ssಸವದತ್ತಿ ೧೫: “ಭಾರತದ ಪ್ರಥಮ ಪ್ರಧಾನಿಯವರಾದ ಪಂಡಿತ ಜವಾಹರಲಾಲ್ ನೆಹರುರವರಿಗೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ, ಮಕ್ಕಳನ್ನು ಅವರು ತುಂಬಾ ಇಷ್ಟಪಡುತ್ತಿದ್ದರು, ಆದ್ದರಿಂದ ಮಕ್ಕಳೂ ಸಹ ಇವರನ್ನು ಪ್ರೀತಿಯಿಂದ ಚಾಚಾ ಎಂದು ಕರೆಯುತ್ತಿದ್ದರು, ಮಕ್ಕಳ ಮೇಲಿನ ಅವರ ಅಪಾರವಾದ ಪ್ರೀತಿಯ ಸವಿನೆನಪಿಗಾಗಿ ತಮ್ಮ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲು ಹೇಳಿದರು” ಎಂದು ಶಿಕ್ಷಕ ಎನ್.ಎನ್.ಕಬ್ಬೂರ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಸ್ಥಳೀಯ ಸ.ಕಿ.ಪ್ರಾ ಕನ್ನಡ ಶಾಲೆ ನಂ-೬ ಸವದತ್ತಿಯಲ್ಲಿ ಮಕ್ಕಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಕ್ಕಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಕ್ಕಳ ಮನಸ್ಸು, ಅವರ ನಿಷ್ಕಲ್ಮ಼ಶವಾದ ಪ್ರೀತಿಯನ್ನು ಶಿಕ್ಷಕ ಮತ್ತು ಪಾಲಕರಾದ ನಾವು ಅರಿತುಕೊಂಡು ಮಕ್ಕಳಿಗೆ ಬೇಕಾದ ಶಿಕ್ಷಣ ಒದಗಿಸಬೇಕು ಎಂದರು.
ಮಕ್ಕಳಿಗಾಗಿ ಕಪ್ಪೆ ಜಿಗಿತ ಸ್ಫರ್ದೆ, ಓಟದ ಸ್ಫರ್ದೆ, ಮುಜಿಕಲ್ ಚೇರ್ ಆಟಗಳನ್ನು ಆಡಿಸಲಾಯಿತು. ಸ್ಫರ್ದೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನಗಳನ್ನು ನೀಡಲಾಯಿತು. ನಂತರ ಸಹಿ ಹಂಚಿ ಸಂಭ್ರಮಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕಿ ಎಮ್.ಆರ್.ಫಂಡಿ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಅಡುಗೆ ಸಿಬ್ಬಂದಿ, ಮಕ್ಕಳು ಮತ್ತು ಪಾಲಕರು ಇದ್ದರು.
Gadi Kannadiga > Local News > ನೆಹರು ದೇಶಕ್ಕೆ ಪ್ರಧಾನಿಯಾದರೂ, ಮಕ್ಕಳಿಗೆ ಮಾತ್ರ ಪ್ರೀತಿಯ ಚಾಚಾ : ಶಿಕ್ಷಕ ಕಬ್ಬೂರ
More important news
ವ್ಯಕ್ತಿ ನಾಪತ್ತೆ
30/01/2023
ನೇಕಾರರಿಗೆ ವಿಶೇಷ ಪ್ಯಾಕೇಜ್
30/01/2023
ಫ.೧ ರಂದು ಮಡಿವಾಳ ಮಾಚಿದೇವ ಜಯಂತಿ ಉತ್ಸವ
27/01/2023
ಜ.೨೮ ರಂದು ಸವಿತಾ ಮಹರ್ಷಿ ಜಯಂತಿ ಉತ್ಸವ
27/01/2023