವಾನಂದ್ ಹೆಬ್ಬಾಳ, ಅಜಿತ್ ಚಿಕ್ಕೋಡಿ, ಹಣಮಂತ ಕೌಜಲಗಿ, ಅಡಿವೆಪ್ಪ ಕುರಬೇಟ, ಗುರುನಾಥ್ ಮದಭಾವಿ, ತುಕಾರಾಮ ಪಾಲಕಿ, ಭೀಮಶಿ ಹೆಬ್ಬಾಳ ಪಂಚಣ್ಣ ಹೆಬ್ಬಾಳ,ಕೃಷ್ಣಪ್ಪ ಮುಂಡಿಗನಾಳ,ಕಾಡೇಶ ಗೊರೋಶಿ, ಈರಪ್ಪ ಮ ಬೆಳಕೂಡ, ಮಂಜುಳಾ ಹಿರೇಮಠ, ಶಿವಗೊಂಡ ವ್ಯಾಪಾರಿ, ಶಿವಲಿಂಗ ಕುಂಬಾರ ಸೇರಿದಂತೆ ಕಲ್ಲೋಳಿ ಪಟ್ಟಣದ ಓದುಗರು,ಪಟ್ಟಣ ಪಂಚಾಯತ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Leave a Reply