This is the title of the web page
This is the title of the web page

Please assign a menu to the primary menu location under menu

State

ಕುಷ್ಟಗಿ ಪುರಸಭೆ ಮುಖ್ಯಾಧಿಕಾರಿ ಹಾಗೂ ಬೀದಿ ಬದಿ ವ್ಯಾಪಾರಸ್ಥರ ಮಧ್ಯ ಮಾತಿನ ಚಕಮಕಿ ಪೋಲಿಸರ ಮಧ್ಯಸ್ಥಿಕೆಯಲ್ಲಿ ತೆರವು ಕಾರ್ಯಚರಣೆ


ಕುಷ್ಟಗಿ:  ಪಟ್ಟಣದ ಬಸವೇಶ್ವರ ಸರ್ಕಲ್ ನಿಂದ ಬಸ್ ನಿಲ್ದಾಣಕ್ಕೆ ತೆರಳುವ ಬಲ ಭಾಗದ ರಸ್ತೆಯ ಬದಿಯಲ್ಲಿ ಬೀದಿಬದಿ ವ್ಯಾಪಾರಸ್ಥರು ಹಾಗೂ ಅಕ್ರಮವಾಗಿ ಶೆಡ್ ಮೂಲಕ ಅಂಗಡಿಗಳನ್ನು ನಿರ್ಮಾಣ ಮಾಡಿಕೊಂಡು ದಿನನಿತ್ಯ ತಮ್ಮ ವ್ಯಾಪಾರ ವಹಿವಾಟುಗಳನ್ನು ನಡೆಸುವಂತ ವ್ಯಾಪಾರಿಗಳ ಅಂಗಡಿಗಳನ್ನು ಪುರಸಭೆ ಕಾರ್ಯಲಯದಿಂದ ತೆರವುಗೊಳಿಸಲಾಯಿತು.

ಪಾದಚಾರಿಗಳಿಗೆ ಹಾಗೂ ವಾಹನ ಸಾವಾರರಿಗೆ ತೊಂದರೆಯಾಗುತ್ತದೆ ಹಾಗಾಗಿ ತೆರವುಗೊಳಿಸಬೇಕಾದ ಅನಿವಾರ್ಯ ಇದೆ ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಉಮೇಶ ಹಿರೇಮಠ ಮನವಿ ಮಾಡಿಕೊಂಡಿದ್ದರು.

ನಂತರ ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ಜೊತೆ ಬೀದಿ ಬದಿ ವ್ಯಾಪರಸ್ಥರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷ ರಾಘವೇಂದ್ರ ಭಜೇಂತ್ರಿ ಮಾತನಾಡಿ ಯಾವುದೇ ರೀತಿಯಲ್ಲಿ ನಮಗೆ ತಿಳಿಸದೇ ಮತ್ತು ಒಂದು ನೋಟಿಸ್ ಕೊಡದೆ ಏಕಾ ಏಕಿಯಾಗಿ ತೆರವುಗೊಳಿಸುವದು ಎಷ್ಟರ ಮಟ್ಡಿಗೆ ಸರಿ ,ಪುರಸಭೆಯ ಅಧಿಕಾರಿಯ ವಿರುದ್ದ ಪ್ರಕರಣ ದಾಖಲಿಸಬೇಕಾಗುತ್ತದೆ ,ಎಂದರು.ನಮ್ಮ ಹತ್ತಿರ ಕೋರ್ಟ್ ಆದೇಶ ಇದೇ ಯಾವುದೇ ರೀತಿಯಲ್ಲಿ ಬೀದಿ ಬದಿ ವ್ಯಾಪರಿಗಳ ಅಂಗಡಿಗಳನ್ನು ತೆರವುಗೊಳಿಸಬೇಕಾದರೆ ಮೊದಲು ನೋಟಿಸ್ ಕೊಟ್ಟು ಅವರಿಗೆ ವ್ಯಾಪಾರ ನಡೆಸಲು ಪ್ರತ್ಯೇಕ ಮಾರುಕಟ್ಟೆ ಮಾಡಿಕೊಟ್ಟು ತೆರವು ಗೊಳಿಸಬೇಕು ಎಂಬ ನಿಮಯವಿದೆ. ಆದರೆ ಕೋರ್ಟ್ ಆದೇಶವನ್ನೆ ಧಿಕ್ಕರಿಸಿ ತೆರವು ಕಾರ್ಯಚರಣೆ ಮಾಡುತ್ತಿದ್ದೀರಿ ನಾವುಗಳು ತೆರವು ಮಾಡಲು ಬಿಡುವದಿಲ್ಲ ಎಂದು ಪಟ್ಟು ಹಿಡಿದರು.

ಕುಷ್ಟಗಿ ಪೋಲಿಸ್ ಠಾಣೆಯ ಸಿಪಿಐ ರುದ್ರಪ್ಪ ಎನ್ ಆರ್ ಮಾತನಾಡಿ ಸಾರ್ವಜನಿಕ ಪಟ್ಟದ ಪ್ರಮುಖ ರಸ್ತೆ ಆಗಿರುವುದರಿಂದ ವಾಹನ ಸವಾರರಿಗೆ ಪಾರ್ಕಿಂಗ್ ತೊಂದರೆ ಯಾಗಿದ್ದು ವ್ಯಾಪರಸ್ಥರು ಸಹಕರಿಸಬೇಕೆಂದರು.

ಬೀದಿ ಬದಿ ವ್ಯಾಪಾರ ಸ್ಥರಿಗೂ ವ್ಯಾಪಾರ ಕ್ಕೆ ಅನುಕೂಲವಾಗುವಂತೆ ಪುರಸಭೆಯ ಮುಖ್ಯಾಧಿಕಾರಿ ಗಳಿಗೆ ತಿಳಿಸಲಾಗುವದು ಈಗ ತೆರವು ಕಾರ್ಯಚರಣೆಗೆ ಅನುವು ಮಾಡಿಕೊಡಿ ನಂತರ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಕೊಡಿ ದಿನನಿತ್ಯ ವ್ಯಾಪಾರ ನೆಡೆಸಲು ಪ್ರತ್ಯೇಕ ಮಾರುಕಟ್ಟೆ ಮಾಡಲು ಸೂಕ್ತವಾದ ಸ್ಥಳ ಕಲ್ಪಿಸಿ ಬೀದಿ ಬದಿ ವ್ಯಾಪಾರಸ್ಥರಿಗೆ ಅನುವು ಮಾಡಿಕೊಡಿ ಕಾನೂನಿನ ಚೌಕಟ್ಟಿನಲ್ಲಿ ಯಾರು ಸರಕಾರಿ ಜಾಗದಲ್ಲಿ ಅಕ್ರಮ ಅಂಗಡಿಗಳನ್ನು ಇಟ್ಟಿದ್ದಾರೆ ಅಂತಹ ಎಲ್ಲಾ ಅಂಗಡಿಯನ್ನು ತೆರವುಗೊಳಿಸಿ ಬೀದಿ ಬದಿ ವ್ಯಾಪರಸ್ಥಿರಿಗೆ ಪ್ರತ್ಯೇಕ ಮಾರುಕಟ್ಟೆ ವದಗಿಸಿ ಕೊಡುವಂತೆ ವ್ಯಾಪಾರಸ್ಥರಿಗೆ ಹೇಳಿದಾಗ ವ್ಯಾಪಾರಸ್ಥರು ತಮ್ಮ ಪಟ್ಟು ಬಿಟ್ಟು ತೆರವು ಕಾರ್ಯಚರಣೆಗೆ ಅನುವು ಮಾಡಿಕೊಟ್ಟರು.

ನಂತರ ಒಬ್ಬರಾಗಿ ವ್ಯಾಪಾರಸ್ಥರು ತಮ್ಮ ತಮ್ಮ ಅಂಗಡಿಗಳನ್ನು ತೆಗೆದುಕೊಂಡು ಪೋಲಿಸರಿಗೆ ಹಾಗೂ ಪುರಸಭೆ ಅಧಿಕಾರಿಗಳಿಗೆ ಸಹಕರಿಸಿದರು.

ಒಟ್ಟಾರೆ ಕುಷ್ಟಗಿ ಬಸವೇಶ್ವರ ಸರ್ಕಲ್ ನಿಂದ ಪ್ರಾರಂಭವಾದ ಅಕ್ರಮ ಶೆಡ್ ಹಾಗೂ ಬೀದಿ ಬದಿ ವ್ಯಾಪಾರ ಸ್ಥರ ವಸ್ತುಗಳ ನ್ನು ತೆಗದು ತೆರವು ಕಾರ್ಯ ಪ್ರಾರಂಬಿಸಿದರು. ಬಸವೇಶ್ವರ ಸರ್ಕಲ್ ನಿಂದ ಪಟ್ಟಣದ ಬಸ್ ನಿಲ್ದಾಣದ ವರೆಗೆ ತೆರವು ಕಾರ್ಯಾಚರಣೆ ಮಾಡಲು ಪ್ರಾರಂಭಿಸಿದರು.

ಈ ಸಂದರ್ಭದಲ್ಲಿ ಕೆಲ ಬೀದಿ ಬದಿ ವ್ಯಾಪಾರ ಸ್ಥರು ನಮಗೆ ಯಾವುದೇ ಮುನ್ಸೂಚನೆ ನೀಡದೇ ತೆರವುಗೊಳಿಸುತ್ತಿರುವದು ಬಹಳ ಅನ್ಯಾಯ ಎಂದು ವ್ಯಾಪಾರಸ್ಥರು ತಮ್ಮ ಅಳಲನ್ನು ತೋಡಿ ಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಬೀದಿ ಬದಿ ವ್ಯಾಪಾರಸ್ಥರ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ಬಜೆಂತ್ರಿ ಮಾತನಾಡಿ ನಮ್ಮ ಬೀದಿ ಬದಿ ವ್ಯಾಪಾರ ಸ್ಥರಿಗೆ ಮೊದಲು ಸ್ಥಳ ನಿಗದಿ ಮಾಡಿ ಕೊಡಿ ನಂತರ ನಿಮ್ಮ ತೆರವು ಕಾರ್ಯ ಪ್ರಾರಂಭಿಸಿ ಎಂದು ಪುರಸಭೆ ಮುಖ್ಯಾಧಿಕಾರಿ ಗೆ ಮನವಿ ಮಾಡಿಕೊಂಡರು.ಆದ್ರೆ ಪುರಸಭೆ ಯ ಅಧಿಕಾರಿಗಳು ಯಾವುದೇ ರೀತಿ ನಿಮಗೆ ಇಲ್ಲಿ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಲು ಆಗುವದಿಲ್ಲಾ ,ವ್ಯಾಪಾರ ಸ್ಥರಿಗೆ ಈಗಾಗಲೇ ನಿಗದಿ ಮಾಡಿದ ಸ್ಥಳದಲ್ಲಿ ನೀವು ವ್ಯಾಪರ ಮಾಡಿ ಎಂದು ಕಾರ್ಯಾಚರಣೆ ಪ್ರಾರಂಭಿಸಿದರು.

ಈ ಸಂದರ್ಭದಲ್ಲಿ ಸಿಪಿಐ ನಿಂಗಪ್ಪ ಎನ್ ಆರ್ ,ಪಿಎಸ್ ಐ ತಿಮ್ಮಣ್ಣ ನಾಯಕ ಸೇರಿದಂತೆ ಪುರಸಭೆ ಅಧಿಕಾರಿಗಳು,ಸಿಬ್ಬಂದಿ,ಹಾಗೂ ಪೋಲಿಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Gadi Kannadiga

Leave a Reply