This is the title of the web page
This is the title of the web page

Please assign a menu to the primary menu location under menu

Local News

ದುರ್ಗಾಮಾತ ದೌಡನಲ್ಲಿಯೂ ಕನ್ನಡಕ್ಕೆ ಅವಮಾನ ಮಾಡಲು ಮುಂದಾದ ನಾಡದ್ರೋಹಿ


ಬೆಳಗಾವಿ: ನವರಾತ್ರಿ ಉತ್ಸವದ ನಿಮಿತ್ಯ ಹಮ್ನಿಕೊಳ್ಳು ದುರ್ಗಾಮಾತ ದೌಡನಲ್ಲಿ ನಾಡವಿರೋದಿಯೊಬ್ಬ ನಾಡ ಧ್ವಜಕ್ಕೆ ಅವಮಾನ ಮಾಡಲು ಹೋಗಿ ಮುಖಕ್ಕೆ ಉಗಿಸಿಕೊಂಡ ಘಟನೆ ಜಿಲ್ಲೆಯ ಕಾಕತಿ ಗ್ರಾಮದಲ್ಲಿ ನಡೆದಿದೆ.

ಶನಿವಾರ ಕಾಕತಿ ಗ್ರಾಮದಲ್ಲಿ ನಡೆದ ದುರ್ಗಾಮಾತೆ ದೌಡ ಸಂದರ್ಭದಲ್ಲಿ ಕನ್ನಡ ಭಾವುಟವಿದ್ದಲ್ಲಿ ದೌಡ ಬರುವುದಿಲ್ಲ ಎಂದ ಹೇಳಿಕೆ ನೀಡಿ ಪುಂಡಾಟಿಕೆ ಮೆರೆದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ದುರ್ಗಾಮಾತಾ ದೌಡ್ ಮಾಡುವ ಸಂದರ್ಭದಲ್ಲಿ ಅಲ್ಲಿಯ ಸ್ಥಳೀಯರು ಕನ್ನಡ ಬಾವುಟ ಕಟ್ಟಿ ದೌಡ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದ್ದರು. ಆದರೆ ನಾಡದ್ರೋಹಿಯೊಬ್ಬ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಕನ್ನಡ ಬಾವುಟ ಇರುವ ಕಡೆ ದುರ್ಗಾಮಾತಾ ದೌಡ ಬರುವುದಿಲ್ಲ ಎಂದು ಅವಾಜ್ ಹಾಕಿದ್ದಾನೆ. ಅಲ್ಲಿಯೇ ಇದ್ದ ಮಹಿಳೆಯರು ಈ ಘಟನೆಯನ್ನು ವೀಡಿಯೋ ಮಾಡಿದ್ದು, ಆತ ಅಲ್ಲಿಂದ ಕಾಲು ಕಿತ್ತಿದ್ದಾನೆ.

ದುರ್ಗಾಮಾತಾ ದೌಡನಲ್ಲಿ ಮರಾಠಿಗೆ ಪ್ರಾಶಸ್ತ್ಯ ನೀಡಲಾಗುತ್ತಿದ್ದು ಕನ್ನಡವನ್ನು ಕಡೆಗಣಿಸಲಾಗುತ್ತಿದೆ. ಹೀಗೆ ಮುಂದುವರೆದರೆ ಕನ್ನಡಿಗರು ಪ್ರತ್ಯೇಕವಾಗಿ “ದುರ್ಗಾತಾಯಿ ಓಟ” ಎಂದು ಮಾಡಬೇಕಾಗುತ್ತದೆ ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.


Gadi Kannadiga

Leave a Reply